ಅಮುಲ್‌ನಂತಹ 10 ಸಂಸ್ಥೆಗಳು ರಾಜ್ಯಕ್ಕೆ ಬಂದರೂ ಕೆಎಂಎಫ್‌ಗೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಅಮುಲ್ ಜೊತೆ ಕೆಎಂಎಫ್‌ನ್ನು ವಿಲೀನ ಮಾಡುವುದಿಲ್ಲ. ಇಂತಹ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ (ಏ.12) : ಅಮುಲ್‌ನಂತಹ 10 ಸಂಸ್ಥೆಗಳು ರಾಜ್ಯಕ್ಕೆ ಬಂದರೂ ಕೆಎಂಎಫ್‌ಗೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಅಮುಲ್ ಜೊತೆ ಕೆಎಂಎಫ್‌ನ್ನು ವಿಲೀನ ಮಾಡುವುದಿಲ್ಲ. ಇಂತಹ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra jarkiholi) ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವಿಷಯದಲ್ಲಿ ಕೆಎಂಎಫ್(KMF) ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ. ಕೇಂದ್ರ ಸರ್ಕಾರದಿಂದ ಇದುವರೆಗೂ ಅಮುಲ್ ಜೊತೆ ಕೆಎಂಎಫ್ ವಿಲೀನ ಮಾಡುವ ಕುರಿತು ಯಾವುದೇ ಪ್ರಸ್ತಾವ ಬಂದಿಲ್ಲ. ಒಂದು ವೇಳೆ ಬಂದರೂ ಅದನ್ನು ನಾವು ತಿರಸ್ಕರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು 10 ವರ್ಷ ಕಳೆದರೂ ನಂದಿನಿಗೆ ನಾವು ಸ್ಪರ್ಧೆ ನೀಡಲಾಗದು: ಅಮುಲ್
ಕೆಎಂಎಫ್ ಯಾವುದೇ ಕಾರಣಕ್ಕೂ ಅಮುಲ್ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ(Amit shah) ಅವರು ಕೆಎಂಎಫ್‌ನ ಬಲವರ್ಧನೆಗಾಗಿ ಮಾರುಕಟ್ಟೆಯನ್ನು ಇನ್ನಷ್ಟುವಿಸ್ತರಿಸಲು ಅಮುಲ್ ಮಾದರಿಯ ತಂತ್ರ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ ಅಷ್ಟೇ. ಆದರೆ, ಇದನ್ನು ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಎಂಎಫ್‌ನ್ನು ಉಳಿಸುವುದು, ಬೆಳೆಸುವುದು ನಮಗೆ ಗೊತ್ತಿದೆ ಎಂದರು.
ಕೆಎಂಎಫ್ ವಾರ್ಷಿಕವಾಗಿ .22 ಸಾವಿರ ಕೋಟಿ ವಹಿವಾಟು ನಡೆಸಿದೆ. ಕೆಎಂಎಫ್ ಮತ್ತು 15 ಜಿಲ್ಲಾ ಹಾಲು ಒಕ್ಕೂಟಗಳಿಂದ ವಾರ್ಷಿಕವಾಗಿ ಅಂದಾಜು .200 ಕೋಟಿ ಲಾಭದ ನಿರೀಕ್ಷೆ ಮಾಡಲಾಗಿದೆ. ‘ನಂದಿನಿ’ ನಮ್ಮೆಲ್ಲರ ಹೆಮ್ಮೆಯಾಗಿದ್ದು, ನಂದಿನಿಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ದಯವಿಟ್ಟು ಯಾರೂ ಕೂಡ ನಂದಿನಿ-ಅಮುಲ್ ವಿಚಾರದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಬೇಡಿ ಎಂದು ಅವರು ಮನವಿ ಮಾಡಿದರು.
Amul Vs Nandini: ಅಮುಲ್‌ಗೆ ಬಿಟ್ಟಿ ಬಿಲ್ಡಪ್ ಕೊಟ್ಟು, ಕೆಎಂಎಫ್‌ನ ಶ್ರೇಷ್ಠತೆ, ಮೌಲ್ಯವನ್ಯಾಕೆ ಕಳೆಯುತ್ತಿದ್ದೀರಿ?