ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಶಿರಸಿ ಬಾಲೆ

By Kannadaprabha NewsFirst Published Jun 7, 2022, 9:48 AM IST
Highlights

*  ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ‘ವಿಶ್ವಶಾಂತಿ ಬಾಲೆ’

*  ಯಕ್ಷನೃತ್ಯ ರೂಪಕದ ಮೂಲಕ ಏಳು ವರ್ಷಗಳಿಂದ ಪ್ರದರ್ಶನ

*  ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ತುಳಸಿ ಹೆಗಡೆ

ಶಿರಸಿ(ಜೂ.07):  ಕಳೆದ ಏಳು ವರ್ಷಗಳಿಂದ ನಿರಂತರ ವಿಶ್ವಶಾಂತಿ ಸಂದೇಶ ಸಾರುವ ಯಕ್ಷನೃತ್ಯ ರೂಪಕದ ಬಾಲೆ, ತಾಲೂಕಿನ ಬೆಟ್ಟಕೊಪ್ಪದ ತುಳಸಿ ಹೆಗಡೆ ಸಾಧನೆ ಇದೀಗ ದೇಶದ ಪ್ರತಿಷ್ಠಿತ ‘ಇಂಡಿಯಾ ಬುಕ್‌ ರೆಕಾರ್ಡ’ನಲ್ಲಿಯೂ ದಾಖಲಾಗಿದೆ. ವಿಶ್ವಶಾಂತಿ ಸಂದೇಶ ಸಾರುವ ಕಲಾ ಪ್ರದರ್ಶನ ನೀಡುವ ದೇಶದ ಏಕಮೇವ ಬಾಲೆ ಎಂಬುದು ಈಗ ಅಧಿಕೃತವಾಗಿ ಋುಜುವಾತಾಗಿದೆ.

13ರ ತುಳಸಿ ಕಳೆದ ಏಳು ವರ್ಷಗಳಿಂದ ಸತತ ವಿವಿಧ ಪೌರಾಣಿಕ ಕಥೆ ಒಳಗೊಂಡ ವಿಶ್ವಶಾಂತಿ ಸರಣಿ ಪ್ರಸ್ತುತಪಡಿಸುವ ಬಾಲೆ ಎಂದೇ ಪ್ರಸಿದ್ಧಿ. ತುಳಸಿಯ ಈ ವಿಶಿಷ್ಟಸಾಧನೆಯನ್ನು ‘ಅತ್ಯಂತ ಕಿರಿಯ ವಯಸ್ಸಿನಿಂದ ವಿಶ್ವಶಾಂತಿ ಸರಣಿ ಸಂದೇಶ ಸಾರುವ ಬಾಲ ಯಕ್ಷಗಾನ ಕಲಾವಿದೆ’ ಎಂದೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನೀಡುವ ಪ್ರಮಾಣಪತ್ರಲ್ಲಿ ಉಲ್ಲೇಖಿಸಿದೆ.

Latest Videos

ಏ.27ರಂದು ದಾಖಲೀಕರಿಸಿಕೊಂಡ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸಂಸ್ಥೆ ತುಳಸಿ ಯಕ್ಷಗಾನದ ಕಲಾ ಮಾಧ್ಯಮದ ಮೂಲಕ ಜಗತ್ತಿನ ಯೋಗಕ್ಷೇಮದ ಪ್ರಸ್ತುತಿಗಾಗಿ ಈ ರೂಪಕವನ್ನು ಪ್ರದರ್ಶಿಸುತ್ತಿದ್ದಾಳೆ ಎಂದೂ ಹೆಮ್ಮೆ ವ್ಯಕ್ತಪಡಿಸಿದೆ.

Karnataka Politics: 'ಜೆಡಿಎಸ್‌ಗೆ ದ್ರೋಹ ಎಸಗಿದ ಹೊರಟ್ಟಿ'

ಮುಮ್ಮೇಳದ ಏಕವ್ಯಕ್ತಿ ರೂಪಕ ಇದಾಗಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರ, ನಿರ್ದೇಶಕರ, ಸಾಹಿತಿಗಳ, ಪರಿಣತರ ಒಂಬತ್ತು ಜನರ ತಂಡ ಕೆಲಸ ಮಾಡುತ್ತಿದೆ. ಒಂದು ಗಂಟೆಗೂ ಮಿಕ್ಕಿದ ವಿಶ್ವಶಾಂತಿ ಸಂದೇಶ, ವಿಶ್ವಶಂಕರಾಕ್ಷರ, ಶ್ರೀಕೃಷ್ಣಂ ವಂದೇ, ವಂದೇ ಪರಮಾನಂದಂ, ಪಂಚಪಾವನ ಕಥಾ, ಪರಿವರ್ತನೆ ಜಗದ ನಿಯಮ, ವಂಶೀವಿಲಾಸ ಯಕ್ಷನೃತ್ಯ ರೂಪಕಗಳನ್ನು ಈಕೆ ಪ್ರಸ್ತುತಪಡಿಸುತ್ತಿದ್ದಾಳೆ. ಈ ಸಾಧನೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡನಲ್ಲಿ ದಾಖಲಾಗಿದ್ದು, ಯಕ್ಷಗಾನದ ಇತಿಹಾಸದಲ್ಲೂ ಪ್ರಥಮ.

ತುಳಸಿ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ವರ್ಗದಲ್ಲಿ ಓದುತ್ತಿದ್ದಾಳೆ. ಅವಳ ಸಾಧನೆಯನ್ನು ಇಂಟರ್‌ನ್ಯಾಶನಲ್‌ ಬುಕ್‌ ಆಫ್‌ ರೆಕಾರ್ಡ್‌ ಕೂಡ ದಾಖಲಿಸಿದೆ. ಈಚೆಗಷ್ಟೇ ಪುಣೆಯ ಸಂಸ್ಥೆಯೊಂದು ನೀಡುವ ಇಂಡಿಯನ್‌ ಸ್ಟಾರ್‌ ಐಕಾನ್‌ ಅವಾರ್ಡ್‌ ಕೂಡ ಬಂದಿದೆ ಎಂಬುದೂ ಉಲ್ಲೇಖನೀಯ.

click me!