
ಬಾಗಲಕೋಟೆ(ಅ.03): ರಾಮಾರೂಢ ಶ್ರೀಗಳಿಗೆ ₹1 ಕೋಟಿ ವಂಚನೆ ಪ್ರಕರಣದ ನಂತರ ಆರೋಪಿ ಪ್ರಕಾಶ ಮುಧೋಳ ಅವರ ಬಣ್ಣ ಬಗೆದಷ್ಟು ಬಯಲಾಗುತ್ತಿದೆ. ಆರ್.ಬಿ.ತಿಮ್ಮಾಪುರ ಅವರ ಹೆಸರಲ್ಲೂ ಮೋಸ ಮಾಡಿದ್ದಾನೆ ಆರೋಪಿ ಪ್ರಕಾಶ ಮುಧೋಳ. ಈ ಕುರಿತು ಖುದ್ದು ಸಚಿವ ಆರ್.ಬಿ. ತಿಮ್ಮಾಪುರ ಅವರೇ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪೂರ ಅವರು, 2018ರಲ್ಲಿ ತಾನು ಸಚಿವ ಆರ್.ಬಿ.ತಿಮ್ಮಾಪುರ, ನನ್ನ ಸಹೋದರಿಗೆ ಕಾರು ಕೊಡಿಸಬೇಕಿದೆ. ಹಾಗಾಗಿ ಹಣ ಬೇಕೆಂದು ಬ್ಯಾಂಕ್ ಮ್ಯಾನೇಜರ್ ಬಳಿ ಹಣ ವಸೂಲಿ ಮಾಡಿದ್ದನಂತೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಹೋದರನೆಂದು, ಬಾದಾಮಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಹೆಸರಲ್ಲೂ ಆರೋಪಿ ದೋಖಾ ಮಾಡಿದ್ದಾರೆ. ಹಾಲಿನ ಪುಡಿಯಲ್ಲಿ ಯೂರಿಯಾ ಮಿಕ್ಸ್ ಮಾಡಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ.
ಗದ್ದನಕೇರಿ ರಾಮಾರೂಢ ಶ್ರೀಗಳಿಗೆ 1 ಕೋಟಿ ರೂ. ವಂಚಿಸಿದ್ದ ಜೆಡಿಎಸ್ ನಾಯಕ ಪ್ರಕಾಶ ಮುಧೋಳ ಅರೆಸ್ಟ್!
2019ರ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ತಂದಿಟ್ಟ ಅಕ್ಕಿ ಕಳ್ಳತನ ಮಾಡಿದ್ದ ಪ್ರಕಾಶ ಮುಧೋಳ ಹಿಂದೆ ಜಗದೀಶ ಶೆಟ್ಟರ್ ಹೆಸರಲ್ಲೂ ಸಿಮೆಂಟ್ ಫ್ಯಾಕ್ಟರಿಯಲ್ಲಿ ₹25 ಲಕ್ಷ ವಂಚನೆ ಮಾಡಿದ್ದಾನೆ ಎಂದು ಆರೋಪಿ ಪ್ರಕಾಶ್ ಮುಧೋಳ ಹಗರಣಗಳನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಬಿಚ್ಚಿಟ್ಟಿದ್ದಾರೆ.