ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ

By Kannadaprabha News  |  First Published Nov 20, 2019, 8:36 AM IST

ಮಧುಗಿರಿ ತಾಲೂಕಿನ ಶಿಕ್ಷಕರೊಬ್ಬರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಪತ್ನಿ ಹಾಗೂ ಮಕ್ಕಳೊಂದಿಗೆ ಜಲ್ಲಿ, ಮಣ್ಣು ತೆಗೆದುಕೊಂಡು ರಸ್ತೆಯಲ್ಲಿದ್ದ ಹೊಂಡಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ.


ತುಮಕೂರು(ನ.20): ಮಧುಗಿರಿ ತಾಲೂಕಿನ ಪರವರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪಣಿಂದ್ರನಾಥ್‌ ಹಾಗೂ ಇಂದ್ರಮ್ಮ ದಂಪತಿ ತಮ್ಮ ಮಕ್ಕಳಾದ ಸಿರಿ ಮತ್ತು ಕಲ್ಯಾಣ್‌ ಅವರು ಮಧುಗಿರಿ -ಹಿಂದೂಪುರ ರಸ್ತೆ ಮಾರ್ಗದಲ್ಲಿ ಬಿದ್ದಿರುವ ಗುಂಡಿಗಳಿಗೆ ಜಲ್ಲಿ -ಮಣ್ಣು ತುಂಬಿ ರಸ್ತೆ ರಿಪೇರಿ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಮಾದರಿ ಶಿಕ್ಷಕರಾಗಿ ಮಾನವೀಯತೆ ತೋರಿದ್ದಾರೆ.

ಇವರ ಈ ಸಮಾಜಿಕ ಕಳಕಳಿಗೆ ಸ್ನೇಹಿತರು, ಹಿತೈಷಿಗಳು ಹಾಗೂ ನಾಗರಿಕರು ಅಭಿನಂದನೆ ಸಲ್ಲಿಸಿದ್ದು, ಈ ದೃಶ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ದಂಪತಿ, ಮಕ್ಕಳ ಕಾರ‍್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest Videos

ಸತ್ತ ಕುರಿಗಾಗಿ ಪತಿ-ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯ

ಶಿಕ್ಷಕ ಪಣಿಂದ್ರನಾಥ್‌ ಮತ್ತು ಪತ್ನಿ ಶಿಕ್ಷಕಿ ಪಿ.ಜಿ.ಇಂದ್ರಮ್ಮ ತಮ್ಮ ಮಕ್ಕಳ ಜೊತೆ ಸೇರಿ ಗುಂಡಿಗಳು ಬಿದ್ದ ರಸ್ತೆಯಲ್ಲಿ ಸಾರ್ವಜನಿಕರು ಚಲಿಸುವಾಗ ಆಯಾ ತಪ್ಪಿ ಬಿದ್ದು ಕೈ ಕಾಲುಗಳಿಗೆ ತೀವ್ರ ಪೆಟ್ಟಾಗಿ ಅಪಘಾತಗಳು ಸಂಭವಿಸುತ್ತಿರುವುದುನ್ನು ಕಣ್ಣಾರೆ ಕಂಡು ಶಾಲೆ ಮುಗಿದ ಬಳಿಕ ಹಿಂದೂಪುರ ರಸ್ತೆ ಮಾರ್ಗದಲ್ಲಿ ಬಿದ್ದಿರುವ ಗುಂಡಿಗಳಿಗೆ ಜಲ್ಲಿ ಕಲ್ಲು -ಮಣ್ಣು ಹಾಕಿ ಮುಚ್ಚುವ ಮೂಲಕ ರಸ್ತೆಗೆ ಕಾಯಕಲ್ಪ ತಂದು ಕೊಟ್ಟಿದ್ದಾರೆ.

undefined

ಯುವತಿಯ ನಗ್ನಗೊಳಿಸಿ ಚಿನ್ನದ ಸರ ದೋಚಿದರು!

ಇವರ ಸಾಮಾಜಿಕ ಬದ್ಧತೆಯನ್ನು ಕಂಡ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಣಿಂದ್ರನಾಥ್‌ ತಾಲೂಕಿನ ಗೊಂದಿಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಪತ್ನಿ ಇಂದ್ರಮ್ಮ ಕೋಡ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ಇಲ್ಲಿನ ಡಿಡಿಪಿಐ ರೇವಣ್ಣಸಿದ್ದಪ್ಪ, ಡಿವೈಪಿಸಿ ರಾಜ್‌ ಕುಮಾರ್‌ ಸೇರಿದಂತೆ ಇಲಾಖೆಯಿಂದ ರಸ್ತೆ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ ಮಾಡಿರುವ ಶಿಕ್ಷಕ ಪಣಿಂದ್ರನಾಥ್‌ ಹಾಗೂ ಪತ್ನಿ ಇಂದ್ರಮ್ಮ ದಂಪತಿಯನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಿದ್ದಾರೆ.

ಚಿಕ್ಕಬಳ್ಳಾಪುರ: ಇವರು ಯಾರಿಗೆ ಒಲಿತಾರೋ, ಜಯ ಅವರದ್ದೇ, ಡೌಟೇ ಬೇಡ!

ಸಚಿವ ಎಸ್‌.ಸುರೇಶ್‌ ಕುಮಾರ್‌ ಅಭಿನಂದನೆ

ರಸ್ತೆ ಗುಂಡಿ ಮುಚ್ಚಿ ರಿಪೇರಿ ಮಾಡಿರುವ ಶಿಕ್ಷಕ ದಂಪತಿಯ ಸಮಾಜಮುಖಿ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಖುದ್ದು ಶಿಕ್ಷಕ ಪಣಿಂದ್ರನಾಥ್‌ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಹಳ್ಳ ಗುಂಡಿ ಮುಚ್ಚಕ್ಕೆ ಆಗಲಿಲ್ಲ, ಆದರೆ ತಾವು ತಮ್ಮ ಕುಟುಂಬಸ್ಥರು ಜನ ಮೆಚ್ಚುವ ಕೆಲಸ ಮಾಡಿದ್ದೀರಾ ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿರುವ ಆಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

ತಾಲೂಕಿನ ಪುರವರ ಗ್ರಾಮದಲ್ಲಿನ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸವಾರರು ಕೈ, ಕಾಲು ಮುರಿದು ಕೊಳ್ಳುತ್ತಿದ್ದರು. ಆದರೂ ಜನರು ಅದನ್ನು ನೋಡಿಕೊಂಡು ಓಡಾಡುತ್ತಿದ್ದರು. ಇದನ್ನು ಮನಗಂಡ ನಾನು, ನನ್ನ ಪತ್ನಿ ಮತ್ತು ಮಕ್ಕಳು ಸೇರಿ ರಸ್ತೆ ಗುಂಡಿ ಮುಚ್ಚಿದ್ದು ಮುಂದೆ ಕೂಡ ರುದ್ರಭೂಮಿ ಸ್ವಚ್ಛತೆ ಅಂದೋಲನ ಮಾಡುತ್ತೇವೆ ಎಂದು ಶಿಕ್ಷಕ ಪಣಿಂದ್ರನಾಥ್‌ ಹೇಳಿದ್ದಾರೆ.

click me!