ಯಾದಗಿರಿ: ಅರಣ್ಯ ಇಲಾಖೆ ವಾಹನದಲ್ಲೇ ಶ್ರೀಗಂಧ ಸಾಗಣೆ?

By Kannadaprabha News  |  First Published Oct 10, 2023, 10:29 AM IST

ಪೊಲೀಸರಿಂದ ತನಿಖೆ ಆರಂಭ : ಹಲವರ ಮೊಬೈಲ್ ವಶಕ್ಕೆ, ಪರಿಶೀಲನೆ, "ಕನ್ನಡಪ್ರಭ" ಬಯಲಿಗೆಳೆದ ಅರಣ್ಯ ಇಲಾಖೆ ಅಕ್ರಮ, ಹಿಂದಿನ ಆರ್‌.ಎಫ್‌.ಓ. ವಿರುದ್ಧ ಕ್ರಮಕ್ಕೆ ಶಾಸಕ ಕಂದಕೂರು ಆಗ್ರಹ. 


ಆನಂದ್‌ ಎಂ. ಸೌದಿ

ಯಾದಗಿರಿ(ಅ.10): ಅರಣ್ಯ ಇಲಾಖೆಯ ಕಚೇರಿಯಲ್ಲಿ ಜಪ್ತಿ ಮಾಡಿಟ್ಟಿದ್ದ ಸುಮಾರು 1.5 ಕ್ವಿಂಟಲ್‌ನಷ್ಟು ಶ್ರೀಗಂಧದ ತುಂಡುಗಳು ಕಚೇರಿಯಿಂದಲೇ ಕಳ್ಳತನವಾಗಿರುವ ಪ್ರಕರಣದಲ್ಲಿ ಹಿಂದಿನ ವಲಯ ಅರಣ್ಯಾಧಿಕಾರಿ (ಆರ್‌.ಎಫ್‌.ಓ.) ವಿರುದ್ಧವೇ ಆರೋಪ ಮೂಡಿಬಂದಿದೆ. ಹಿಂದಿನ ಆರ್‌.ಎಫ್‌.ಓ. ಜಯವರ್ಧನ್ ತಳವಾರ ಎನ್ನುವವರ ವಿರುದ್ಧ ಇಂತಹ ಗಂಭೀರ ಆರೋಪಿಸಿರುವ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು, ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.

Latest Videos

undefined

ಯಾದಗಿರಿಯಿಂದ ಇತ್ತೀಚೆಗಷ್ಟೇ ಚಿತ್ತಾಪುರ ಸಾಮಾಜಿಕ ಅರಣ್ಯ ವಲಯಕ್ಕೆ ವರ್ಗಾವಣೆಯಾಗಿರುವ ಜಯವರ್ಧನ ತಳವಾರ ಅವರು ಸರ್ಕಾರಿ ಮನೆ ಖಾಲಿ ಮಾಡುವಾಗ ವಾಹನ ಚಾಲಕ ಗವಿ ಎನ್ನುವವರಿಗೆ ಬೆದರಿಸಿ, ಶ್ರೀಗಂಧದ ತುಂಡುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ತನಿಖೆ ನಡೆಸಿ, ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕ ಕಂದಕೂರು ಸಚಿವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಯಾದಗಿರಿ: ಶ್ರೀಗಂಧ ಕಳುವು ಮರೆಮಾಚಲು ಹೊಸ ಮರ ಕಡಿದು ತಂದಿಟ್ಟ ಖದೀಮರು..!

ಕಳವು ಪ್ರಕರಣದ ತನಿಖೆ:

ಇನ್ನು, ಕಚೇರಿಯಲ್ಲೇ ಶ್ರೀಗಂಧ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ನಗರ ಪೊಲೀಸರು, ಸ್ಥಳ ಮಹಜರು ನಡೆಸಿದ್ದಾರೆ. ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಕೆಲವರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅ.1 ರಿಂದ ಅ.3ರ ಮಧ್ಯೆ ಈ ಸ್ಥಳದಲ್ಲಿ ಮೊಬೈಲ್‌ ಕರೆಗಳ ನಡೆದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೊಸ ಮರಗಳ ಕಡಿದ ಪ್ರಕರಣ: ಎಫ್‌ಐಆರ್‌ ದಾಖಲು

ಕಚೇರಿಯಲ್ಲಿ ಶ್ರೀಗಂಧ ಕಳ್ಳತನ ಮರೆಮಾಚಲು ಹೊಸ ಮರಗಳ ಕಡಿದು, ಜಪ್ತಿ ಮಾಡಿಟ್ಟಿದ್ದ ಹಳೆಯ ದಾಸ್ತಾನು ಇದೇ ಎಂದು ತೋರಿಸುವ ಕಾರಣಕ್ಕೆ, ಹೊಸ ಮರಗಳ ಕಡಿದು ಇಲಾಖೆಯ ವಾಹನಗಳಲ್ಲೇ ಅವುಗಳನ್ನು ಸಾಗಿಸಲಾಗಿತ್ತು ಎನ್ನುವ ಆರೋಪ  ಬಗ್ಗೆ ಕನ್ನಡಪ್ರಭ ಸೆ.7 ರಂದು ವರದಿ ಪ್ರಕಟಿಸಿತ್ತು. 

ಈ ಆರೋಪಗಳಿಂದಾಗಿ, ಮಲ್ಲಾ ಅರಣ್ಯ ಭಾಗದಲ್ಲಿ ಪರಿಶೀಲನೆ ನಡೆಸಿದ್ದ ಡಿಸಿಎಫ್‌ ಕಾಜಲ್‌ ಪಾಟೀಲ್‌, ಅಲ್ಲಿ ಹೊಸ ಮರವೊಂದನ್ನು ಕಡಿದದ್ದು ಕಂಡಿದ್ದರಿಂದ ಅರಣ್ಯ ಕಾಯ್ದೆ 1963, ಸೆಕ್ಷನ್‌ 84, 86, 87 ರಡಿ ಒಂದು ಶ್ರೀಗಂಧ ಮರವನ್ನು ಕಡಿದು ಮಾಲು ಸಮೇತ ಆರೋಪಿಗಳು ಪರಾರಿಯಾಗಿರುವ ಕುರಿತು ಅನಾಮಧೇಯರ ಅ.7 ರಂದು ದೂರು ದಾಖಲಿಸಿದ್ದಾರೆ.

click me!