ದಾವಣಗೆರೆ: ಜಲಸಿರಿ ಕಾಮಗಾರಿಯಿಂದ ಸಂಚಾರ ಪರದಾಟ

By Kannadaprabha News  |  First Published Oct 16, 2022, 8:25 AM IST
  • ಜಲಸಿರಿ ಕಾಮಗಾರಿಯಿಂದ ಸಂಚಾರ ಪರದಾಟ
  • ನಿತ್ಯವೂ ಸಾವಿರಾರು ವಾಹನಗಳ ಸಂಚಾರಕ್ಕೆ ತೊಂದರೆ
  • ಗುತ್ತಿಗೆದಾರರು, ಸ್ಥಳದಲ್ಲಿ ಕಾಮಗಾರಿ ಜವಾಬ್ದಾರಿ ಹೊತ್ತವರಿಗೆ ಸಾರ್ವಜನಿಕರ ತರಾಟೆ

ದಾವಣಗೆರೆ (ಅ.16) : ಜಲಸಿರಿ ಕಾಮಗಾರಿ ವೇಳೆ ಸಂಚಾರ ನಿರ್ವಹಣೆಗೆ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ನಿತ್ಯವೂ ಸಾವಿರಾರು ವಾಹನ ಸಂಚರಿಸುವ ನಿರಂತರ ವಾಹನ ದಟ್ಟಣೆಯ ವಿಜಯ ಹೊಟೇಲ್‌ನಿಂದ ಡಾ.ಎಂ.ಸಿ.ಮೋದಿ ವೃತ್ತ ಹಾಗೂ ಪಿಜೆ ಬಡಾವಣೆಯ ಅನೇಕ ಮುಖ್ಯರಸ್ತೆಗಳಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ.

ವಿಮೆ ಮಾಫಿಯಾ: ಇದು ಸಾವಿನಲ್ಲಿ ಕಾಸು ಮಾಡುವ ಗ್ಯಾಂಗ್

Tap to resize

Latest Videos

ನಗರದ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಜಲ ಸಿರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ವೇಳೆ ಸಂಚಾರ ನಿರ್ವಹಣೆಗೆ ಗುತ್ತಿಗೆದಾರರಾಗಲೀ, ಅಧಿಕಾರಿಗಳಾಗಲೀ ಕಾಳಜಿ ತೋರದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ ಎಂಬುದಾಗಿ ಸಾರ್ವಜನಿಕರು ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ನಿತ್ಯವೂ ಕೆಲಸ, ಕಾರ್ಯಕ್ಕೆಂದು ಹೋಗುವವರಿಗೆ ಇಡೀ ಪಿಜೆ ಬಡಾವಣೆಯ ಈ ಭಾಗದಲ್ಲಿ ನೂರು ಮೀಟರ್‌ ವಾಹನ ಸಾಗಲು ಚಾಲಕರು ಹರಸಾಹಸವನ್ನೇ ಮಾಡಬೇಕಾದ ಪರಿಸ್ಥಿತಿ ಇಲ್ಲಿದೆ ಇದೆ. ಕಾಮಗಾರಿ ಹೆಸರಿನಲ್ಲಿ ನಿತ್ಯವೂ ಸಾವಿರಾರು ವಾಹನಗಳ ಸಂಚಾರಕ್ಕೆ ತೊಂದರೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ ಸೇರಿದಂತೆ ಅನೇಕರು ಕಾಮಗಾರಿ ಸ್ಥಳದಲ್ಲಿ ಕೆಲಸ ನಿಲ್ಲಿಸಿ, ಸಂಚಾರ ನಿರ್ವಹಣೆ ಮಾಡುವಂತೆ ಗುತ್ತಿಗೆದಾರರು, ಸ್ಥಳದಲ್ಲಿದ್ದ ಕಾಮಗಾರಿ ಜವಾಬ್ದಾರಿ ಹೊತ್ತವರಿಗೆ ತರಾಟೆಗೆ ತೆಗೆದುಕೊಂಡರು. ಆಗ ಜಾಗೃತರಾದ ಗುತ್ತಿಗೆದಾರರ ಕಡೆಯವರು 15 ವಿಸಲ್‌(ಪೀಪಿ) ತರಿಸಿ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳು್ಳವ ಭರವಸೆ ನೀಡಿದ ನಂತರವಷ್ಟೇ ಆಕ್ರೋಶಗೊಂಡಿದ್ದವರ ಸಿಟ್ಟು ಶಮನವಾಯಿತು.

ಸಂಚಾರಕ್ಕೆ ತೀವ್ರ ತೊಂದರೆ:

ಮುಖ್ಯ ಬಡಾವಣೆಗಳಿಗೆ, ಬೈಪಾಸ್‌ ರಸ್ತೆಗೆ, ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಸಾಗುವ ಮುಖ್ಯ ರಸ್ತೆ ಇದು. ಇಂತಹ ರಸ್ತೆಯಲ್ಲೇ ಕಾಮಗಾರಿ ಹೆಸರಿನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಸಹಜವಾಗಿಯೇ ಜನರು ತಾಳ್ಮೆ ಕಳೆದುಕೊಂಡು ಗಲಾಟೆ ಮಾಡಿದರು. ಮುಖ್ಯ ರಸ್ತೆ ಕಾಮಗಾರಿ ಹೆಸರಿನಲ್ಲಿ ಬಂದ್‌ ಆಗಿರುವ ಕಾರಣಕ್ಕೆ ರೋಗಿಗಳಿಗೆ, ಅಂಬ್ಯುಲೆನ್ಸ್‌ಗಳ ಸಂಚಾರ, ಶಾಲಾ-ಕಾಲೇಜು ಬಸ್‌ಗಳ ಸಂಚಾರಕ್ಕೆ, ಸಿಟಿ ಬಸ್‌, ಇತರೆ ಬಸ್ಸ, ವಾಹನಗಳು, ಲಘು-ಭಾರಿ ವಾಹನಗಳ ಸಂಚಾರಕ್ಕೆ ಕಳೆದ ನಾಲ್ಕೈದು ದಿನಗಳಿಂದಲೂ ತೀವ್ರ ತೊಂದರೆಯಾಗುತ್ತಲೇ ಇದೆ.

ಎಲ್ಲರೂ ಕೆಲಸ ಕಾರ್ಯಕ್ಕೆ ಹೋಗುವಂತಹ ಮುಖ್ಯ ಸಮಯದಲ್ಲೇ ರಸ್ತೆಗಳನ್ನು ಕಳೆದ ನಾಲ್ಕೈದು ದಿನಗಳಿಂದ ಬ್ಲಾಕ್‌ ಮಾಡಿದ್ದರಿಂದ ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಇಂತಹ ಅವ್ಯಸ್ಥೆಯು ಮೂಲಭೂತ ನಾಗರಿಕ ಆಡಳಿತ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಜನರಿಗೆ ತೊಂದರೆಯಾಗುತ್ತಿದ್ದರೂ, ಸಮಸ್ಯೆ ಪರಿಹರಿಸುವ ಕೆಲಸವಾಗುತ್ತಿಲ್ಲ. ಎಲ್ಲರಿಗೂ ಸಮಯವಂಬುದು ಅತೀ ಅಮೂಲ್ಯ. ಅದರಲ್ಲೂ ರೋಗಿಗಳಿಗೆ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅಂಬ್ಯುಲೆನ್ಸ್‌, ವಾಹನಗಳು ತ್ವರಿತವಾಗಿ ಆಸ್ಪತ್ರೆ ತಲುಪಿದರಷ್ಟೇ ಜೀವ ಉಳಿಸಲು ಸಾಧ್ಯ. ಆಕಸ್ಮಾತ್‌ ಯಾವುದೇ ಪ್ರಾಣ ಹಾನಿಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಅನೇಕರದ್ದು.

Big 3: ಮೂಲಸೌಕರ್ಯ ಕೊರತೆ: ದಾವಣಗೆರೆಯ ಹೊಸ ಚಿಕ್ಕನಹಳ್ಳಿ ನಿವಾಸಿಗಳ ನರಕಯಾತನೆ

ಕಾಮಗಾರಿಗಳ ರಾತ್ರಿ ವೇಳೆ ಕೈಗೊಳ್ಳಿ:

ಅತ್ಯಂತ ಕಿಷ್ಕಿಂಧೆಯಂತಿರುವ ಮೋದಿ ಕಾಂಪೌಂಡ್‌ ರಸ್ತೆ, ಲೂರ್ಡ್ಸ್ ಬಾಲಕರ ಶಾಲೆ ರಸ್ತೆ, ಮೃತ್ಯುಂಜಯ ನರ್ಸಿಂಗ್‌ ಹೋಂ ಪಕ್ಕದಿಂದ ಚೇತನ ಹೊಟೆಲ್‌ ಕಡೆ ಹೋಗುವ ರಸ್ತೆ, ಡಾ.ನವೀನ್‌ ನಾಡಿಗೆ ಕ್ಲಿನಿಕ್‌, ಮಲ್ಲಿಗೆ ನರ್ಸಿಂಗ್‌ ಹೋಂ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವೇ ಕಷ್ಟ. ಅಂತಹದ್ದರಲ್ಲಿ ಬಸ್ಸು, ಲಾರಿ, ಲಘು ವಾಹನಗಳ ಸಂಚರಿಸಲು ಅನುಮತಿಸಲಾಗಿದೆ. ಇದರಿಂದ ದೊಡ್ಡ ವಾಹನಗಳಿಂದಲೂ ಸಂಚಾರ ದಟ್ಟಣೆ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಇಂತಹ ಕಾಮಗಾರಿಗಳನ್ನು ಬೆಂಗಳೂರು ಇತರೆ ಮಹಾ ನಗರಗಳಲ್ಲಿ ಕೈಗೊಳ್ಳುವಂತೆ ರಾತ್ರಿ ವೇಳೆ ಯಾಕೆ ಕೈಗೊಳ್ಳಲಾಗುತ್ತಿಲ್ಲ ಎಂದು ಹೈಕೋರ್ಚ್‌ ವಕೀಲ ಕೀರ್ತಿಕುಮಾರ ಕಿಣಿ ಆಡಳಿತ ಯಂತ್ರಕ್ಕೆ ಪ್ರಶ್ನಿಸಿದ್ದಾರೆ.

click me!