ಬೆಂಗಳೂರಿನ 9 ರಸ್ತೆಗಳಲ್ಲಿ ಜಾರಿಯಾಗಲಿದೆ ಟ್ರಾಫಿಕ್‌ ಟ್ಯಾಕ್ಸ್: ಖಾಸಗಿ ವಾಹನ ಮಾಲೀಕರ ಜೇಬಿಗೆ ಕತ್ತರಿ ಫಿಕ್ಸ್‌!

By Sathish Kumar KH  |  First Published Sep 22, 2023, 6:45 PM IST

ಬೆಂಗಳೂರು ನಗರದ ಟ್ರಾಫಿಕ್‌ ಉಂಟಾಗುವ ಪ್ರಮುಖ 9 ರಸ್ತೆಗಳಲ್ಲಿ ಸರ್ಕಾರವು ರಸ್ತೆಯ ಟೋಲ್‌ ಶುಲ್ಕದ ಮಾದರಿಯಲ್ಲಿ ಟ್ರಾಫಿಕ್‌ ಟ್ಯಾಕ್ಸ್‌ ವಿಧಿಸಲು ಮುಂದಾಗಿದೆ.


ಬೆಂಗಳೂರು (ಸೆ.22): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಪೀಕ್‌ ಅವರ್‌ಗಳಲ್ಲಿ ವಾಹನ ಸಂಚಾರ ತೀವ್ರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಾದ, ಕಾರು, ಬೈಕ್‌ ಟ್ಯಾಕ್ಸಿ ಇತ್ಯಾದ ವಾಹನಗಳಿಗೆ ಬೆಂಗಳೂರಿನ 9 ಪ್ರಮುಖ ವಾಹನ ದಟ್ಟಣೆ ರಸ್ತೆಗಳಲ್ಲಿ ಟ್ರಾಫಿಕ್‌ ಟ್ಯಾಕ್ಸ್‌ ವಿಧಿಸಲು ಸರ್ಕಾರದಿಂದ ವರದಿ ಸಂಗ್ರಹಿಸಲಾಗಿದೆ.

ಹೌದು, ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಕಾಂಗ್ರೆಸ್‌ ಸರ್ಕಾರವು ಟ್ರಾಫಿಕ್‌ ತೆರಿಗೆ ಜಾರಿಗೆ ತರಲು ಮುಂದಾಗಿದೆ. ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೀಕ್ ಸಮಯದಲ್ಲಿ 9 ಪ್ರಮುಖ ಮಾರ್ಗಗಳನ್ನು ಬಳಸುವ ವಾಹನ ಚಾಲಕರಿಗೆ ಟ್ರಾಫಿಕ್‌ ತೆರಿಗೆ ವಿಧಿಸಲು ಮುಂದಾಗಿದೆ. ಇದರಿಂದ ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೇ ಪ್ರಯಾಣದ ಸಮಯ ತಗ್ಗಿಸಲು ಕ್ರಮವನ್ನು ಕೈಗೊಳ್ಳುತ್ತಿದೆ. 

Latest Videos

undefined

ಬೆಂಗಳೂರಿನಲ್ಲಿ ಸುಮಾರು 1.4 ಕೋಟಿ ಜನರು ವಾಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಇನ್ನು 2007ರಲ್ಲಿ ಕೇವಲ 25 ಲಕ್ಷಗಳಿದ್ದ ವಾಹನಗಳ ಸಂಖ್ಯೆ 2022ರ ಅಂತ್ಯಕ್ಕೆ 80 ಲಕ್ಷವನ್ನು ದಾಟಿದೆ. ಬೆಂಗಳುರಿನ ಹೊರ ವಲಯದ ರಸ್ತೆಗಳು ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಪೀಕ್‌ ಅವರ್‌ (ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 5 ರಿಂದ 7 ಗಂಟೆ) ಅವಧಿಯಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಿರುತ್ತದೆ. ಎಷ್ಟೇ ಟ್ರಾಫಿಕ್‌ ಇದ್ದರೂ ಜನರು ಮಾತ್ರ ತಮ್ಮ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುತ್ತಾರೆಯೇ ಹೊರತು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದಿಲ್ಲ. ಆದ್ದರಿಂದ, ಖಾಸಗಿ ವಾಹನ ಸವಾರರಿಗೆ ಪ್ರಮುಖ ರಸ್ತೆಗಳಲ್ಲಿ ಪೀಕ್‌ ಅವರ್‌ನಲ್ಲಿ ಟ್ರಾಫಿಕ್‌ ಟ್ಯಾಕ್ಸ್‌ ವಿಧಿಸಲು ಮುಂದಾಗಿದೆ. ಟೋಲ್‌ ಶುಲ್ಕದ ಮಾದರಿಯಲ್ಲಿಯೇ ಟ್ರಾಫಿಕ್‌ ಶುಲ್ಕವನ್ನು ವಸೂಲಿ ಮಾಡಿ ರಸ್ತೆಯಲ್ಲಿ ಸಂಚಾರಕ್ಕೆ ಬಿಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆದಾಯದ ಮೂಲವಾಗಿಯೂ ಇದನ್ನು ಪರಿಗಣಿಸಲಾಗುತ್ತಿದೆ.

ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್: ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಎಣ್ಣೆ ಲಭ್ಯ!

ಸರ್ಕಾರದ ಯೋಜನೆ ಮತ್ತು ಅಂಕಿ ಅಂಶಗಳ ಇಲಾಖೆ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿದ 'ಕರ್ನಾಟಕದ ದಶಕ-1 ಟ್ರಿಲಿಯನ್ ಆರ್ಥಿಕತೆಯ ನೀಲನಕ್ಷೆ' ಎಂಬ ವರದಿಯಲ್ಲಿ ದಟ್ಟಣೆ ಸುಂಕವನ್ನು ವಿಧಿಸುವ ಬಗ್ಗೆ ತಿಳಿಸಲಾಗಿದೆ. ಈ ವರದಿಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಟ್ರಾಫಿಲ್‌ ಟೋಲ್‌ ವಿಧಿಸುವ ಮೂಲಕ ವಾಹನ ದಟ್ಟಣೆ ತಗ್ಗಿಸಲು ಉಪಾಯವನ್ನು ನೀಡಿದೆ. ಬೆಂಗಳೂರಿನಲ್ಲಿ ಕೇವಲ ಶೇ.48 ರಷ್ಟು ಸಾರ್ವಜನಿಕ ವಾಹನಗಳಿದ್ದು, ಉಳಿದ ಶೇ.52 ಖಾಸಗಿ ವಾಹನಗಳಿವೆ. ಹೀಗಾಗಿ ಟ್ರಾಫಿಕ್‌ ಟೋಲ್‌ ವಿಧಿಸಿದರೆ ಸಾರ್ವಜನಿಕ ಸಾರಿಗೆಯ ಬಳಕೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ಬಿಎಂಟಿಸಿ ಬಸ್ಸುಗಳು, ಕಾರುಗಳು ಮತ್ತು ಶೇರಿಂಗ್‌ ವಾಹನಗಳ ಪ್ರಯಾಣ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್‌ ಟೋಲ್‌ ವಿಧಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧಿಕಾರಿಗಳು ಕೂಡ ಹಸಿರು ನಿಶಾನೆ ತೋರಿಸಿದ್ದಾರೆ. ಇದರಿಂದ ಜನರು ಖಾಸಗಿ ವಾಹನ ಬಿಟ್ಟು ಸರ್ಕಾರದ ಸಾರಿಗೆ ಮತ್ತು ಸಾರ್ವಹನಿಕ ಸಾರಿಗೆ ಬಳಸಲು ಮುಂದಾಗಲಿದ್ದಾರೆ. ಈ ಟ್ರಾಫಿಕ್ ಶುಲ್ಕಗಳಿಂದಾಗಿ ಖಾಸಗಿ ವಾಹನಗಳ ಸಂಚಾರದ ಶುಲ್ಕ ಹೆಚ್ಚಾಗುವುದರಿಂದ ಸಾರ್ವಜನಿಕ ಸಾರಿಗೆಯ ಆಯ್ಕೆ ಅನಿವಾರ್ಯ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ನಾಳೆ ಮಂಡ್ಯ ಬಂದ್‌: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರೇ ಎಚ್ಚರ!

  • ಟ್ರಾಫಿಕ್‌ ಟೋಲ್‌ ವಿಧಿಸುವ ನಿರೀಕ್ಷಿತ ರಸ್ತೆಗಳು
  • ಹೊರ ವರ್ತುಲ ರಸ್ತೆ
  • ಸರ್ಜಾಪುರ ರಸ್ತೆ
  • ಹೊಸೂರು ರಸ್ತೆ
  • ಹಳೆ ವಿಮಾನ ನಿಲ್ದಾಣ ರಸ್ತೆ
  • ಹಳೆ ಮದ್ರಾಸ್ ರಸ್ತೆ
  • ಬಳ್ಳಾರಿ ರಸ್ತೆ
  • ಬನ್ನೇರುಘಟ್ಟ ರಸ್ತೆ
  • ಕನಕಪುರ ರಸ್ತೆ
  • ಮಾಗಡಿ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆ
click me!