ದೇವರಿಗೆ ಮರುನಾಮಕರಣ ಮಾಡಿದ ಟ್ರಸ್ಟಿಗಳು

By Kannadaprabha News  |  First Published Apr 6, 2023, 6:09 AM IST

ದೇವರಿಗೆ ಮರುನಾಮಕರಣ ಮಾಡಿರುವುವ ಅಪರೂಪದ ಘಟನೆಯೊಂದು ತಿಪಟೂರು ತಾಲೂಕು ಬಳ್ಳೇಕೆರೆಯಲ್ಲಿ ನಡೆದಿದ್ದು ಪ್ರಕರಣ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.


  ತಿಪಟೂರು :  ದೇವರಿಗೆ ಮರುನಾಮಕರಣ ಮಾಡಿರುವುವ ಅಪರೂಪದ ಘಟನೆಯೊಂದು ತಿಪಟೂರು ತಾಲೂಕು ಬಳ್ಳೇಕೆರೆಯಲ್ಲಿ ನಡೆದಿದ್ದು ಪ್ರಕರಣ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ತಾಲೂಕಿನ ಬಳ್ಳೆಕೆರೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಬಳ್ಳೆಕೆರೆಯಮ್ಮ ದೇವಾಲಯವಿದ್ದು ಕಡತಗಳಲ್ಲಿಯೂ ಬಳ್ಳೆಕೆರೆ ಗ್ರಾಮದ ಬಳ್ಳೆಕೆರೆಯಮ್ಮ ದೇವಾಲಯವೆಂದೇ ನಮೂದಾಗಿದೆ. ಆದರೆ ಟ್ರಸ್ಟಿಗಳು ಬಳ್ಳೆಕೆರೆಯಮ್ಮನನ್ನು ಶ್ರೀ ಕೆಂಪಮ್ಮ ದೇವಿ ಎಂದು ಮರು ನಾಮಕರಣ ಮಾಡಿರುವುದು ಬಳ್ಳೆಕೆರೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

Tap to resize

Latest Videos

1835ರಲ್ಲಿ ಬಳ್ಳೆಕೆರೆ ಗ್ರಾಮದ ಸರ್ವೆ ನಂ. 70ರಲ್ಲಿ ಬಳ್ಳೆಕೆರೆಯಮ್ಮ ದೇವಾಲಯ ಸ್ಥಾಪಿತವಾಗಿದ್ದು, ಈ ದೇವಾಲಯ ಬಜಗೂರು ಮತ್ತು ಬಳ್ಳೆಕೆರೆ ಸೇರಿದಂತೆ ಹದಿನಾಲ್ಕು ಹಳ್ಳಿಗಳ ಗ್ರಾಮ ದೇವತೆಯಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಬಳ್ಳೆಕೆರೆಯಮ್ಮ ದೇವಾಲಯವು ಬಳ್ಳೆಕೆರೆ ಗ್ರಾಮದ ನಕಾಶೆಯಲ್ಲಿ ದಾಖಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯು ನೀಡಿರುವ ಅರ್ಚಕರ ಗುರುತಿನ ಚೀಟಿಯಲ್ಲಿಯೂ ಬಳ್ಳೆಕೆರೆಯಮ್ಮ ದೇವಿ ಎಂದು ನಮೂದಾಗಿದೆ. ಸರ್ಕಾರದ ಆದೇಶದಂತೆ 2019ರಲ್ಲಿಯೂ ಬಳ್ಳೆಕೆರೆ ಗ್ರಾಮ ಬಳ್ಳೆಕೆರೆಯಮ್ಮ ದೇವಾಲಯ ಎಂದು ಆದೇಶಿಸಲಾಗಿದೆ. ಆದರೆ ಟ್ರಸ್ಟಿಗಳು ಇದೇ ಬಳ್ಳೆಕೆರೆಯಮ್ಮ ದೇವಿಯನ್ನು ಬಜಗೂರು ಶ್ರೀ ಕೆಂಪಮ್ಮದೇವಿ ಎಂದು ಹೇಳುತ್ತಾ ಏಕಾಏಕಿ ಹೆಸರು ಬದಲಾವಣೆಯನ್ನು ಯಾರಿಗೂ ಗೊತ್ತಿಲ್ಲದಂತೆ ಮಾಡಿಸಿಕೊಂಡಿದ್ದಾರೆ.

ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದು ಈ ಬಾರಿಯ ಜಾತ್ರೆಯ ಸಂಬಂಧ ಸಭೆ ಕರೆದು ಚರ್ಚಿಸುವಾಗ ಈ ವಿಷಯ ಬೆಳಕಿಗೆ ಬಂದಿದೆ. ಬಜಗೂರು ಮತ್ತು ಬಳ್ಳೆಕೆರೆ ಗ್ರಾಮಸ್ಥರ ನಡುವೆ ಘರ್ಷಣೆ ನಡೆದು ಜಾತ್ರೆ ರದ್ದಾಗಿದ್ದು, ಎರಡು ಗ್ರಾಮಗಳ ನಡುವೆ ಗಲಾಟೆ ನಡೆಯುತ್ತಿದೆ.

ಆದ್ದರಿಂದ ಸರ್ಕಾರದ ಆದೇಶದಂತೆ ಬಳ್ಳೆಕೆರೆಯಮ್ಮ ದೇವಸ್ಥಾನ ಎಂದು ಮುಂದುವರೆಸಿಕೊಂಡು ಹೋಗುವಂತೆ ಸಂಬಂದಪಟ್ಟಅಧಿಕಾರಿಗಳಿಗೆ ಶ್ರೀ ಬಳ್ಳೆಕೆರೆಯಮ್ಮ ದೇವಾಲಯದ ಧರ್ಮದರ್ಶಿ ರಂಗನಾಥ್‌ ಹಾಗೂ ಬಳ್ಳೆಕೆರೆ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

ತುಳುನಾಡಿನಂತೆ ದೇವಿಗೆ ಅಲಂಕಾರ

ಬೆಂಗಳೂರು: ತುಳುನಾಡಿನಲ್ಲಿ ದೇವರಿಗಿಂತ ದೈವರಾಧನೆಯೇ ಹೆಚ್ಚು ಪ್ರಚಲಿತ,  ನಂಬಿದ ದೈವ ಎಂದು ಕೈ ಬಿಡುವುದಿಲ್ಲ ಎಂಬ ನಂಬಿಕೆ ತುಳುವರದ್ದು. ಆದರೆ ಕಾಂತಾರ ಸಿನಿಮಾ ಬರುವುದಕ್ಕೂ ಮೊದಲು ತುಳುನಾಡಿನ ದೈವರಾಧನೆ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿರಲಿಲ್ಲ. ಕೇವಲ ತುಳುನಾಡಿನಲ್ಲಿ ಇದ್ದವರು, ಅಲ್ಲಿಂದ ಉದ್ಯೋಗ, ವ್ಯವಹಾರವೆಂದು ಹೊರಗೆ ಹೋದವರಿಗೆ ಹಾಗೂ ಉದ್ಯೋಗ ವೃತ್ತಿ ಶಿಕ್ಷಣ ಅರಸಿ ತುಳುನಾಡಿಗೆ ಬಂದವರಿಗಷ್ಟೇ ಈ ದೈವರಾಧಾನೆಯ ಅರಿವಿತ್ತು. ಆದರೆ ಕಾಂತಾರ ಸಿನಿಮಾದ ಮೂಲಕ ತುಳುನಾಡಿನ ಈ ಸಂಸ್ಕೃತಿ ಇಡೀ ವಿಶ್ವಕ್ಕೆ ತಿಳಿದಿದೆ.  ಸಿನಿಮಾ ಬಿಡುಗಡೆಯ ಬಳಿಕ ಕೆಲವು ಅತೀರೇಕದ ಅವಾಂತರಗಳು ನಡೆದಿವೆ. ದೈವದಂತೆ  ನರ್ತಿಸುವ ವಿಡಿಯೋ ಮಾಡಿ ಕೂಡ ಅನೇಕರು ಆಕ್ರೋಶಕ್ಕೆ ಗುರಿಯಾಗಿದ್ದರು.

ಈ ಮಧ್ಯೆ ಈಗ ಇಲ್ಲೊಂದು ಕಡೆ ದೇವಿಗೆ ತುಳುನಾಡಿನ (Tulunadu) ದೈವ ಪಂಜುರ್ಲಿಗೆ (Panjurli)  ಅಲಂಕರಿಸುವಂತೆ ದೇವಿಗೆ ಅಲಂಕಾರ ಮಾಡಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ (Viral video) ಆಗಿದ್ದು, ಕಾಂತಾರ ಸಿನಿಮಾ ನಿರ್ದೇಶಿಸಿದ್ದ ರಿಷಬ್ ಶೆಟ್ಟಿಗೆ ಬೈದುಕೊಂಡು ಒಬ್ಬರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು,  ಇದಕ್ಕೆ ಅನೇಕ ನೆಗೆಟಿವ್‌ ಕಾಮೆಂಟ್‌ಗಳು ಬಂದಿವೆ. 

'ಕಾಂತಾರ' ಒಳಗಣ್ಣಿಗೊಂದಿಷ್ಟು ಬೆಳಕು ಕೊಡುವ ಚಿತ್ರ, ಅದಕ್ಯಾಕೆ ಜಾತಿ, ಧರ್ಮದ ಬಣ್ಣ?

30 ಸೆಕೆಂಡ್‌ಗಳ ವಿಡಿಯೋದಲ್ಲಿ ಕಾಣಿಸುವಂತೆ ದೇವಿಯ ಒಂದು ಕೈಯಲ್ಲಿ ಕತ್ತಿ ಹಾಗೂ ಮತ್ತೊಂದು ಕೈಯಲ್ಲಿ ಪಂಜುರ್ಲಿ ದೈವ ಹಿಡಿದಿರುವಂತೆ  ದೊಂದಿ (ಪಂಜು)ಯನ್ನು ನೀಡಲಾಗಿದೆ.  ಅಲ್ಲದೇ ಹಿಂಭಾಗದಲ್ಲಿ ತಾಳೆಯ ಗರಿಯಿಂದ  ದೈವಗಳಿಗೆ ಅಲಂಕರಿಸುವಂತೆ ಅಲಂಕರಿಸಲಾಗಿದೆ. ಈ ಅಲಂಕಾರದಲ್ಲಿ ದೇವಿ ಸುಂದರವಾಗಿ ಕಂಗೊಳಿಸುತ್ತಿದ್ದಾಳೆ. ದೇಗುಲದ ಅರ್ಚಕರು ಆರತಿ ಮಾಡುತ್ತಿದ್ದು, ದೇಗುಲದಲ್ಲಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ವಿಡಿಯೋ ನೋಡಿದ ಅನೇಕರು ಆಕ್ರೋಶಗೊಂಡಿದ್ದಾರೆ. 

ರೋಶಾನ್ ರೆನೋಲ್ಡ್ ಎಂಬುವವರು ಫೇಸ್‌ಬುಕ್‌ನಲ್ಲಿ (Facebook) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಕಾಂತಾರ ನಟ ರಿಷಭ್ ಶೆಟ್ಟಿಯನ್ನು ಬೈದುಕೊಂಡಿದ್ದಾರೆ.  ಹಣದ ಆಸೆಗಾಗಿ ತುಳುನಾಡಿನ ಆರಾಧನೆ ಆಚರಣೆಯನ್ನು ಎಲ್ಲಿಗೆ ತಲುಪಿಸಿದೆ ಮಾರಾಯ ಎಂದು ಆತ ಬರೆದುಕೊಂಡಿದ್ದಾರೆ.  ಇದಕ್ಕೆ ಕಾಮೆಂಟ್ ಮಾಡಿದ್ದ ಒಬ್ಬರು ರಿಷಭ್ ಶೆಟ್ಟಿ ದೈವಾರಾಧನೆಯನ್ನು ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ.  ಆದರೆ ಮತ್ತೆ ಕೆಲವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು,  ದೈವ ದೇವರನ್ನು ಒಂದು ಪ್ರದೇಶಕ್ಕೆ ಬರೆದು ಕೊಟ್ಟಿದ್ದಾರೆಯೇ ? ದೇವರ ಆರಾಧನೆ ಮಾಡುವವರು ಶುದ್ಧದಿಂದ ಭಕ್ತಿಯಿಂದ ಎಲ್ಲಿ ಬೇಕಾದರೂ ಆರಾಧಿಸಲಿ, ದೇವರನ್ನು ಹಣಕ್ಕಾಗಿ ಹೇಗೆ ಹರಾಜಿಗಿಟ್ಟಿದ್ದಾರೆ ಎಂದು ನಮಗೂ ಗೊತ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವಾ?: ದೈವರಾಧನೆ ಕೆಣಕುವ ವಿಚಾರವಲ್ಲ ಅಂದ್ರು!

ಅಲ್ಲದೇ ಅನೇಕರು ಪರವಾಗಿ ಅನೇಕರು ವಿರೋಧವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲವೂ ಸರಿ ಎಂದಾದರೆ ದೈವರಾಧನೆಯ ಕಟ್ಟು ಕಟ್ಟಳೆಗಳು, ಸಂಧಿ ಪಾಡ್ದನಗಳು ಏಕೆ ಇರುವುದು ಎಂದು ಕೆಲವರು ಕೇಳಿದರೆ, ಮತ್ತೆ ಕೆಲವರು ಹಾಗಾದರೆ ಇತ್ತೀಚಿನ ದೈವರಾಧಾನೆಯಲ್ಲಿ ಏಕೆ ಹೆಚ್ಚಾಗಿ ವೈದಿಕ ಸಂಪ್ರದಾಯ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. 

click me!