ಕೊಡವ ಭಾಷೆಯ ಲಿಪಿಯನ್ನು ಪರಿಚಯಿಸಿ ಹೆಚ್ಚು ಬಳಕೆ ಮಾಡಬೇಕೆಂಬ ನಿಟ್ಟಿನಲ್ಲಿ ಅದಕ್ಕೆ ಡಿಜಿಟಲ್ ಟಚ್ ನೀಡಲಾಗುತ್ತಿದೆ. ಇದೀಗ ಕೊಡವರು ಸೇರಿದಂತೆ ಕೊಡವೇತರ ಕೆಲವರು ಈ ಲಿಪಿಯ ಬೋರ್ಡ್‌ಗಳನ್ನು ಅಳವಡಿಕೆ ಮಾಡುವ ಟ್ರೆಂಡ್ ಶುರುವಾಗಿದೆ. tulu script name board-unveiling
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ (ಮಾ.9) : ಕೊಡವ ಭಾಷೆಯ ಲಿಪಿಯನ್ನು ಪರಿಚಯಿಸಿ ಹೆಚ್ಚು ಬಳಕೆ ಮಾಡಬೇಕೆಂಬ ನಿಟ್ಟಿನಲ್ಲಿ ಅದಕ್ಕೆ ಡಿಜಿಟಲ್ ಟಚ್ ನೀಡಲಾಗುತ್ತಿದೆ. ಇದೀಗ ಕೊಡವರು ಸೇರಿದಂತೆ ಕೊಡವೇತರ ಕೆಲವರು ಈ ಲಿಪಿಯ ಬೋರ್ಡ್‌ಗಳನ್ನು ಅಳವಡಿಕೆ ಮಾಡುವ ಟ್ರೆಂಡ್ ಶುರುವಾಗಿದೆ.
undefined
ಕೊಡವ ಭಾಷೆ(Kodava language)ಯಲ್ಲಿ 7 ಮಂದಿ ಲಿಪಿ ರಚಿಸಿದ್ದರು. ಆದರೆ ಯಾವುದು ಬಳಸಬೇಕೆಂಬ ಗೊಂದಲ ಉಂಟಾಗಿತ್ತು. ಕಳೆದ ಫೆ.21ರಂದು ಮಾತೃ ಭಾಷಾ ದಿನಾಚರಣೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ(Karnataka Kodava Sahitya Academy)ಯು ಸಭೆ ನಡೆಸಿ ತ್ರಿಭಾಷಾ ಸಾಹಿತಿ ಐ.ಮಾ. ಮುತ್ತಣ್ಣ ಅವರು 1970ರಲ್ಲಿ ರಚಿಸಿದ್ದ ಕೊಡವ ಲಿಪಿ ಬಳಸಲು ನಿರ್ಧರಿಸಲಾಯಿತು.
ಒಂದೇ ವೇದಿಕೆಯಲ್ಲಿ ಮೇಳೈಸಿದ ವಿವಿಧ ಸಮುದಾಯಗಳ ಜಾನಪದ ನೃತ್ಯಗಳು
ಐ.ಮಾ. ಮುತ್ತಣ್ಣ ಅವರು ರಚಿಸಿರುವ ಕೊಡವ ಲಿಪಿಯನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಉಳಿಸಿಕೊಂಡು ಬಂದಿದ್ದರು. ಕೊಡಗಿನ ಶಾಲೆಗಳಲ್ಲಿ ಪಾಠ ಕೂಡ ಮಾಡಿದ್ದು, ಬರೆಯಲು ಅಭ್ಯಾಸ ಮಾಡಿಸಿದ್ದರು.
ಕೊಡವ ಸಾಹಿತ್ಯ ಅಕಾಡೆಮಿ ನಡೆಸಿದ ಸಭೆಯಲ್ಲಿ ಮೈಸೂರಿನ ಸೆಂಟ್ರಲ್ ಇನ್ಸಿ$್ಟಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ ನ ಪ್ರತಿನಿಧಿಗಳು ಕೂಡ ಪಾಲ್ಗೊಂಡಿದ್ದರು. ಐ.ಮಾ. ಮುತ್ತಣ್ಣ ಅವರು ರಚಿಸಿರುವ ಲಿಪಿಯನ್ನು ಬಳಸಲು ಕೊಡವ ಸಾಹಿತ್ಯ ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಇದಕ್ಕೆ ಸರ್ಕಾರ ಅಂಗೀಕಾರ ನೀಡುವಂತೆ ಮನವಿ ಮಾಡಲಾಯಿತು.
ಇದೀಗ ಕೊಡವ ಸಾಹಿತ್ಯ ಅಕಾಡೆಮಿಯ ಅವಧಿ ಮುಗಿದಿದ್ದು, ಇದೀಗ ಈ ಲಿಪಿಯನ್ನು ಉಳಿಸಿಕೊಂಡು ಡಿಜಿಟಲ್ ಮಾಡಲಾಗುತ್ತಿದೆ.
ಸದ್ಯಕ್ಕೆ ಕೊಡವ ಭಾಷೆಯ ಲಿಪಿ ಕಂಪ್ಯೂಟರ್ ತಂತ್ರಾಂಶದಲ್ಲಿಲ್ಲ. ಬದಲಾಗಿ ಕೈಯ್ಯಲ್ಲೇ ಲಿಪಿಯನ್ನು ಎಡಿಟ್ ಮಾಡಲಾಗುತ್ತಿದೆ. ಆದ್ದರಿಂದ ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ತಾಂತ್ರಿಕ ತಂಡದೊಂದಿಗೆ ಚರ್ಚೆ ನಡೆಸುತ್ತಿದ್ದು, ಡಿಜಿಟೀಕರಣ ಮಾಡಲು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಕೊಡವ ಲಿಪಿಯ ಅನುವಾದ ಹಾಗೂ ವೆಬ್‌ಸೈಟ್‌ನಲ್ಲಿ ಕೂಡಾ ಕೊಡವ ಲಿಪಿಯನ್ನು ಪ್ರಚಾರ ಮಾಡಲು ಪ್ರಯತ್ನಿಸಲಾಗುತ್ತಿದೆ.
ಕೊಡವ ಲಿಪಿ ಬಳಕೆ:
ಕೊಡಗು ಜಿಲ್ಲೆಯಲ್ಲಿ ಕೊಡವರು ಸೇರಿದಂತೆ ಕೊಡವೇತರರು ಕೂಡ ಐ.ಮಾ. ಮುತ್ತಣ್ಣ ಅವರು ರಚಿಸಿರುವ ಕೊಡವ ಲಿಪಿಯನ್ನು ನಾಮ ಫಲಕಗಳಲ್ಲಿ ಬಳಸುತ್ತಿದ್ದಾರೆ. ಐನ್ ಮನೆಗಳು, ರಸ್ತೆ, ಅಂಗಡಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಕೊಡವ ಲಿಪಿಯ ಬೋರ್ಡ್‌ಗಳು ಹಾಕುವ ಟ್ರೆಂಡ್ ಶುರುವಾಗಿದೆ.
ಡಿಜಿಟಲೀಕರಣ ಉದ್ದೇಶ
ಕೊಡವ ಭಾಷೆಯ ಲಿಪಿಯನ್ನು ಜನರು ಹೆಚ್ಚು ಬಳಕೆ ಮಾಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಮಾಡಲು ಉದ್ದೇಶಲಾಗಿದೆ. ಕನ್ನಡ ನುಡಿಯಂತೆ ಕೊಡವ ಲಿಪಿಯನ್ನು ಕೂಡ ತಂತ್ರಾಂಶದಲ್ಲಿ ಬಳಕೆ ಮಾಡಲು ತಾಂತ್ರಿಕ ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಪ್ರತೀಕ್ ಪೊನ್ನಣ್ಣ ಹೇಳುತ್ತಾರೆ.
ಕೊಡವ ಲಿಪಿ ರಚನೆ ಮಾಡಿದವರು...
ಕೊಡವ ಭಾಷೆಯಲ್ಲಿ ಏಳು ಮಂದಿ ಲಿಪಿಯನ್ನು ರಚಿಸಿದ್ದಾರೆ. 1887ರಲ್ಲಿ ಡಾ. ಕೊರವಂಡ ಅಪ್ಪಯ್ಯ, 1970ರಲ್ಲಿ ಡಾ. ಐ.ಮಾ. ಮುತ್ತಣ್ಣ, 1980ರಲ್ಲಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, 2003ರಲ್ಲಿ ಪೊಂಜಂಡ ಅಪ್ಪಯ್ಯ, 2005 ಡಾ.ಕೋಕ್ಸ್ (ಜರ್ಮನ್) 2008ರಲ್ಲಿ ಚಾರ್ಲೆಸ್ ಹೆನ್ರಿ, 2021ರಲ್ಲಿ ಮೂಕಂಡ ನಿತೀನ್ ಕುಶಾಲಪ್ಪ ಅವರು ಕೊಡವ ಲಿಪಿಯನ್ನು ರಚಿಸಿದ್ದಾರೆ. ಐ.ಮಾ. ಮುತ್ತಣ್ಣ ಅವರು ರಚಿಸಿರುವ ಲಿಪಿ ತೀರಾ ಸರಳವಾಗಿದ್ದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಈ ಲಿಪಿಯನ್ನೇ ಬಳಸಲು ಸಭೆಯಲ್ಲಿ ನಿರ್ಧರಿಸಿದೆ.
ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನ: ಸಿಎನ್‌ಸಿ ಅಧ್ಯಕ್ಷ ನಾಚಪ್ಪ ಗಂಭೀರ ಆರೋಪ
ಕೊಡವ ಭಾಷೆಯ ಲಿಪಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದ್ಯಕ್ಕೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಜನ ಸ್ವಯಂ ಪ್ರೇರಿತವಾಗಿ ಉತ್ಸಾಹ ತೋರುತ್ತಿದ್ದಾರೆ. ಕೊಡವ ಭಾಷೆಯ ವರ್ಣಮಾಲೆಯ ಚಾರ್ಚ್ ಮಾಡಲಾಗಿದೆ. ಇದೀಗ ನಾಮ ಫಲಕಗಳನ್ನು ಕೂಡ ಕೊಡವ ಭಾಷೆಯಲ್ಲಿ ಹಾಕಲು ಉತ್ಸಾಹ ತೋರುತ್ತಿದ್ದಾರೆ.
-ಪ್ರತೀಕ್ ಪೊನ್ನಣ್ಣ, ರಾಜ್ಯ ಅಧ್ಯಕ್ಷ , ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟ.
ಏಳು ಮಂದಿ ಕೊಡವ ಭಾಷೆಯ ಲಿಪಿಯನ್ನು ರಚಿಸಿದ್ದರು. ಕೊಡವ ಸಾಹಿತ್ಯ ಅಕಾಡೆಮಿ ನಡೆಸಿದ ಸಭೆಯಲ್ಲಿ ಅಂತಿಮವಾಗಿ ಡಾ. ಐ.ಮಾ. ಮುತ್ತಣ್ಣ ಅವರು ರಚಿಸಿದ ಲಿಪಿ ಬಳಸಲು ನಿರ್ಧರಿಸಲಾಗಿದೆ. ಇದನ್ನು ಸರ್ಕಾರ ಅಂಗೀಕಾರ ಮಾಡಬೇಕು. ಇದೀಗ ಕೊಡವ ಭಾಷೆಯಲ್ಲಿ ನಾಮಫಲಕಗಳನ್ನು ಹಾರುತ್ತಿರುವುದು ಒಳ್ಳೆಯ ಬೆಳವಣಿಗೆ. ಕಂಪ್ಯುಟರ್ ತಂತ್ರಾಂಶದಲ್ಲಿ ಲಿಪಿ ಆಗಬೇಕು. ಕೊಡವ ಭಾಷೆ ಅಧಿಕೃತವಾಗಿ ಘೋಷಣೆಯಾಗಬೇಕಾದರೆ ಶಾಸಕರ ಪ್ರಯತ್ನ ಅಗತ್ಯ.
-ಡಾ. ಪಾರ್ವತಿ ಅಪ್ಪಯ್ಯ, ಮಾಜಿ ಅಧ್ಯಕ್ಷೆ, ಕೊಡವ ಸಾಹಿತ್ಯ ಅಕಾಡೆಮಿ.