ಹೊಸಪೇಟೆ: ಇಂದಿನಿಂದ ಹಂಪಿ ಸ್ಮಾರಕ ವೀಕ್ಷಣೆಗೆ ಅವಕಾಶ

By Kannadaprabha News  |  First Published Jun 24, 2021, 9:37 AM IST

* ಕೊರೋನಾ ನಿಯಂತ್ರಣದಿಂದ ಬಹುತೇಕ ನಿಯಮ ಸಡಿಲಿಕೆ 
* ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಅನುಮತಿ ನೀಡಿದ ಕೇಂದ್ರ ಪುರಾತತ್ವ ಇಲಾಖೆ
* ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ 
 


ಹೊಸಪೇಟೆ(ಜೂ.24): ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ(ಜೂ. 24)ರಿಂದ ಆರಂಭವಾಗಲಿದೆ.    

ಕೊರೋನಾ ಹಿನ್ನೆಲೆ ಕಳೆದ ಒಂದೂವರೆ ತಿಂಗಳಿಂದ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಕಮಲ್‌ ಮಹಲ್‌, ವಿಜಯ ವಿಠಲ ಮಂದಿರ, ತಾಲೂಕಿನ ಕಮಲಾಪುರದ ಮ್ಯೂಸಿಯಂ, ಬಳ್ಳಾರಿಯ ಕೋಟೆ ಸೇರಿ ಇತರೆ ಸ್ಮಾರಕಗಳನ್ನು ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಕೊರೋನಾ ನಿಯಂತ್ರಣದ ಹಿನ್ನೆಲೆ ಕೆಲ ದಿನಗಳ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿ ನೀಡಿತು. ಅದು ಸ್ಥಳೀಯ ಆಡಳಿತದ ನಿಯಮಗಳನ್ನು ಪಾಲಿಸಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. 

Latest Videos

undefined

ಹಂಪಿಯ 100 ಗೈಡ್‌ಗಳ ಖಾತೆಗೆ ಇನ್ಫಿ ಸುಧಾಮೂರ್ತಿ ತಲಾ 10,000 ರು. ಜಮೆ

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಇಲ್ಲಿ ಇನ್ನೂ ನಿರ್ಬಂಧ ಹೇರಿದ ಹಿನ್ನೆಲೆ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ. ಕೊರೋನಾ ನಿಯಂತ್ರಣದಿಂದ ಬಹುತೇಕ ನಿಯಮ ಸಡಿಲಿಕೆ ಬೆನ್ನಲ್ಲೆ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ಕಾಳಿಮುತ್ತು ತಿಳಿಸಿದ್ದಾರೆ.
 

click me!