ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ಮೂರು ಜೋಡಿಗಳು ಲೋಕ ಅದಾಲತ್‌ನಲ್ಲಿ ಒಂದಾದರು!

By Kannadaprabha News  |  First Published Feb 13, 2023, 11:53 AM IST

ನಗರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದೂರಾಗಿದ್ದ ಮೂರು ಜೋಡಿಗಳು ಒಂದಾಗಿವೆ. ಧಾನ ಸಿವಿಲ್‌ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಬಿ.ರವಿಕುಮಾರ ವಿರುದ್ಧ ಮಂಗಳಾ ಹಾಗೂ ಎಲ್‌.ಸುನಿಲ್‌ಕುಮಾರ ವಿರುದ್ಧ ಅಂಬಿಕಾ ಪ್ರಕರಣ ದಾಖಲಿಸಿದ್ದರು.


ಹೊಸಪೇಟೆ (ಫೆ.13) : ನಗರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದೂರಾಗಿದ್ದ ಮೂರು ಜೋಡಿಗಳು ಒಂದಾಗಿವೆ.

ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಬಿ.ರವಿಕುಮಾರ ವಿರುದ್ಧ ಮಂಗಳಾ ಹಾಗೂ ಎಲ್‌.ಸುನಿಲ್‌ಕುಮಾರ ವಿರುದ್ಧ ಅಂಬಿಕಾ ಪ್ರಕರಣ ದಾಖಲಿಸಿದ್ದರು. 2ನೇ ಅಪರ ಸಿವಿಲ್‌ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮುಕ್ತಾಬಾಯಿ ಬಂಗಾಳೆ ವಿರುದ್ಧ ಲಕ್ಷ್ಮಿಕಾಂತ ಹೆಬ್ಬಾರ್‌ ಪ್ರಕರಣ ದಾಖಲಿಸಲಾಗಿತ್ತು. ಮೂರು ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು. ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೇಮಲತಾ.ಬಿ.ಹುಲ್ಲೂರ, 2ನೇ ಅಪರ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಸಂಜೀವಕುಮಾರ.ಜಿ ಹಾಗೂ ನ್ಯಾಯಾವಾದಿಗಳಾದ ಕರುಣಾನಿಧಿ, ಎಸ್‌.ವಿ, ಕೆಸಿಬಿ, ಬಿವಿಪಿ, ರಂಜೀತ್‌ ಸಿಂಗ್‌, ಹಾಜಿ ರಾಫಿಯಾ ಜಬೀನ್‌, ಆಡಳಿತ ಸಹಾಯಕ ಎಸ್‌.ಬಿ.ಕಮತರ ಇದ್ದರು.

Latest Videos

undefined

ಧಾರವಾಡ: ಕಾನೂನಿಗೆ ಗೌರವ ಕೊಡಬೇಕು, ಹೆದರುವ ಅಗತ್ಯವಿಲ್ಲ: ನ್ಯಾ.ಕೆ.ಜಿ. ಶಾಂತಿ

ಲೋಕ ಅದಾಲತ್‌ನಲ್ಲಿ 813 ಪ್ರಕರಣಗಳು ಇತ್ಯರ್ಥ

 ಹರಪನಹಳ್ಳಿ:\ ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌(National Lok Adalat)ನಲ್ಲಿ ಒಟ್ಟು 943 ಪ್ರಕರಣಗಳಲ್ಲಿ 813 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ನ್ಯಾಯಾದೀಶರುಗಳಾದ ಎಂ. ಭಾರತಿ(Justic M Bharati), ಮತ್ತು ಫಕ್ಕೀರವ್ವ ಕೆಳಗೇರಿ(Phakiravva Kelageri) ನೇತೃತ್ವದಲ್ಲಿ ನಡೆದ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್‌ ಬೌನ್ಸ್‌ ,ಬ್ಯಾಂಕ್‌ ಸಾಲ ವಸೂಲಿ,ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ,ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು,ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಒಟ್ಟು 435 ಪ್ರಕರಣಗಳ ಪೈಕಿ 338 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಒಟ್ಟು .1.26 ಕೋಟಿ ಮತ್ತು ಬ್ಯಾಂಕ್‌ ದಾವ ಪೂರ್ವ ಪ್ರಕರಣಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು.

ಕಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಒಟ್ಟು 508 ಪ್ರಕರಣಗಳ ಪೈಕಿ 475 ಪ್ರಕಣಗಳನ್ನು ಇತ್ಯರ್ಥ ಪಡೆಸಿ ಒಟ್ಟು .52 ಲಕ್ಷ ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು.ಉಭಯ ನ್ಯಾಯಾಲದಲ್ಲಿ ಒಟ್ಟು 813ಪ್ರಕರಣಗಳು ಮತ್ತು .1.78 ಕೋಟಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಾಕಿ ಇದ್ದ ವಿವಾಹ ವಿಚ್ಚೇದನ ಪ್ರಕರಣದಲ್ಲಿ ಸತಿ ಪತಿಗಳಿಬ್ಬರ ಮನವೊಲಿಸಿ ಪುನಃ ಒಂದು ಗೂಡಿಸುವಲ್ಲಿ ನ್ಯಾಯಾಧೀಶರು ಸಫಲರಾದರು.

ಲೋಕಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ,ಹಿರಿಯ ಮತ್ತು ಹಿರಿಯ ನ್ಯಾಯವಾದಿಗಳಿಗೆ, ಹಾಗೂ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡ ಎಲ್ಲ ಕಕ್ಷಿದಾರರಿಗೆ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ಅಭಿನಂಧನೆ ಸಲ್ಲಿಸಿದರು.

ರಾಷ್ಟ್ರೀಯ ಲೋಕ ಅದಾಲತ್‌: ದಾಖಲೆ 14.8 ಲಕ್ಷ ಕೇಸ್‌ ಇತ್ಯರ್ಥ

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ,ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ,ಕಾರ್ಯದರ್ಶಿ.ಕೆ.ಆನಂದ,ಜಂಟಿ ಕಾರ್ಯದರ್ಶಿ ಹೂಲೇಪ್ಪ,ಖಜಾಂಚಿ ರೇಣುಕಾ ಮೇಟಿ,ಸರ್ಕಾರಿ ಅಭಿಯೋಜಕ ಎನ್‌. ಮಿನಾಕ್ಷಿ, ನಿರ್ಮಲ,ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್‌ ಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ಜಗದಪ್ಪ, ಹಿರಿಯ ವಕೀಲಟಿ. ವೆಂಕಟೇಶ್‌, ಬಿ. ಹಾಲೇಶ್‌, ಎಸ್‌.ರುದ್ರಮನಿ, ಕೆ. ಪ್ರಕಾಶ್‌ ,ಬಿ,ಗೋಣಿಬಸಪ್ಪ, ಕೆ.ಎಸ್‌.ಮಂಜ್ಯಾನಾಯ್ಕ, ಮುತ್ತಿಗಿ. ರೇವಣಸಿದ್ದಪ್ಪ, ಎಂ.ಮೃಂತಜಯ್ಯ, ಇದ್ಲಿ ರಾಮಪ್ಪ, ದೇವರಾಜ್‌,ನಂದೀಶ್‌,ಎಸ್‌.ತಿಪ್ಪೇಸ್ವಾಮಿ, ಎಸ್‌.ಜಾಕೀರ್‌,ಬಿ.ಬಸವರಾಜ್‌, ಜಿ.ಹಾಲೇಶ್‌,ಓ.ತಿರುಪತಿ, ಕೆ.ಕೊಟ್ರೇಶ್‌,ಎ.ಕೆ. ರಾಜಪ್ಪ, ಸಿ. ರಾಜಪ್ಪ, ಕೆ.ನಾಗರಾಜ್‌, ಸಿ. ಜಾತಪ್ಪ , ಜೆ.ಸೀಮಾ, ದ್ರಾಕ್ಷಯಣಮ್ಮ, ಬಿ.ಸಿದ್ದೇಶ್‌, ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಇತರರು ಇದ್ದರು.

click me!