Kodagu: ನಂಜರಾಯಪಟ್ಟಣ ತೋಟದಲ್ಲಿ ಅಸ್ವಸ್ಥ ಕಾಡಾನೆಗೆ ಚಿಕಿತ್ಸೆ

By Suvarna News  |  First Published Feb 12, 2022, 1:14 AM IST

ತಾಲೂಕಿನ ಕಾಫಿ ತೋಟವೊಂದರಲ್ಲಿ ನಿತ್ರಾಣಗೊಂಡಿರುವ ಕಾಡಾನೆಯೊಂದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದಾಸವಾಳದಲ್ಲಿ ಅಂದಾಜು 8 ವರ್ಷ ಪ್ರಾಯದ ಹೆಣ್ಣಾನೆ ಶುಕ್ರವಾರ ನಿತ್ರಾಣ ಕಳೆದುಕೊಂಡು ಕಾಫಿ ತೋಟದಲ್ಲಿ ಬಿದ್ದಿದೆ.


ಕೊಡಗು (ಫೆ.12): ತಾಲೂಕಿನ ಕಾಫಿ ತೋಟವೊಂದರಲ್ಲಿ ನಿತ್ರಾಣಗೊಂಡಿರುವ ಕಾಡಾನೆಯೊಂದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದಾಸವಾಳದಲ್ಲಿ ಅಂದಾಜು 8 ವರ್ಷ ಪ್ರಾಯದ ಹೆಣ್ಣಾನೆ ಶುಕ್ರವಾರ ನಿತ್ರಾಣ ಕಳೆದುಕೊಂಡು ಕಾಫಿ ತೋಟದಲ್ಲಿ ಬಿದ್ದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಅವರಿಂದ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಧನಂಜಯ, ಅಯ್ಯಪ್ಪ ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Latest Videos

undefined

Bandipur: ಅರಣ್ಯ ಸಿಬ್ಬಂದಿ ಜೀಪಿನ ಮೇಲೆ ಕಾಡಾನೆ ದಾಳಿ, ನಾಲ್ವರು ಪಾರು

ಹೊರವಲಯದಲ್ಲಿ ಒಂಟಿ ಸಲಗ ಪ್ರತ್ಯಕ್ಷ: ಪಟ್ಟಣದಿಂದ ಕೂಗಳತೆ ದೂರಲ್ಲಿರುವ ಕಂಬಳಗೇರಿ ಕೆರೆಯಲ್ಲಿ ಒಂಟಿ ಸಲಗವೊಂದು ನೆಲೆಯೂರಿದ್ದು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅದನ್ನು ಕಾಡಿಗಟ್ಟುವ ಕಾರ್ಯ ನಡೆಯುತ್ತಿದೆ. ಬೆಳಗ್ಗೆ ಕಂಬಳಗೇರಿ ಕೆರೆಯಲ್ಲಿ 16- 17 ವಯೋಮಾನದ ಆನೆಯೊಂದು ಕಾಣಿಸಿಕೊಂಡ ಸುದ್ದಿ ಸಾರ್ವಜನಿಕರಿಂದ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಆನೆ ಊರಿಗೆ ಬರದಂತೆ ತಡೆಯಲು ಮುಂದಾಗಿದ್ದಾರೆ. 

ಆನೆಯನ್ನು ಬೆದರಿಸಿ ಕೆರೆಯಿಂದ ಹೊರ ತರಲು ಮಾಡುತ್ತಿರುವ ಯತ್ನ ಇನ್ನೂ ಫಲ ನೀಡಿಲ್ಲ. ಆದರೆ, ಜನರಿಗೆ ಹೆದರಿದ ಆನೆ ತನ್ನ ರಕ್ಷಣೆಗಾಗಿ ನೀರಿನಿಂದಲೇ ಹೊರ ಬರುತ್ತಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಹೇಳಿಕೆ ಪ್ರಕಾರ ಸೂರ್ಯಾಸ್ಥದ ನಂತರ ಕತ್ತಲೆಯಲ್ಲಿ ಅದು ಬಂದ ದಾರಿಯಲ್ಲೇ ಹೋಗಬಹುದು ಎನ್ನುತ್ತಾರೆ.

ಎರಡು ಆನೆಗಳು ಜೊತೆಯಾಗಿ ಬಂದಿರಬಹುದು ಎಂದು ಊಹಿಸಲಾಗಿದೆಯಾದರೂ ಇನ್ನೊಂದು ಆನೆ ಪತ್ತೆಯಾಗಿಲ್ಲ. ಕಳೆದ ಒಂದು ತಿಂಗಳಿನಿಂದ ಹಾನಗಲ್ಲ ತಾಲೂಕಿನ ವಿವಿಧೆಡೆ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ರೈತರ ಬೆಳೆ ಹಾನಿಯೂ ಸಂಭವಿಸಿದೆ. ರೈತರಿಗೆ ಪರಿಹಾರ ನೀಡುವಂತೆ ಇಲಾಖೆಗೆ ಮಾಹಿತಿಯನ್ನೂ ನೀಡಲಾಗಿದೆ. ಇತ್ತೀಚಿಗೆ ಮುದ್ದಿನಕೊಪ್ಪ ಗ್ರಾಮದ ಬಳಿ ಆನೆಯೊಂದು ಪುಂಡಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೊಲೀಸ್‌ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದು ಜನರನ್ನು ದೂರ ಕಳಿಸುತ್ತಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಶಿವರಾಜ ಮಠದ, ಉಪ ಅರಣ್ಯಾಧಿಕಾರಿ ಎಸ್‌.ಎಂ. ತಳವಾರ, ಸಿಬ್ಬಂದಿಗಳಾದ ವಿ.ಆರ್‌. ಪಾಟೀಲ, ರಫೀಕ ಝಂಡೇದ್‌, ಮಂಜುನಾಥ ಚವ್ಹಾಣ, ಶ್ರೀಶೈಲ ಕಳಸದ, ಸಂತೋಷ ಸವಣೂರ ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಕಳಿಸುವ ಯತ್ನದಲ್ಲಿ ತೊಡಗಿದ್ದಾರೆ. ಹಾವೇರಿ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಎಸ್‌.ಎ. ಬಾಲಚಂದ್ರ ಅವರೂ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

Mysuru: ಆನೆಯತ್ತ ಬೆಂಕಿ ಸೌದೆ ಎಸೆದ ಆಸಾಮಿ, ಸಿಟ್ಟಿಗೆದ್ದು ಮಾಡಿದ್ದೇನು ನೋಡಿ

ಕಾಡಾನೆಗಳ ಹಾವಳಿ: ಹೋದೆಯಾ ಪಿಚಾಚಿ ಎಂದರೆ ಬಂದೆ ಗವಾಕ್ಷಿಲೀ ಎಂಬ ಗಾದೆ ಮಾತಿನಂತೆ ಕಳೆದ 20ದಿನಗಳಿಂದ ಆನೆಗಳ ಹಾವಳಿಯಿಲ್ಲದೆ ಸ್ವಲ್ಪ ಉಸಿರಾಡುತ್ತಿದ್ದ ರೈತರಿಗೆ ಮತ್ತೆ ಕಾಡಾನೆಗಳ ಕಾಟ ಆರಂಭವಾಗಿದ್ದು, ಗಡಿ ಭಾಗದಲ್ಲಿ ಆತಂಕ ಶುರುವಾಗಿದೆ. ಹೌದು ಕಳೆದ 20ದಿನಗಳಿಂದ ಕಾಡಾನೆಗಳಿಲ್ಲದೆ ಗಡಿ ಪ್ರದೇಶವಾದ ದೋಣಿಮಡಗು ಗ್ರಾಮ ಪಂಚಾಯ್ತಿಯಲ್ಲಿ ರೈತರು ಸ್ವಲ್ಪ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮಂಗಳವಾರ ರಾತ್ರಿ ಮತ್ತೆ ಗಜಪಡೆಗಳು ನರಸಿಂಹಪುರ, ಕದರಿನತ್ತ ಗ್ರಾಮಗಳಲ್ಲಿ ಕಾಣಿಸಿಕೊಂಡು ಭತ್ತ, ಬಾಳೆತೋಟಗಳಿಗೆ ನುಗ್ಗಿ ನಾಶಪಡಿಸಿದೆ.

click me!