ಆಗಸ್ಟ್ 17 ಮತ್ತು 18 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಲಾಗಿರುವ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಅಧಿವೇಶನ ಹಾಗೂ ಕಾರ್ಯಾಗಾರಕ್ಕೆ ತುಮಕೂರು ಜಿಲ್ಲೆಯಿಂದ ತೆರಳುತ್ತಿರುವ 23 ಜನ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸೋಮವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ತುಮಕೂರು : ಆಗಸ್ಟ್ 17 ಮತ್ತು 18 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಲಾಗಿರುವ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಅಧಿವೇಶನ ಹಾಗೂ ಕಾರ್ಯಾಗಾರಕ್ಕೆ ತುಮಕೂರು ಜಿಲ್ಲೆಯಿಂದ ತೆರಳುತ್ತಿರುವ 23 ಜನ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸೋಮವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಉಷಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಕ್ತಾರ ಮುರಳೀಧರ್ ಹಾಲಪ್ಪ ಅವರು, ತುಮಕೂರಿನಿಂದ ದೆಹಲಿಗೆ ತೆರಳುತ್ತಿರುವ 23 ಜನ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ತಂಡಕ್ಕೆ, ಮೂರು ದಿನಗಳ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿ,ಪ್ರಯಾಣ ಸುಖಃಕರವಾಗಿರಲೆಂದು ಶುಭ ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ ಮಾತನಾಡಿ, 2024ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಡಿಸೋಜ ಅವರ ಕೋರಿಕೆಯ ಮೇರೆಗೆ ಪ್ರತಿ ಬ್ಲಾಕ್ ಮಹಿಳಾ ಅಧ್ಯಕ್ಷರನ್ನು ದೆಹಲಿಯಲ್ಲಿ ಆಗಸ್ಟ್ 17ಮತ್ತು 18ರಂದು ನಡೆಯುವ ಎಐಸಿಸಿ ಮಹಿಳಾ ಅಧಿವೇಶನದಲ್ಲಿ ಭಾಗವಹಿಸಲು ಹೊರಟಿದ್ದಾರೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತೆರಳು ಕೈಗೊಳ್ಳಬೇಕಾದ ಕ್ರಮಗಳು, ಅವುಗಳ ರೂಪುರೇಷೆ ಕುರಿತು ಚರ್ಚೆ ನಡೆಸಲು ಅಧಿವೇಶನ ಕರೆದಿದ್ದು, ತುಮಕೂರಿನ 23 ಬ್ಲಾಕ್‌ಗಳಿಂದ 23 ಮಹಿಳಾ ಅಧ್ಯಕ್ಷರು ಆಗಸ್ಟ್ 15 ರಂದು ಹೊರಟು, ದೆಹಲಿ ತಲುಪಲಿದ್ದಾರೆ. ಅವರಿಗೆ ಊಟ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಎಐಸಿಸಿ ಮಹಿಳಾ ಘಟಕ ನೋಡಿಕೊಳ್ಳಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ, ದೇಶದ ವಿವಿಧೆಡೆಗಳಿಂದ ದೆಹಲಿಗೆ ತೆರಳುವ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಮಹಿಳಾ ಅಧ್ಯಕ್ಷರು, ರಾಜ್ಯ ಮಹಿಳಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎರಡು ದಿನಗಳ ಕಾಲ ತರಬೇತಿ ಮತ್ತು ಕಾರ್ಯಾಗಾರ ಇರುತ್ತದೆ. ನಂತರ ಆಗಸ್ಟ್ 20ರಂದು ದೆಹಲಿಯ ವೀರಭೂಮಿಯಲ್ಲಿ ನಡೆಯುವ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲ ಪಾಲ್ಗೊಂಡು ನಂತರ ಆಯಾಯ ಊರುಗಳಿಗೆ ಹಿಂದಿರುಗಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಗಸ್ಟ್ 17 ಮತ್ತು 18ರಂದು ನಡೆಯುವ ಮಹಿಳಾ ಕಾಂಗ್ರೆಸ್ ಅಧಿವೇಶನ ಮಹತ್ವದ್ದಾಗಿದೆ ಎಂದರು.