ಟ್ರ್ಯಾಕ್ಟರ್ ಇಂಜಿನ್ ಮೇಲೆದ್ದು ಟ್ರೇಲರ್ಗೆ ಬಡಿದು ಮಧ್ಯದಲ್ಲಿ ಸಿಲುಕಿ ಚಾಲಕ ಸಾವು| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರದ ಬಳಿ ನಡೆದ ಘಟನೆ| ಗದಗ ಜಿಲ್ಲೆ ರೋಣ ತಾಲೂಕಿನ ಹಳ್ಳಗಳಿಂದ ಮರಳುನ್ನು ತೆಗೆದುಕೊಂಡು ಮಾಲಗಿತ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ದಿಬ್ಬ ತಾಗಿ ಟ್ರ್ಯಾಕ್ಟರ್ ಎಂಜಿನ್ ಮೇಲೆ ಎದ್ದು ನಡೆದ ದುರ್ಘಟನೆ|
ಹನುಮಸಾಗರ(ಮೇ.25): ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಇಂಜಿನ್ ಮೇಲೆದ್ದು ಟ್ರೇಲರ್ಗೆ ಬಡಿದು ಮಧ್ಯದಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಮಾಲಗಿತ್ತಿ ಗ್ರಾಮದ ಬಳಿ ಭಾನುವಾರ ನಡೆದಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಗುಳಗುಳಿ ಗ್ರಾಮದ ದೇವೇಂದ್ರಪ್ಪ ಮಲ್ಲಿಕಾರ್ಜುನ ಸಿಗ್ಲಿ (35) ಮೃತ ದುರ್ದೈವಿ. ರೋಣ ತಾಲೂಕಿನ ಹಳ್ಳಗಳಿಂದ ಮರಳುನ್ನು ತೆಗೆದುಕೊಂಡು ಮಾಲಗಿತ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ದಿಬ್ಬ ತಾಗಿ ಟ್ರ್ಯಾಕ್ಟರ್ ಎಂಜಿನ್ ಮೇಲೆ ಎದ್ದು ಟ್ರೇಲರ್ಗೆ ಬಡಿದಿದೆ.
ಲಾಕ್‌ಡೌನ್: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್ ಪೊಲೀಸ್ ಠಾಣೆ, ನಿತ್ಯ ದಾಸೋಹ
ಸ್ಟೇರಿಂಗ್ ಬಡಿದು ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ಹನುಮಸಾಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.