‘ ಮೂರು ವರ್ಷಗಳ ನಂತರ ಜೆಡಿಎಸ್‌ ಪಕ್ಷ ಇರಲ್ಲ’

By Kannadaprabha NewsFirst Published Feb 8, 2020, 12:10 PM IST
Highlights

ಸದ್ಯ ರಾಜ್ಯದಲ್ಲಿ ತನ್ನ ಛಾಪು ಕಳೆದುಕೊಳ್ಳುತ್ತಿರುವ ಜೆಡಿಎಸ್ ಪಕ್ಷ ಇನ್ನು ಮೂರು ವರ್ಷದ ಬಳಿಕ ಇರೋದೆ ಇಲ್ಲವಂತೆ..! ಹೀಗೆಂದು ನಾಯಕರು ಹೇಳಿಕೆ ನೀಡಿದ್ದಾರೆ. 

ಹಾಸನ [ಫೆ.08]:  ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಅಪ್ಪಟ ಪಕ್ಷಾಂತರಿ, ವಿರೋಧ ಪಕ್ಷದ ಸ್ಥಾನ ಹೋದರೇ ಅವರ ನಿಜವಾದ ಬಣ್ಣ ಬಯಲಾಗುತ್ತದೆ. ಆಗ ಅವರ ಯಾವ ಪಕ್ಷದಲ್ಲಿ ಇರುತ್ತಾರೋ ಹೇಳಲಿಕ್ಕೆ ಆಗದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದಲ್ಲ ಒಂದು ರೀತಿ ಸಿದ್ದರಾಮಯ್ಯನವರು ಅನರ್ಹರೇ. ಪಕ್ಷೇತರರಾಗಿ ಇದ್ದು ನಂತರ ಜೆಡಿಎಸ್‌ ಸೇರಿ, ಕಾಂಗ್ರೆಸ್‌ ಸೇರಿದರು. ಹೀಗೆ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ ಸಿದ್ದರಾಮಯ್ಯನವರೇ ನಿಜವಾದ ಅಪ್ಪಟ ಪಕ್ಷಾಂತರಿ. ಹೀಗಾಗಿ ಅವರು ಕೂಡ ಒಂದಲ್ಲ ಒಂದು ರೀತಿ ಅನರ್ಹರೇ. ಹಾಗಾಗಿ ಸಚಿವರಾಗಿರುವ ಶಾಸಕರನ್ನು ಅನರ್ಹ ಎಂದು ಹೇಳಲಿಕ್ಕೆ ಅವರಿಗೆ ಕಿಂಚಿತ್ತು ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಜಿಪಂ ಅಧ್ಯಕ್ಷರು ರಾಜೀನಾಮೆ ನೀಡಲು ಆರ್‌.ಅಶೋಕ್‌ ಸೂಚನೆ...

ಕಾಂಗ್ರೆಸ್‌ ಹೈಕಮಾಂಡ್‌ ಅವರನ್ನು ವಿರೋಧ ಪಕ್ಷ ಸ್ಥಾನ ಕಿತ್ತುಕೊಂಡರೆ ಆಗ ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ. ಅಲ್ಲದೇ ಅವರ ನಿಜವಾಗ ಅಸಲಿ ಬಣ್ಣ ಬಟಾಬಯಲಾಗುತ್ತದೆ. ಮೈಸೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಗೆದ್ದ ಸಿದ್ದರಾಮಯ್ಯನವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದು.

ಅಶೋಕ್‌ಗೆ ಸಿಎಂ ಆಗೋ ಯೋಗ: ಸ್ವಾಮೀಜಿ ಭವಿಷ್ಯ!..

ಜೆಡಿಎಸ್‌ 3 ವರ್ಷಗಳ ನಂತರ ಇರಲ್ಲ:

ಮುಂದಿನ ಮೂರು ವರ್ಷಗಳಲ್ಲಿ ಜೆಡಿಎಸ್‌ ಪಾರ್ಟಿ ಇರಲ್ಲ. ಈಗ ಜೆಡಿಎಸ್‌ ಎಲ್ಲಿದೆ ?, ಜೆಡಿಎಸ್‌ ಸವಕಲು ನಾಣ್ಯ ಇದ್ದಂಗೆ. ಆ ಪಾರ್ಟಿ ಬಗ್ಗೆ ಮಾತಾನಾಡುವುದಿಲ್ಲ ಎಂದು ಹೇಳಿದರು.

click me!