ಕೈ ನಾಯಕಗೆ ಹೊಸ ಹುದ್ದೆ ಆಫರ್? : ಶುಭ ಹಾರೈಸಿದ ಬಿಜೆಪಿ ನಾಯಕ

Published : Sep 16, 2019, 03:49 PM IST
ಕೈ ನಾಯಕಗೆ ಹೊಸ ಹುದ್ದೆ ಆಫರ್? : ಶುಭ ಹಾರೈಸಿದ ಬಿಜೆಪಿ ನಾಯಕ

ಸಾರಾಂಶ

ಪ್ರಮುಖ ಹುದ್ದೆಯೊಂದಕ್ಕೆ ಕೈ ಮುಖಂಡರೋರ್ವರ ಹೆಸರು ಕೇಳಿ ಬರುತ್ತಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರೋರ್ವರು ಶೂಭ ಹಾರೈಸಿದ್ದಾರೆ.

ಗದಗ (ಸೆ.16): ನಮ್ಮ ಜಿಲ್ಲೆಯ ಹಿರಿಯ ನಾಯಕರಾದ ಎಚ್.ಕೆ. ಪಾಟೀಲರಿಗೆ ವಿರೋಧ ಪಕ್ಷದ ಸ್ಥಾನ ಸಿಗುತ್ತದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಅವರಿಗೆ ವಿಧಾನಸಭೆ ವಿರೋಧ ಪಕ್ಷದ ಸ್ಥಾನ ಸಿಗಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ‘ಚಕ್ರವರ್ತಿ’ ದಿನಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್.ಕೆ. ಪಾಟೀಲ್ ಅವರಿಂದ ನಮ್ಮ ಸರ್ಕಾರಕ್ಕೆ ಇನ್ನಷ್ಟು ಸಕಾರಾತ್ಮಕ ಟೀಕೆಗಳು ಕೇಳಿ ಬರಲಿ ಎಂದು ಆಶಿಸುತ್ತೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮೂಲಕ ಬಹಿರಂಗವಾಗಿಯೇ ಅವರಿಗೆ ಶುಭಾಶಯ ತಿಳಿಸಿ, ನಿಮ್ಮ ಟೀಕೆಗಳನ್ನು ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮಾರ್ಮಿಕವಾಗಿ ಹೇಳಿದರು.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!