* ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ರೋಹಿಣಿ ಸಿಂಧೂರಿ
* ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ
* ಸ್ವೀಕರ್ ಕಾಗೇರಿಗೆ ಸಂಪೂರ್ಣ ದಾಖಲೆಗಳ ಸಮೇತ ಪತ್ರ ಬರೆದ ಸಾ. ರಾ. ಮಹೇಶ್
ಮೈಸೂರು(ಜೂ.24): ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ, ತೇಜೋವಧೆಗೆ ಯತ್ನಿಸಿದ ಹಿಂದಿನ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ.ಆರ್. ನಗರ ಶಾಸಕ ತಿಳಿಸಿದ್ದಾರೆ.
ರೋಹಿಣಿಯವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಾರಾ ಚೌಲ್ಟ್ರಿಯನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದಿದ್ದರು. ಆದರೆ ಪ್ರಾದೇಶಿಕ ಆಯುಕ್ತರು ರಚಿಸಿದ್ದ ತಂಡ ನೀಡಿರುವ ಯಲ್ಲಿ ತಮಗೆ ಕ್ಲೀನ್‌ಚಿಟ್ ನೀಡಲಾಗಿದೆ.
ಈಜುಕೊಳ ವಿವಾದ: ರೋಹಿಣಿ ಸಿಂಧೂರಿ ವಿರುದ್ಧ 2 ವರದಿ ಸಲ್ಲಿಕೆ?
ಈ ರೀತಿ ತಮ್ಮ ಹಾಗೂ ಸುಳ್ಳು ಆರೋಪ ಮಾಡಿರುವುದರಿಂದ ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಅನುಮತಿ ಕೋರಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಂಪೂರ್ಣ ದಾಖಲೆಗಳ ಸಮೇತ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.