ಕೊರೋನಾ ಹಾಟ್‌ಸ್ಪಾಟ್ ತುಮಕೂರು : ಹಳ್ಳಿಗಳ ತುಂಬೆಲ್ಲಾ ಸೋಂಕಿತರು

Kannadaprabha News   | Asianet News
Published : May 18, 2021, 10:48 AM IST
ಕೊರೋನಾ ಹಾಟ್‌ಸ್ಪಾಟ್ ತುಮಕೂರು : ಹಳ್ಳಿಗಳ ತುಂಬೆಲ್ಲಾ ಸೋಂಕಿತರು

ಸಾರಾಂಶ

ತುಮಕೂರು ಈಗ ಕೊರೋನಾ ಹಾಟ್‌ಸ್ಪಾಟ್ ಹಳ್ಳಿಗಳಲ್ಲಿಯೂ ಇದ್ದಾರೆ ನೂರಾರು ಕೊರೋನಾ ಸೋಂಕಿತರು ಆತಂಕ ಸೃಷ್ಟಿಸಿದ ಚೀನಿ ವೈರಸ್‌  -  ತತ್ತರಿಸಿದ ಜನ

ತುಮಕೂರು (ಮೇ.18): ಭವಿಷ್ಯದ ಉಪನಗರಿ ತುಮಕೂರು ಈಗ ಕೊರೋನಾ ಹಾಟ್‌ಸ್ಪಾಟ್ ಆಗಿದೆ.  ಅತಿ ಹೆಚ್ಚು ಕೆಸ್‌ ಬರುತ್ತಿರುವ ಮೊದಲ ಐದು ಜಿಲ್ಲೆಗಳಲ್ಲಿ ತುಮಕೂರು ಸ್ಥಾನ ಪಡೆದಿದೆ. 

ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು  ಕೇಸುಗಳು  ಹೊಸದಾಗಿ ಬರುತ್ತಿವೆ. ಸದ್ಯ ತುಮಕೂರಿನಲ್ಲಿ ಬರೋಬ್ಬರಿ 20 ಸಾವಿರ  ಸಕ್ರೀಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 750ಕ್ಕೂ ಹೆಚ್ಚು ಮಂದಿ ಡೆಡ್ಲಿ ವೈರಸ್‌ನಿಂದ ಅಸುನೀಗಿದ್ದಾರೆ.  ಪ್ರತೀ ಮನೆಯಲ್ಲೂ ಕೊರೋನಾ ಸೋಂಕಿತರು ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. 

ಮೊದಲ ಅಲೆಯಲ್ಲಿ ತುಮಕೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸೋಂಕು  ಬಂದಿರಲಿಲ್ಲ.  ಆದರೆ ಎರಡನೆ ಅಲೆ ರಾಕೇಟ್ ವೇಗದಲ್ಲಿ ನುಗ್ಗುತ್ತಿದ್ದು  ಗಣನೀಯ ಎರಿಕೆ ಕಂದಿದೆ. 

ತುಮಕೂರು : ಗುಣವಾದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಭಾಗ್ಯ ಸಿಗ್ತಿಲ್ಲ

ಪ್ರತಿ ದಿನ ಸರಾಸರಿ 18 ಮಂದಿ ಡೆಡ್ಲಿ ವೈರಸ್‌ಗೆ ಸಾವನ್ನಪ್ಪಿತ್ತಿದ್ದಾರೆ. ಮನೆಯಲ್ಲಿ ಕ್ವಾರಂಟೈನ್‌  ಇದ್ದವರೂ ಗುಣವಾಗದೇ ಆಸ್ಪತ್ರೆಗಳತ್ತ ಹೋಗುತ್ತಿದ್ದಾರೆ.  ಒಟ್ಟಾರೆಯಾಗಿ ಇಡೀ ಜಿಲ್ಲೆ ಒಂದರ್ಥದಲ್ಲಿ ಆತಮಕದಲ್ಲಿ ಮುಳುಗಿದೆ. 

ಗ್ರಾಮೀಣ ಭಾಗದಲ್ಲಿ ಕೊರೋನಾ ವೈರಸ್‌ ನುಗ್ಗಿರುವ ಪರಿಯನ್ನು ಗಮನಿಸಿದರೆ ಯಾರಿಗಾದರೂ ಆತಂಕ ಕಾಡದೆ ಇರದು. ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಪ್ರಮಾಣವೇ ಅತ್ಯಧಿಕವಾಗುತ್ತಿದೆ. 

ಬೆಂಗಳೂರಿನಂತೆ ಇಲ್ಲಿನ ರುದ್ರಭೂಮಿಗಳಲ್ಲಿಯೂ ಕ್ಯೂ ಕಾಣಿಸುತ್ತದೆ. ನಿರಂತರವಾಗಿ ಕೊರೋನಾ ಹೊಡೆತದಿಮದ ಆರ್ಥಿಕ ಹಿನ್ನಡೆಯೂ ಆಗುತ್ತಿದೆ. 

ಆರೋಗ್ಯಾಧಿಕಾರಿಗಳು ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ