ಶ್ವಾಸಕೋಶ ತುಂಬಾ ಹಾನಿಗೊಳಗಾಗಿದ್ದರಿಂದ ಇಲ್ಲಾಳ ಅವರಿಗೆ ತಮ್ಮ ಸ್ವಸಾರ್ಥ್ಯದ ಮೇಲೆ ಶ್ವಾಸೋಚ್ವಾಸ ಮಾಡಲು ಆಗುತ್ತಿಲ್ಲ. ಅದಕ್ಕೆ ಅನುಕೂಲ ಮಾಡಿಕೊಡಲು ವೈದ್ಯರು ಈ ಶಸ್ತ್ರಚಿಕಿತ್ಸೆ ತುರ್ತಾಗಿ ಕೈಗೊಂಡಿದ್ದು ಅದು ಯಶಸ್ವಿಯಾಗಿದೆ.
ಕಲಬುರಗಿ(ಅ.01): ಅಕ್ರಮ ಗಾಂಜಾ ದಂಧೆಕೋರರ ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿರುವ ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ್ ಪ್ರಜ್ಞಾಹೀನ ಸ್ಥಿತಿ ಹಾಗೇ ಮುಂದುವರಿದಿದೆ. ಹಲ್ಲೆಯಿಂದಾಗಿ ಅವರ ಶ್ವಾಸನಾಳ ತೀವ್ರವಾಗಿ ಜಖಂ ಗೊಂಡಿದೆ. ಹೀಗಾಗಿ ಮಣಿಪಾಲ್ ಆಸ್ಪತ್ರೆ ವೈದ್ಯರು ಕಳೆದ ಬುಧುವಾರವೇ ಇಲ್ಲಾಳರಿಗೆ ಶ್ವಾಸನಾಳದ ಟ್ರಕಿಯಾಸ್ಟಮಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.
ಶ್ವಾಸಕೋಶ ತುಂಬಾ ಹಾನಿಗೊಳಗಾಗಿದ್ದರಿಂದ ಇಲ್ಲಾಳ ಅವರಿಗೆ ತಮ್ಮ ಸ್ವಸಾರ್ಥ್ಯದ ಮೇಲೆ ಶ್ವಾಸೋಚ್ವಾಸ ಮಾಡಲು ಆಗುತ್ತಿಲ್ಲ. ಅದಕ್ಕೆ ಅನುಕೂಲ ಮಾಡಿಕೊಡಲು ವೈದ್ಯರು ಈ ಶಸ್ತ್ರಚಿಕಿತ್ಸೆ ತುರ್ತಾಗಿ ಕೈಗೊಂಡಿದ್ದು ಅದು ಯಶಸ್ವಿಯಾಗಿದೆ. ಟ್ರಕಿಯಾಸ್ಟಮಿ ಸರ್ಜರಿಯಿಂದ ಗಾಳಿ ಸಾಗುವ ಮಾರ್ಗದ ಶ್ವಾಸನಾಳಕ್ಕೇ ರಂಧ್ರ ಕೊರೆದು ಶ್ವಾಸಕ್ರಿಯೆಗೆ ಪರ್ಯಾಯ ದಾರಿ ಕಲ್ಪಿಸಲಾಗಿದೆ. ಶಸ್ತ್ರಕ್ರಿಯೆ ನಂತರ ಇಲ್ಲಾಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಬೆಂಗಳೂರಲ್ಲೇ ಕ್ಯಾಂಪ್ ಹೂಡಿರುವ ಕಲಬುರಗಿ ಪೊಲೀಸ್ ಅಧಿಕಾರಿ ಯೊಬ್ಬರು ’ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
undefined
ಕಲಬುರಗಿ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ: 3 ದಿನ ಆಯ್ತು, ಅಪ್ಪ ಕಣ್ಣುಬಿಟ್ಟು ನಮ್ಮನ್ನ ನೋಡಿಲ್ಲ..!
ಇನ್ನೆರಡು ದಿನಗಳಲ್ಲಿ ಸ್ವಯಂ ಆಗಿ ಇಲ್ಲಾಳ ಶ್ವಾಸಕ್ರಿಯೆ ನಡೆಸುವ ನಿರೀಕ್ಷೆ ಇದೆ. ಇನ್ನೂ ಐಸಿಯೂನಲ್ಲಿಯೇ ಚಿತಿಚ್ಸೆ ಸಾಗಿದ್ದು ಅವರ ದೇಹಸ್ಥಿತಿಯಲ್ಲಿನ ಸುದಾರಣೆ ಗಮನಿಸಿಕೊಂಡು ಅವರನ್ನು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಜನರಲ್ ವಾರ್ಡ್‌ಗೆ ಸ್ಥಳಾಂತರ ಮಾಡುವ ಇರಾದೆ ಮಣಿಪಾಲ್ ವೈದ್ಯರು ಹೊಂದಿದ್ದಾರೆ.
ಗಾಂಜಾ ದಂಧೆಕೋರರು ದಾಳಿಯಲ್ಲಿ ಇಲ್ಲಾಳರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಂಟರ್, ಬಡಿಗೆಗಳಿಂದ ಮುಖಕ್ಕೂ ಚಚ್ಚಿದ್ದರು. ಇದರಿಂದಾಗಿ ಅವರ ಮುಖದ ಅನೇಕ ಕಡೆಗಳಲ್ಲಿ ಆಂತರಿಕವಾಗಿ ತುಂಬ ಪೆಟ್ಟಾಗಿತ್ತು. ವೈದ್ಯರು ಪ್ಲಾಸ್ಟಿಕ್ ಸರ್ಜರಿ ಸಹ ಮಾಡುವ ಮೂಲಕ ಮುಖದ ಒಳಪೆಟ್ಟುಗಳಿಗೆ ಚಿಕಿತ್ಸೆ ನೀಡಿದ್ದಾರಲ್ಲದೆ ಮುಖದಲ್ಲಿನ ಬಾವು ತಗ್ಗುವಂತೆ ಚಿಕಿತ್ಸೆ ಮುಂದುವರಿಸಿದ್ದಾರೆ. ಇಲ್ಲಾಳರ ದೇಹದಲ್ಲಿ ನಿಧಾನಕ್ಕೆ ಚೇತರಿಕೆ ಗೋಚರಿಸುತ್ತಿದೆ. ವಾರದಳಗೆ ಇಲ್ಲಾಳ ಅವರು ಚೇತರಿಸಿಕೊಳ್ಳಬಹುದು ಎಂದು ಮಣಿಪಾಲ್ ವೈದ.್ರ ತಂಡ ಅಭಿಪ್ರಾಯಪಟ್ಟಿದೆ.
ಕಳೆದ ಶುಕ್ರವಾರ ರಾತ್ರಿಯೇ ಇಲ್ಲಾಳರ ಮೇಲೆ ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿರುವ ರೂರಿ, ತೋರ್ಲೆವಾಡಿ, ಹೊನ್ನಳ್ಳಿ ಗಾಂಜಾ ಹೊಲಗದ್ದೆಗಳಲ್ಲಿ ಖದೀಮರ ಗುಂಪು ದಾಳಿ ಮಾಡಿತ್ತು. ಇಲ್ಲಿಂದಲೇ ಇಲ್ಲಾಳರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲು ಮಡಲಾಗಿತ್ತು. 2 ದಿನಳ ನಂರ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಿ ಅಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಜಲಾಗಿದೆ.