ಪುಷ್ಪಗಿರಿ-ಕುಮಾರಪರ್ವತ ಚಾರಣ ಬೆಂಗಳೂರಿನ ಯುವಕನ ನಾಪತ್ತೆ/ ಕೊಡಗು ಮತ್ತು ದಕ್ಷಿಣ ಜಿಲ್ಲಾಡಳಿತದಿಂದ ಜಂಟಿ ಕಾರ್ಯಾಚರಣೆ
ಕೊಡಗು[ಸೆ. 16] ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಹೋಗಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಬೆಂಗಳೂರು ಗಾಯತ್ರಿನಗರ ನಿವಾಸಿ ಎಂ. ಸಂತೋಷ್(25) ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದಿಂದ ನಾಪತ್ತೆಯಾಗಿದ್ದಾರೆ.
ಒಟ್ಟು 12 ಜನರ ತಂಡ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿತ್ತು. ಸಂತೋಷ್ ಭಾನುವಾರ ಸಂಜೆ ನಾಪತ್ತೆಯಾಗಿದ್ದು ಸಾಕಷ್ಟು ಹುಡುಕಾಟ ನಡೆಸಲಾಗಿದೆ. ಮಂಗಳವಾರ ಬೆಳಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ 5 ತಂಡ ಹುಡುಕಾಟ ನಡೆಸಲಿದೆ.
ಟ್ರೆಕ್ಕಿಂಗ್ ಪ್ರಿಯರಿಗೆ ಸಿಹಿಸುದ್ದಿ: ‘ಎತ್ತಿನಭುಜ’ಕ್ಕೆ ಅಧಿಕೃತ ಚಾರಣ
ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು.
12 ಜನರ ತಂಡದಲ್ಲಿದ್ದವರು ಸುಸ್ತಾದ್ದರಿಂದ ತಂಡ ತಂಡವಾಗಿ ನಡೆದುಕೊಂಡು ಬರುತ್ತಿದ್ದರು. 5 ಮಂದಿ ಮುಂದೆ ಹಾಗೂ ಆ ನಂತರ 6 ಜನ ಹಾಗೂ ನಡುವೆ ನಾಪತ್ತೆಯಾದ ಸಂತೋಷ್ ಒಬ್ಬರೇ ಬರುತ್ತಿದ್ದರು. ದಕ್ಷಿಣ ಕನ್ನಡ, ಕೊಡಗು ಅರಣ್ಯ ಸಿಬ್ಬಂದಿಯಿಂದ ಜಂಟಿ ಶೋಧ ನಡೆಸಲಾಗಿದ್ದು ಕತ್ತಲಾದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ.