ಅನಂತಕುಮಾರ್ ಹೆಗಡೆ ಪುಸ್ತಕ ಓದಲಿ: ಸಂಸದರಿಗೆ ನೂತನ ಮೇಯರ್ ಟಾಂಗ್

By Kannadaprabha News  |  First Published Feb 8, 2020, 12:11 PM IST

ಅವರಿವರು ಹೇಳಿರುವುದನ್ನೇ ಕೇಳಿರುವ ಹೆಗಡೆ ಅವರು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು ಎಂದು ತುಮಕೂರು ನೂತನ ಮೇಯರ್ ಫರೀದಾ ಬೇಗಂ ವ್ಯಂಗ್ಯ ಮಾಡಿದ್ದಾರೆ.


ತುಮಕೂರು(ಫೆ.08): ಅವರಿವರು ಹೇಳಿರುವುದನ್ನೇ ಕೇಳಿರುವ ಹೆಗಡೆ ಅವರು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು ಎಂದು ತುಮಕೂರು ನೂತನ ಮೇಯರ್ ಫರೀದಾ ಬೇಗಂ ವ್ಯಂಗ್ಯ ಮಾಡಿದ್ದಾರೆ.

ಸಂಸದ ಅನಂತ್‌ಕುಮಾರ್‌ ಹೆಗಡೆ ಅವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಗೊತ್ತಿಲ್ಲದೇ ಏನೇನೋ ಹೇಳುತ್ತಿದ್ದಾರೆ. ಮೊದಲು ಅವರು ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಓದುವುದು ಅವಶ್ಯಕವಾಗಿದ್ದು, ಅವರು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು, ಅವರ ಬಗ್ಗೆ ತಿಳಿದುಕೊಳ್ಳದೇ, ತಪ್ಪು ಹೇಳಿಕೆಗಳನ್ನು ನೀಡಿದರೆ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Latest Videos

undefined

ಖಾತೆ ಹಂಚಿಕೆ ಲಿಸ್ಟ್ ರೆಡಿ ಎಂದ BSY: ಯಾರಿಗೆ ಯಾವ ಖಾತೆ...?

ಭಾರತ ಇರುವವರೆಗೆ ಮಹಾತ್ಮಗಾಂಧಿ ಅವರು ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ, ಭಾರತಕ್ಕೆ ಇರುವುದು ಒಬ್ಬರೇ ರಾಷ್ಟ್ರಪಿತ ಅದು ಮಹಾತ್ಮಗಾಂಧೀಜಿ ಮಾತ್ರ, ಅವರನ್ನು ಬಿಟ್ಟರೆ ಬೇರೆ ಯಾರು ಮಹಾತ್ಮರಾಗಲು ಸಾಧ್ಯವಿಲ್ಲ, ಹೊಗಳಿಕೆ ಮೂಲಕ ಭಾರತದಲ್ಲಿ ಇನ್ನೊಬ್ಬರನ್ನು ರಾಷ್ಟ್ರಪಿತ ಮಾಡಲು ಹೋದರೆ ಅದು ಸಾಧ್ಯವು ಇಲ್ಲ, ಅವರನ್ನು ಜನರು ಒಪ್ಪುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಬೇಕಾಬಿಟ್ಟಿ ಮಾತನಾಡಿದರೆ ತಕ್ಕ ಪಾಠ:

ಭಾರತದ ಸಂವಿಧಾನವನ್ನು ಎಲ್ಲರೂ ಗೌರವಿಸುತ್ತಾರೆ, ಸಂವಿಧಾನದ ಬಗ್ಗೆ ಗೌರವವಿಲ್ಲದೆ, ಬೇಕಾಬಿಟ್ಟಿಮಾತನಾಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ, ನಾವೆಲ್ಲರೂ ಒಂದೇ ನಾವು ಭಾರತೀಯರು ಎನ್ನುವುದನ್ನು ಮರೆತು ಭಾರತಕ್ಕೆ ಭವ್ಯ ಭವಿಷ್ಯವನ್ನು ಒದಗಿಸಿದ ಸಂವಿಧಾನವನ್ನು ಅವಹೇಳನ ಮಾಡಿದರೆ, ಬದಲಾಯಿಸಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ, ತಾಳ್ಮೆಯಿಂದಲೇ ಶಾಂತಿಯುತವಾಗಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಕಾಂಗ್ರೆಸ್‌ ಈಗಲೂ ತಾಳ್ಮೆಯಿಂದಲೇ ಹೋರಾಟ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

click me!