ಮಧುಗಿರಿ ಉಪವಿಭಾಗದ 4 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಧುಗಿರಿ : ಮಧುಗಿರಿ ಉಪವಿಭಾಗದ 4 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಇಲ್ಲಿನ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ತಾಲೂಕು ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಸಮುದಾಯದ ಮುಖಂಡರ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಧುಗಿರಿ ಉಪವಿಭಾಗಕ್ಕೆ ಸೇರಿದ ಶಿರಾ, ಪಾವಗಡ,ಕೊರಟೆಗೆರೆ ಮತ್ತು ಮಧುಗಿರಿ ತಾಲೂಕುಗಳು ಅತ್ಯಂತ ಹಿಂದುಳಿದಿದ್ದು, ಈ ಪ್ರದೇಶದ ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾದಾಗ ಮಾತ್ರ ಅಭಿವೃದ್ಧಿ ಕಾಣಲಿವೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಈ ಭಾಗಕ್ಕೆ ಎತ್ತಿನಹೊಳೆ ಮೂಲಕ ನೀರು ಹರಿಸಲು ಕ್ರಮ ಕೈಗೊಂಡು ಈ ಯೋಜನೆಗೆ 13 ಸಾವಿರ ಕೋಟಿ ಮೀಸಲಿಟ್ಟಿದ್ದು, ಇಂದು ಅದು 26 ಸಾವಿರ ಕೋಟಿಗೆ ಏರಿಕೆ ಕಂಡಿದೆ. ಯಾವುದೇ ಸರ್ಕಾರ ಬಂದರೂ ಇಷ್ಟೋತ್ತಿಗೆ ಯೋಜನೆ ತ್ವರಿತವಾಗಿ ಸಾಗಬೇಕಿತ್ತು. ಆದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ನಿಗದಿತ ವೇಳೆಗೆ ಮುಗಿಯದೆ ಆಮೆ ನಡಿಗೆಯಲ್ಲಿದೆ ಎಂದು ಲೇವಡಿ ಮಾಡಿದರು.
ಹಿರಿಯ ಮುಖಂಡ ಬಿಜೆಪಿಗೆ ರಾಜೀನಾಮೆ : ಕಾಂಗ್ರೆಸ್‌ಗೆ ಸೇರ್ಪಡೆ
ಈ ಸರ್ಕಾರ ಕೆಲವೇ ತಾಲೂಕುಗಳಿಗೆ ಹೆಚ್ಚು ನೀರು ಹರಿಸುವ ಹುನ್ನಾರ ನೆಡಸುತ್ತಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಮಿಷನ್ ಸರ್ಕಾರವಾಗಿದೆ. ಈ ಸಲ ಬಿಜೆಪಿಗೆ 65ಕ್ಕಿಂತ ಹೆಚ್ಚು ಸ್ಥಾನಗಳು ಬರುವುದಿಲ್ಲ,ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಅತಂತ್ರ ವಾತವರಣವಿದೆ ಎಂದರು. ಕಳೆದ 5 ವರ್ಷದಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಕ್ಷೇತ್ರದ ಜನರ ಭವಿಷ್ಯ ರೂಪಿಸುವ ಕೆ.ಎನ್.ರಾಜಣ್ಣನಿಗೆ ಮತ ನೀಡಿ ಶಿರಾ ಮತ್ತು ಮಧುಗಿರಿಯಲ್ಲಿ ನಮ್ಮಿಬ್ಬರನ್ನು ಗೆಲ್ಲಿಸಿ, ಈ ಎರೆಡು ಕ್ಷೇತ್ರಗಳಿಗೆ ಎತ್ತಿನಹೊಳೆ ನೀರು ಹರಿಸಿ ನಾವಿಬ್ಬರು ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಎಂಎಲ್‌ಸಿ ರಾಜೇಂದ್ರ ನನಗೆ ಮಗನಿದ್ದಂತೆ ಜಿಲ್ಲೆಯಲ್ಲಿ ಉತ್ತಮ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಯಚಂದ್ರ ಕೊಂಡಾಡಿದರು.
Karnataka election 2023: ಕುಂದಗೋಳ ಕಾಂಗ್ರೆಸ್-ಬಿಜೆಪಿ ಟಿಕೆಟ್ ಇನ್ನೂ ಕಗ್ಗಂಟು
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಮಧುಗಿರಿ ಇತಿಹಾಸದಲ್ಲಿ ಯಾವುದೇ ಶಾಸಕರು ಮಾಡದ ಕೆಲಸ ಜಯಚಂದ್ರ ಮಾಡಿದ್ದು, ಬಿಜೆಪಿಯವರು ಲಂಚಕ್ಕಾಗಿ ಕೈಚಾಚಿ ಮಧುಗಿರಿ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ. ಅದೇ ಪಾಪದ ಹಣವನ್ನು ಮನೆ ಮನೆಗೆ ಹಂಚುತ್ತಿದ್ದಾರೆ. ಹಣವಿದ್ದರೆ ಮಧುಗಿರಿ ಗೆಲ್ಲಬಹುದು ಎಂಬುದನ್ನು ಕ್ಷೇತ್ರದ ಮತದಾರರು ಸುಳ್ಳು ಮಾಡಬೇಕು. ಕಳೆದ ಬಾರಿ ಯಾವ ಹೆಣ್ಣುಮಕ್ಕಳು ನನ್ನ ಸೋಲಿಸಿದ್ದರು ಅದೇ ಹೆಣ್ಣಮಕ್ಕಳು ಈ ಸಲ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗಲಿದ್ದು, ಇಲ್ಲಿನ ಎಲ್ಲ ಇಲಾಖೆಗಳಿಗೆ ಬೇಕಿರುವ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸಿ ನಿರುದ್ಯೋಗಿ ಕೈಗಳಿಗೆ ಉದ್ಯೋಗ ಒದಗಿಸಲು ತಾಲೂಕನ್ನು ಸಜ್ಜುಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಲ್‌ಸಿ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ನಾಗೇಶ್‌ಬಾಬು,ಜಿ.ಎನ್.ಮೂರ್ತಿ,ಜಿ.ಎಸ್.ರವಿ,ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವೆಂಕಟೇಗೌಡ,ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು,ಜಿ.ಪಂ.ಮಾಜಿ ಸದಸ್ಯ ಬಿ.ವಿ.ನಾಗರಾಜು, ಚೌಡಪ್ಪ,ತಾ.ಪಂ.ಮಾಜಿ ಅಧ್ಯಕ್ಷ ಕೆ.ಮಹಾಲಿಂಗಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ತಾಪಂ ಸದಸ್ಯ ರಾಜು.ಸುವರ್ಣಮ್ಮ, ಕಿರುತೆರೆ ಕಲಾವಿದ ಹÜನುಮಂತೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂಚಪ್ಪ, ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್, ಮುಖಂಡರುಗಳಾದ ಗುಟ್ಟೆರಮೇಶ್, ಡಿ.ಬಿ.ಆಶಾ, ಕಾರ್ಪೇನಹಳ್ಳಿ ಅಶೋಕ್, ಗೋವಿಂದಯ್ಯ, ಹೊನ್ನಾಪುರ ದೀಪು ಸೇರಿದಂತೆ ಸಮುದಾಯದವರಿದ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಮೂಲಕ ನೀರು ಹರಿಸಲು 13 ಸಾವಿರ ಕೋಟಿ ರು.ಮೀಸಲಿಟ್ಟಿದ್ದು, ಇಂದು ಅದು 26 ಸಾವಿರ ಕೋಟಿ ರು.ಗೆ ಏರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಯೋಜನೆ ಎಂದೋ ಜಾರಿಯಾಗಿರುತ್ತಿತ್ತು. ಬಿಜೆಪಿಯಿಂದಾಗಿ ನೆನೆಗುದಿಗೆ ಬಿದ್ದಂತಾಗಿದೆ
-ಟಿ.ಬಿ ಜಯಚಂದ್ರ, ಮಾಚಿ ಸಚಿವ