Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!

By Govindaraj S  |  First Published Sep 22, 2023, 11:10 AM IST

ಇಡೀ ರಾಜ್ಯದಲ್ಲೇ ಕಾಡಿನ ತಾಲೂಕು ಎಂದೇ ಖ್ಯಾತಿಯಾಗಿರೋದು ಕಾಫಿನಾಡ ಕಳಸ. ಅಪ್ಪಟ ಮಲೆನಾಡು. ವರ್ಷದ ಮುಕ್ಕಾಲು ಭಾಗ ಮಳೆಯಾಗೋ ಇಲ್ಲಿ ಹಸಿರವನರಾಶಿಗೇನು ಕೊರತೆ ಇಲ್ಲ. ಪ್ರವಾಸ ಹಾಗೂ ಧಾರ್ಮಿಕ ನಂಬಿಕೆ ಎರಡಕ್ಕೂ ನ್ಯಾಯ ಒದಗಿಸಿರುವ ತಾಲೂಕು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಸೆ.22): ಇಡೀ ರಾಜ್ಯದಲ್ಲೇ ಕಾಡಿನ ತಾಲೂಕು ಎಂದೇ ಖ್ಯಾತಿಯಾಗಿರೋದು ಕಾಫಿನಾಡ ಕಳಸ. ಅಪ್ಪಟ ಮಲೆನಾಡು. ವರ್ಷದ ಮುಕ್ಕಾಲು ಭಾಗ ಮಳೆಯಾಗೋ ಇಲ್ಲಿ ಹಸಿರವನರಾಶಿಗೇನು ಕೊರತೆ ಇಲ್ಲ. ಪ್ರವಾಸ ಹಾಗೂ ಧಾರ್ಮಿಕ ನಂಬಿಕೆ ಎರಡಕ್ಕೂ ನ್ಯಾಯ ಒದಗಿಸಿರುವ ತಾಲೂಕು. ಹೊಯ್ಸಳರ ಕಾಲದ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಹಾಗೂ ಅನ್ನಪೂರ್ಣೇಶ್ವರಿ ದೇಗುಲವಿರುವುದು ಇಲ್ಲೇ. ವಸಿಷ್ಠ ಮುನಿಗಳು ತಪಸ್ಸು ಮಾಡಿದ ವಸಿಷ್ಠ ತೀರ್ಥ ಯಾತ್ರಾ ಸ್ಥಳಕ್ಕೆ ಹೋಗಲು ಹಾಗೂ ಇಲ್ಲಿನ ಪ್ರವಾಸಿ ತಾಣಗಳ ಸವಿ ಸವಿಯಲು ರಾಜ್ಯದ ಮೂಲೆ-ಮೂಲೆಗಳಿಂದ ನಿತ್ಯ ನೂರಾರು ಪ್ರವಾಸಿಗರು ಈ ಭಾಗಕ್ಕೆ ಆಗಮಿಸುತ್ತಾರೆ.

Latest Videos

undefined

ಸಂಕಷ್ಟದಲ್ಲಿ ಸಂಚಾರ: ಕಳಸವರೆಗೂ ಸಂತೋಷದಿಂದ ಬರುವ ಪ್ರವಾಸಿಗರಿಗೆ ವಸಿಷ್ಠ ತೀರ್ಥಕ್ಕೆ ಹೋಗುವ ರಸ್ತೆ ಆರಂಭವಾದರೆ ಜೀವ ಕೈಯಲ್ಲಿ ಇಟ್ಕಂಡು ಹೋಗಬೇಕು. ಅಡಿಯಾಳದ ಗುಂಡಿಯಲ್ಲಿ ಒಂದು ರೀತಿ ಸಾವಿನ ಸಂಚಾರವೇ ಸರಿ. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ಇದು ಕೇವಲ ಪ್ರವಾಸಿಗರ ಸಮಸ್ಯೆಯಲ್ಲ. ಕಳಸದಿಂದ ಕಳಸೇಶ್ವರ ವಶಿಷ್ಠ ತೀರ್ಥಕ್ಕೆ ಹೋಗುವ ಕಂಚಿನಕೆರೆ, ಮುಂಡಾನಿ, ಕಾಳಿಕೆರೆ, ಬೆಳ್ಳುಳ್ಳಿ ಮನೆ, ಕೊಂಡದ್ ಮನೆ, ಗೊಡ್ಲುಮನೆ, ಮಾಗಲು, ಗ್ರಾಮಗಳಿಗೆ ಹೋಗಲು ಇದೇ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಈಗ ತುಂಬಾನೇ ಹದಗೆಟ್ಟಿದ್ದು, ಹೆಜ್ಜೆ-ಹೆಜ್ಜೆಗೂ ಗುಂಡಿ-ಗೋಟರುಗಳಿಂದ ತುಂಬಿದೆ. ಸ್ಥಳಿಯರು ಹತ್ತಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿ ಈಗ ಸುಮ್ಮನಾಗಿದ್ದಾರೆ. 

ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

ಮೂಲಭೂತ ಸೌಕರ್ಯಕ್ಕೆ ಆಗ್ರಹ: ಈ ಮಾರ್ಗದಲ್ಲಿ ಸುಮಾರು 100 ರಿಂದ 150 ಮನೆಗಳಿವೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಜನಾಂಗದವರೇ ವಾಸಿಸುತ್ತಿದ್ದು ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕೂಡ ಇಲ್ಲ. ಕಾಡಿನ ತಾಲೂಕಿನ ಈ ಜನ ಕಾಡುಪ್ರಾಣಿಗಳಂತೆಯೇ ಬದುಕುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಚರಂಡಿ ಕಾಮಗಾರಿ ನಡೆದಿದ್ರು ಸಂಪೂರ್ಣ ಕಳಪೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಚರಂಡಿ ಮಾಡಿದರೂ ಅದರಲ್ಲಿ ನೀರು ಕೂಡ ಹೋಗೋದಿಲ್ಲ. ಬೀದಿ ದೀಪಕ್ಕೆ ಮನವಿ ಮಾಡಿ ಕೈಬಿಟ್ಟಿದ್ದಾರೆ. ಅಧಿಕಾರಿಗಳ ರೆಸ್ಪಾನ್ಸ್ ಕೇಳೋದೇ ಬೇಡ. ಈ ಕಾಲೋನಿ ರಸ್ತೆಯಲ್ಲಿ ಓಡಾಡುವುದೇ ದುಸ್ಥರ. ಕಳಸೇಶ್ವರ ದೇವಸ್ಥಾನದಿಂದ ವಶಿಷ್ಟತೀರ್ಥ ಹಾಗೂ ಇಲ್ಲಿನ ತೂಗು ಸೇತುವೆ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. 

ನಮ್ಮನ್ನ ಕೆಣಕಿದರೆ ಮಸೀದಿಯಲ್ಲೂ ಗಣೇಶ ಪ್ರತಿಷ್ಠಾಪಿಸುತ್ತೇವೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಇಲ್ಲಿನ ಸೌಂದರ್ಯ ಸವಿದು, ಪೋಟೋ ಶೂಟ್ ಮಾಡುತ್ತಾರೆ, ಪ್ರೇ ವೇಡ್ಡಿಂಗ್ ಶೂಟ್ ಕೂಡ ನಡೆಯುತ್ತಿರುತ್ತೆ. ಕೆಲ ಚಲನಚಿತ್ರಗಳ ಚಿತ್ರೀಕರಣವೂ ನಡೆದಿದೆ. ಆದ್ರೆ, ಇಲ್ಲಿನ ರಸ್ತೆಯ ಪರಿಸ್ಥಿತಿ ನೋಡಿ ಕೆಲ ಪ್ರವಾಸಿಗರು ಇಲ್ಲಿಗೆ ಹೋಗೋದಕ್ಕೂ ಹಿಂದೇಟು ಹಾಕ್ತಿದ್ದಾರೆ. ಒಟ್ಟಾರೆ, ವಶಿಷ್ಟತೀರ್ಥ ಮುನಿಗಳು ತಪಸ್ಸು ಮಾಡಿದ ಜಾಗ ನೋಡಲು ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೂ ನೆಮ್ಮದಿಯಾಗಿ ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಬಿದ್ದಿರುವ ಗುಂಡಿ-ಗೊಟರಿನಿಂದ ಪ್ರತಿ ನಿತ್ಯ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇವೆ. ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಇನ್ನಾದರೂ ಸಂಬಂಧ ಪಟ್ಟವರು ಇತ್ತ ಗಮನ ಹರಿಸಿ ಇಲ್ಲಿನ ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಿದರೆ ಸ್ಥಳಿಯರು ಹಾಗೂ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಏನ್ ಮಾಡ್ತಾರೋ ಕಾದು ನೋಡ್ಬೇಕು.

click me!