ಸತ್ತ ಕುರಿಗಾಗಿ ಪತಿ-ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯ

By Kannadaprabha News  |  First Published Nov 20, 2019, 8:20 AM IST

ಸತ್ತ ಕುರಿಗಾಗಿ ಪತಿ- ಪತ್ನಿ ನಡುವೆ ಜಗಳವಾಗಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಿರಾ ತಾಲೂಕಿನ ದಂಪತಿ ಸತ್ತ ಕುರಿಗಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದು, ಇದು ಕೊಲೆಯಲ್ಲಿ ಕೊನೆಗೊಂಡಿದೆ.


ತುಮಕೂರು(ನ.20): ಸತ್ತ ಕುರಿಗಾಗಿ ಗಂಡ-ಹೆಂಡತಿ ನಡುವೆ ನಡೆದ ಜಗಳ ಹೆಂಡತಿಯ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸಮೀಪದ ಕಮಲನಾಯಕನ ತಾಂಡ್ಯದಲ್ಲಿ ನಡೆದಿದೆ. ಶ್ರಾವಂತಿಭಾಯಿ ಗಂಡನಿಂದ ಹತ್ಯೆಯಾದ ಹೆಂಡತಿ.

ಕಣದಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದು, ಕಳೆದ ರಾತ್ರಿ ಗಂಡ-ಹೆಂಡತಿ ಕಾವಲಿಗಾಗಿ ಕಣಕ್ಕೆ ತೆರಳಿದ್ದರು. ರಾತ್ರಿ 12 ಗಂಟೆ ಸುಮಾರಿನಲ್ಲಿ ಸೋಮವಾರ ಸತ್ತು ಹೋಗಿದ್ದ ಕುರಿಯ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಮಾತಿಗೆ ಮಾತು ಬೆಳೆದು ಪತಿ ರಾಜನಾಯ್ಕ್‌ ಶ್ರಾವಂತಿಬಾಯಿಗೆ ಕಪಾಳಕ್ಕೆ ಬಾರಿಸಿದ್ದಾನೆ. ಬಲವಾದ ಪೆಟ್ಟು ಬಿದ್ದು ಶ್ರಾಂವತಿಬಾಯಿ ಕುಸಿದು ಬಿದ್ದಿದ್ದಾಳೆ.

Tap to resize

Latest Videos

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

ಈ ವೇಳೆ ಪಕ್ಕದಲ್ಲೇ ಇದ್ದ ಆಯುಧದಿಂದ ಹಲ್ಲೆ ಮಾಡಿ ಪತಿ ಪರಾರಿಯಾಗಿದ್ದಾನೆ. ಬೆಳಗ್ಗೆ 8 ಗಂಟೆಯಾದರೂ ತಾಯಿ ಮನೆಗೆ ಬಾರದಿರುವುದರಿಂದ ಮಗ ಕಣದ ಹತ್ತಿರ ಹೋಗಿ ನೋಡಿದಾಗ ಶ್ರಾವಂತಿಭಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.

ಯುವತಿಯ ನಗ್ನಗೊಳಿಸಿ ಚಿನ್ನದ ಸರ ದೋಚಿದರು!

ಕೂಡಲೇ ಶಿರಾ ನಗರ ಠಾಣೆಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಇನ್ಸ್‌ಪೆಕ್ಟರ್‌ ರಂಗಸ್ವಾಮಿ, ಗ್ರಾಮಾಂತರ ಠಾಣೆಯ ಡಿವೈಎಸ್‌ಪಿ ಕುಮಾರಪ್ಪ ಪರಿಶೀಲನೆ ನಡೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

click me!