ತುಮಕೂರಿನಲ್ಲಿ ಚಿಕಿತ್ಸೆಗಾಗಿ ಪರದಾಡಿದ ಗರ್ಭಿಣಿ, ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಹೆರಿಗೆ, ಮಗು ಸಾವು

By Suvarna News  |  First Published Feb 13, 2023, 12:29 PM IST

ಹೆರಿಗೆ ಕಾರ್ಡ್ ಇಲ್ಲ ಅನ್ನೋ ಕಾರಣಕ್ಕೆ ಚಿಕಿತ್ಸೆ ಸಿಗದೆ ಅವಳಿ ಮಕ್ಕಳಿಗೆ ಜನ್ಮ ನೀಡುವ  ಸಂದರ್ಭದಲ್ಲೇ ಗರ್ಭಿಣಿ ಸಾವನಪ್ಪಿದ ಘಟನೆಯ ಕಹಿ ಮರೆಯಾಗುವ ಮುನ್ನವೇ ತುಮಕೂರಿನಲ್ಲಿ ಮತ್ತೊಂದು ಚಿಕಿತ್ಸಾಘಾತ ಘಟನೆಯೊಂದು ನಡೆದಿದೆ. 


ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್  

ತುಮಕೂರು (ಫೆ.13): ಹೆರಿಗೆ ಕಾರ್ಡ್ ಇಲ್ಲ ಅನ್ನೋ ಕಾರಣಕ್ಕೆ ಚಿಕಿತ್ಸೆ ಸಿಗದೆ ಅವಳಿ ಮಕ್ಕಳಿಗೆ ಜನ್ಮ ನೀಡುವ  ಸಂದರ್ಭದಲ್ಲೇ ಗರ್ಭಿಣಿ ಸಾವನಪ್ಪಿದ ಘಟನೆಯ ಕಹಿ ಮರೆಯಾಗುವ ಮುನ್ನವೇ ತುಮಕೂರಿನಲ್ಲಿ ಮತ್ತೊಂದು ಚಿಕಿತ್ಸಾಘಾತ ಘಟನೆಯೊಂದು ನಡೆದಿದೆ. ತುಮಕೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಸಿಗದೆ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗರ್ಭಿಣಿಗೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗಿದೆ . ಜನಿಸಿದ ಗಂಡು ಕೂಸು ಮೃತ ಪಟ್ಟರೆ , ತಾಯಿ ಸ್ಥಿತಿ ಚಿಂತಾಜನಕವಾಗಿದೆ . ಹೆರಿಗೆ ನೋವಿಗೆ ತುತ್ತಾದ ಮಹಿಳೆಗೆ ಸಕಾಲದಲ್ಲಿ ವೈದ್ಯ ನೆರವು ಸಿಗದೇ , ಅಲ್ಲಿಂದಿಲ್ಲಿಗೆ ಎಂದು ಎರಡು ದಿನ ಅಲೆದಾಡಿದ್ದೇ ಇದಕ್ಕೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ.

Tap to resize

Latest Videos

ಸಾಫ್ಟ್‌ವೇರ್‌ ದಂಪತಿಯ ದುರಂತ ಅಂತ್ಯ: ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣದ ಅರ್ಪಿತಾ , ಹೆರಿಗೆಗಾಗಿ ಶಿರಾ ಸರಕಾರಿ ಆಸ್ಪತ್ರೆಗೆ ಹೋಗಿದ್ದರು . ಹೆಚ್ಚಿನ ಚಿಕಿತ್ಸೆಗೆ ಶುಕ್ರವಾರ ಬೆಳಗ್ಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ . ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ವೈದ್ಯರು ಚಿಕಿತ್ಸೆ ನೀಡಿ ಶನಿವಾರ ಹೆಚ್ಚಿನ ಚಿಕಿತ್ಸೆ ನೆಪ ಹೇಳಿ ಬೆಂಗಳೂರಿನ ವಾಣಿವಿಲಾಸ್‌ಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.

ವೈದ್ಯರು ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ: ಸಚಿವ

ಅದರಂತೆ ತುಮಕೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ಅರ್ಪಿತಾ 1 ಕೆಜಿ 700 ಗ್ರಾಂ ತೂಕದ ಗಂಡು ಮಗುವಿಗೆ ಜನ್ಮನೀಡಿದ್ದು ಮಗು ಮೃತ ಪಟ್ಟಿದೆ . ಅರ್ಪಿತಾ ಅವರನ್ನು ಆಂಬ್ಯುಲೆನ್ಸ್ ಚಾಲಕ ನೆಲಮಂಗಲ ಆಸ್ಪತ್ರೆಗೆ ಕರೆತಂದಿದ್ದಾರೆ .ವೈದ್ಯರು ತುರ್ತು ಚಿಕಿತ್ಸೆ ನೀಡಿ ಬೆಂಗಳೂರಿಗೆ ಕಳುಹಿಸಿದ್ದಾರೆ .

click me!