ಪೊಲೀಸ್, ಅರಣ್ಯ ಸಿಬ್ಬಂದಿ, ಸಮಾಜ ಸೇವಕ ಆರೀಫ್, ರೆಹಮಾನ್ ಅವರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 2000 ಅಡಿ ಪ್ರಪಾತಕ್ಕೆ ಇಳಿದು ಚಾಲಕನನ್ನ ರಕ್ಷಿಸಿದ್ದಾರೆ. ಟಿಪ್ಪರ್ ಲಾರಿ ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿತ್ತು. ಭಾರೀ ಮಂಜು ಕವಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿದೆ.
ಚಿಕ್ಕಮಗಳೂರು(ಜ.13): ಚಾರ್ಮಾಡಿ ಘಾಟಿಯಲ್ಲಿ ಟಿಪ್ಪರ್ ಲಾರಿಯೊಂದು 2000 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಇಂದು(ಶನಿವಾರ) ನಡೆದಿದೆ. ಟಿಪ್ಪರ್ ಲಾರಿಯೊಂದು 2000 ಅಡಿ ಪ್ರಪಾತಕ್ಕೆ ಬಿದ್ದ ಪರಿಣಾಮ ಲಾರಿ ಚಾಲಕನ ಸೊಂಟ ಮುರಿದಿದ್ದು ಮಂಗಳೂರಿಗೆ ರವಾನೆ ಮಾಡಲಾಗಿದೆ.
ಪೊಲೀಸ್, ಅರಣ್ಯ ಸಿಬ್ಬಂದಿ, ಸಮಾಜ ಸೇವಕ ಆರೀಫ್, ರೆಹಮಾನ್ ಅವರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 2000 ಅಡಿ ಪ್ರಪಾತಕ್ಕೆ ಇಳಿದು ಚಾಲಕನನ್ನ ರಕ್ಷಿಸಿದ್ದಾರೆ. ಟಿಪ್ಪರ್ ಲಾರಿ ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿತ್ತು. ಭಾರೀ ಮಂಜು ಕವಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿದೆ.
undefined
ಚಾಮರಾಜನಗರ: ಕಳೆದ ವರ್ಷದಲ್ಲಿ ಬರೋಬ್ಬರಿ 58 ಆಕ್ಸಿಡೆಂಟ್ ಡೆತ್..!
2000 ಅಡಿ ಆಳಕ್ಕೆ ಬಿದ್ದ ಲಾರಿ ಸಂಪೂರ್ಣ ಜಖಂಗೊಂಡಿದೆ. ಲಾರಿ ಚಾಲಕ ಬದುಕುಳಿದಿರುವುದೇ ಪವಾಡವಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.