* ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದ ಘಟನೆ
* 30 ಸಾವಿರ ವಿತ್‌ಡ್ರಾಕ್ಕೆ 15 ಸಾವಿರ ಹರಿದ, ಮಾಸಿದ ನೋಟುಗಳು ಬಂದಿವೆ
* ಗ್ರಾಹಕರ ತೀವ್ರ ಅಸಮಾಧಾನ
ಯಲಬುರ್ಗಾ(ಆ.20): ಕುಕನೂರು ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರವಿರುವ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಮಸಬಹಂಚಿನಾಳ ಗ್ರಾಮದ ರೈತ ಶರಣಪ್ಪ ವೀರಾಪುರ ಎಂಬುವರು ಸುಮಾರು 30000 ವಿತ್‌ಡ್ರಾ ಮಾಡಿದ್ದು ಅದರಲ್ಲಿ 500 ಮುಖಬೆಲೆಯ 15000 ಹರಿದ ಮತ್ತು ಮಾಸಿದ ನೋಟುಗಳು ಬಂದಿವೆ.
ಬಣ್ಣ ಹತ್ತಿದ ಜತೆಗೆ ಎಣ್ಣೆ ಮೆತ್ತಿದ ಬಂದಿವೆ. ಕೆಲವೊಂದು ತುಂಡಾದ ಹರಿದ ನೋಟುಗಳು ಆಗಿವೆ, ಇದನ್ನು ನೋಡಿದ ರೈತ ಶರಣಪ್ಪ ತಬ್ಬಿಬ್ಬಾಗಿ ಅಲ್ಲೆ ಇರುವ ಕೆನರಾ ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಮನಕ್ಕೆ ತಂದರೆ, ಬ್ಯಾಂಕ್ ಮ್ಯಾನೇಜರ್ ಈ ಹಣ ನಮ್ಮ ಎಟಿಎಂನ ಹಣವಲ್ಲ , ನೀನು ನಿಮ್ಮ ಮನೆಯಿಂದ ತಂದ ಹಣವೆಂದು ಗ್ರಾಹಕನ ಮೇಲೆ ಆರೋಪಿಸಿ ಹರಿಹಾಯ್ದಿದ್ದಾರೆ.
ಎಣ್ಣೆ ಏಟಲ್ಲಿ ATM ಕದಿಯಲು ಬಂದು ಅಲ್ಲಿಯೇ ತಗಲಾಕ್ಕೊಂಡ ಉಪೇಂದ್ರ!
ಸಾರ್ವಜನಿಕರ ಆಕ್ರೋಶ
ಕಷ್ಟಕಾಲದಲ್ಲಿ ಅನುಕೂಲವಾಗಲಿ ಎಂದು ಬ್ಯಾಂಕಿನಲ್ಲಿ ತಾವು ದುಡಿದ ಹಣವನ್ನು ಜಮಾ ಮಾಡುತ್ತೇವೆ. ಆದರೆ ಇಂಥ ಹರಿದ ನೋಟುಗಳು ಬಂದರೆ ಹೇಗೆ ಎಂದು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕೇಳಿದಾಗ ಮ್ಯಾನೇಜರ್ ರೈತನ ಮೇಲೆ ಆರೋಪಿಸಿ ಹರಿಹಾಯ್ದಿದ್ದನ್ನು ಕಣ್ಣಾರೆ ಕಂಡ ರಮೇಶ್ ಬನ್ನಿಗೋಳ, ರಮೇಶ್ ಬೆಣಕಲ್, ಚಿದಾನಂದ ಭಜಂತ್ರಿ, ಪರಶುರಾಮ ಹಾಗೂ ಬ್ಯಾಂಕಿಗೆ ಬಂದಂಥ ಸಾರ್ವಜನಿಕರು ಆಕ್ರೋಶಗೊಂಡರು. ನಂತರ ಬ್ಯಾಂಕ್ ಮ್ಯಾನೇಜರ್ ಅವರು ರೈತ ಶರಣಪ್ಪನಿಂದ ಮನವಿ ಪತ್ರವನ್ನು ಸ್ವೀಕರಿಸಿಕೊಂಡು ಬೇರೆ ನೋಟುಗಳನ್ನು ಗ್ರಾಹಕನಿಗೆ ಕೊಟ್ಟಿದ್ದಾರೆ.