ತುಮಕೂರಿನಲ್ಲಿ ನಾಪತ್ತೆಯಾದ ಎಟಿಎಂ ಮಶಿನ್ ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಪತ್ತೆಯಾಗಿದೆ. ಅಡಕೆ ತೋಟವೊಂದರಲ್ಲಿ ಮಶಿನ್ ಸಿಕ್ಕಿದೆ.
ದಾಬಸ್‌ಪೇಟೆ (ಜ.21): ಕಳ್ಳತನವಾಗಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೆರೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎಟಿಎಂ ದಾಬಸ್‌ಪೇಟೆಯ ಸೋಂಪುರ ಹೋಬಳಿಯ ಬರಗೇನಹಳ್ಳಿ ಗ್ರಾಮದ ರೈತ ಪುಟ್ಟಗಂಗಯ್ಯನ ಅಡಿಕೆ ತೋಟದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಮಾಲೀಕ ಪುಟ್ಟಗಂಗಯ್ಯ ಬೆಳಗ್ಗೆ ತೋಟಕ್ಕೆ ಹೋದಾಗ ಅಲ್ಲಿದ್ದ ಯಂತ್ರವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದಾಗ ಅದು ಎಟಿಎಂ ಮಿಷನ್ ಎಂದು ತಿಳಿದು ಬಂದಿದೆ. ಇನ್ನೂ ಹೆಚ್ಚಿನ ಪರಿಶೀಲನೆ ಮಾಡಲು ಮುಂದಾದಾಗ ಜ.18ರಂದು ತುಮಕೂರಿನಲ್ಲಿ ಕದ್ದ ಯಂತ್ರವಾಗಿರಬಹುದು ಎಂದು ಶಂಕಿಸಿದ್ದಾರೆ.
ಎಟಿಎಂ ಮಷಿನ್ ಹೊತ್ತೊಯ್ದ ಕಳ್ಳರು! ಅದು ಹೇಗೆ ಅಂತೀರಾ..? ಈ ವಿಡಿಯೋ ನೋಡಿ..!
ಎಟಿಎಂ ಮಿಷನ್ ತಂದವರು ನೀಲಗಿರಿ ತೋಪಿನಲ್ಲಿ ಜಾಗದಲ್ಲಿ ಇಳಿಸಿದ್ದು ಅದು ಜಾಗ ಸರಿ ಇಲ್ಲದ ಕಾರಣ ರಾತ್ರಿಯಲ್ಲಿ ಸುಮಾರು 300 ಅಡಿ ದೂರ ಇರುವ ಅಡಿಕೆ ತೋಟಕ್ಕೆ ಹೋಗಿ ಅಲ್ಲಿ ಕಂಬದ ಕಂಬಿ ಕಿತ್ತು ತದ ನಂತರ ಅಲ್ಲಿ ಮಿಷನ್ ರೂಮ್‌ನ ಬೀಗ ಹೊಡೆದು ಅಲ್ಲಿ ವಿದ್ಯುತ್‌ನ್ನು ಎಟಿಎಂ ಮಿಷನ್ ಮೇಲೆ ಇಟ್ಟು ಕರೆಂಟ್ ಕಟ್ಟಿಂಗ್ ಮಿಷನ್‌ನಿಂದ ಓಪನ್ ಮಾಡಿ ನಂತರ ಅದರಲ್ಲಿದ್ದ 85 ಸಾವಿರ ತೆಗೆದುಕೊಂಡು ಹೋಗಿದ್ದಾರೆ. ಹಾಗೂ ತುಮಕೂರು ಗ್ರಾಮಾಂತರ ಠಾಣೆಗೆ ಎಟಿಎಣ ಮಿಷಿನ್‌ನನ್ನು ಟಾಟಾ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು.
ನೆಲಮಂಗಲ ವೃತ್ತ ನೀರಿಕ್ಷಕ ಎಂ.ಆರ್.ಹರೀಶ್, ದಾಬಸ್‌ಪೇಟೆ ಠಾಣೆಯ ಆರಕ್ಷಕ ಉಪನಿರೀಕ್ಷಕ ಡಿ.ಆರ್. ಮಂಜುನಾಥ, ತ್ಯಾಮಗೊಂಡ್ಲು ಠಾಣೆಯ ಆರಕ್ಷಕ ಉಪನಿರೀಕ್ಷಕ ಮೋಹನ್‌ಕುಮಾರ್, ತುಮಕೂರು ಗ್ರಾಮಾಂತರ ಆರಕ್ಷಕ ಉಪ ನಿರೀಕ್ಷಕ ಲಕ್ಷ್ಮಯ್ಯ ಇದ್ದರು. ಘಟನೆಗೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.