ಸಾರ್ಸ್ ಬಂದಾಗ ಸಾವಿನ ಪ್ರಮಾಣ ಶೇ. 10 ರಷ್ಟಿತ್ತು| ಕೊರೋನಾ ಶೇ. 3.1 ಅಷ್ಟೇ ಇದೆ| 60 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ| ಕೊರೋನಾ ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಮಾಹಿತಿ ಕಲೆ ಹಾಕಲಾಗುತ್ತಿದೆ|
ದಾವಣಗೆರೆ(ಮೇ.09): ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೋನಾ ಸ್ಯಾಂಪಲ್ ಚೆಕ್ ಆಗಿದೆ. ಈಗಷ್ಟೆ ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ದಿನಕ್ಕೆ ನಾಲ್ಕರಿಂದ ಐದು ಸಾವಿರ ಜನರನ್ನ ಪರೀಕ್ಷೆ ಮಾಡಲಾಗುತ್ತಿದೆ. ಕೊರೋನಾ ಬಗ್ಗೆ ಜನರು ಆತಂಕ, ಭಯ ಬಿಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ರೋಗಾಣು ರೀತಿಯಲ್ಲೇ ಕೊರೋನಾ ರೋಗಾಣು ಕೂಡ. ಯಾವುದೇ ವೈರಸ್ ಮನುಷ್ಯನನ್ನು ಸೋಲಿಸಿಲ್ಲ. ಕೊರೋನಾ ಮಾರಕ ಕಾಯಿಲೆ ಅಂತಾ ಭಯ ಪಡುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕೊರೋನಾ ಸಮರಕ್ಕೆ ಸಜ್ಜಾಗಿ ಎಂದು ಕರೆಕೊಟ್ಟ ದಾವಣಗೆರೆ ಡಿಸಿ
ಸಾರ್ಸ್ ಬಂದಾಗ ಸಾವಿನ ಪ್ರಮಾಣ ಶೇ. 10 ರಷ್ಟಿತ್ತು. ಕೊರೋನಾ ಶೇ. 3.1 ಅಷ್ಟೇ ಇದೆ. 60 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಚಿಕ್ಕ ಮಕ್ಕಳು ಹಾಗೂ ವೃದ್ಧರು ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ, ಕೊರೋನಾ ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.