ಬೆಂಗ್ಳೂರಿನ ವಿಧಾನಸೌಧದ ಮುಂದೆಯೇ ರಸ್ತೆ ಗುಂಡಿ..!

By Kannadaprabha NewsFirst Published Oct 16, 2022, 8:17 AM IST
Highlights

ರಸ್ತೆಯಲ್ಲಿ ಗುಂಡಿ ಮಾತ್ರವಲ್ಲ. ರಸ್ತೆಯ ಕೆಲವು ಭಾಗದಲ್ಲಿ ಕಾಂಕ್ರಿಟ್‌ ಸಂಪೂಣವಾಗಿ ಬಿರುಕು ಬಿಟ್ಟಿದೆ. ಮೆಟ್ರೋ ಸುರಂಗ ಮಾರ್ಗ ಈ ರಸ್ತೆಯ ಕೆಳಭಾಗದಲ್ಲಿಯೇ ಹಾದು ಹೋಗಿದೆ

ಬೆಂಗಳೂರು(ಅ.16):  ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲ ಮಂತ್ರಿ-ಮಹೋದವರು ಹಾಗೂ ಘನ ಸರ್ಕಾರದ ಅತ್ಯುನ್ನತ ಹುದ್ದೆಯ ಅಧಿಕಾರಿಗಳು ಶಕ್ತಿಕೇಂದ್ರ ವಿಧಾನಸೌಧ ಆಗಮಿಸುವ ಅಂಬೇಡ್ಕರ್‌ ವೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಗುಂಡಿಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ ಈಗಂತೂ ಗುಂಡಿಗಳಿಲ್ಲ ರಸ್ತೆಗಳೇ ಇಲ್ಲ. ಒಂದೊಂದು ರಸ್ತೆಯಲ್ಲಿ ನೂರಾರು ಸಂಖ್ಯೆಯ ಗುಂಡಿಗಳಿವೆ. ಆದರೆ, ರಾಜ್ಯದ ಶಕ್ತಿಕೇಂದ್ರ ಎಂದು ಕರೆಸಿಕೊಳ್ಳುವ ಹಾಗೂ ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳು ನಿತ್ಯ ಸಂಚರಿಸುವ ವಿಧಾನಸೌಧದ ಮುಂಭಾಗದ ಅಂಬೇಡ್ಕರ್‌ ವೀದಿಯಲ್ಲಿಯೇ ದೊಡ್ಡ ಗುಂಡಿ ಬಿದ್ದಿರುವುದು ಆಡಳಿತರೂಢ ಸರ್ಕಾರದ ಕಾರ್ಯವೈಖರಿಯನ್ನು ಬಿಂಬಿಸುತ್ತಿದೆ.

ರಸ್ತೆಯಲ್ಲಿ ಗುಂಡಿ ಮಾತ್ರವಲ್ಲ. ರಸ್ತೆಯ ಕೆಲವು ಭಾಗದಲ್ಲಿ ಕಾಂಕ್ರಿಟ್‌ ಸಂಪೂಣವಾಗಿ ಬಿರುಕು ಬಿಟ್ಟಿದೆ. ಮೆಟ್ರೋ ಸುರಂಗ ಮಾರ್ಗ ಈ ರಸ್ತೆಯ ಕೆಳಭಾಗದಲ್ಲಿಯೇ ಹಾದು ಹೋಗಿದೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಿ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ರಸ್ತೆ ಸರಿಪಡಿಸಿದರೆ ಉತ್ತಮ ಎನ್ನುತ್ತಾರೆ ವಾಹನ ಸವಾರರು.

Latest Videos

ಬೆಂಗಳೂರು: ನಾಲ್ಕೇ ವರ್ಷದಲ್ಲಿ ಕಿತ್ತು ಹೋದ ದುಬಾರಿ ವೆಚ್ಚದ ಚರ್ಚ್‌ ಸ್ಟ್ರೀಟ್‌ ರಸ್ತೆ..!

ನೆಪ ಹೇಳುವ ಪಾಲಿಕೆ

ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಒಂದಲ್ಲ ಒಂದು ನೆಪ ಹೇಳುತ್ತಲೇ ಬರುತ್ತಿದ್ದಾರೆ. ಗುಂಡಿ ಮುಚ್ಚುವ ಕೆಲಸ ಮಾತ್ರ ಮಾಡುತ್ತಿಲ್ಲ. ಇನ್ನು ವಾರದ ಹಿಂದೆ ಮುಚ್ಚಿದ ರಸ್ತೆ ಗುಂಡಿಗಳು ಮತ್ತೆ ಬಾಯ್ದೆರೆದುಕೊಳ್ಳುತ್ತಿವೆ. ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ಬಿಬಿಎಂಪಿ ರಸ್ತೆ ಮತ್ತು ಮೂಲಸೌರ್ಯ ವಿಭಾಗದ ಅಧಿಕಾರಿಗಳು ಮಳೆ ನೆಪ ನೀಡಿ ಜನರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ.
 

click me!