* ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಘಟನೆ
* ಆಶಿಫ್ ಗಲಗಲಿ ಎಂಬಾತನೇ ಉಗ್ರರ ಪರ ಪೋಸ್ಟ್ ಮಾಡಿದ ಯುವಕ
* ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು
ಬಾಗಲಕೋಟೆ(ಆ.20): ತಾಲಿಬಾನ್ ಉಗ್ರರಿಂದ ಆಫ್ಘಾನಿಸ್ತಾನದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಯುವಕನೊಬ್ಬ ಐ ಲವ್ ಯು ತಾಲಿಬಾನ್ ಅಂತ ಪೋಸ್ಟ್ ಮಾಡುವ ತಾಲಿಬಾನ್ ಪ್ರೇಮ ಮೆರೆದ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಗರದಲ್ಲಿ ಘಟನೆ ನಡೆದಿದೆ.
ಆಶಿಫ್ ಗಲಗಲಿ ಎಂಬಾತನೇ ತಾಲಿಬಾನ್ ಉಗ್ರರ ಪರ ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ ಯುವಕನಾಗಿದ್ದಾನೆ. ಪೋಸ್ಟ್ ಮಾಡಿದ ಬಳಿಕ ಆಶಿಫ್ ನಾಪತ್ತೆಯಾಗಿದ್ದಾನೆ. ಹೀಗಾಗಿ ಆಶಿಫ್‌ನನ್ನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಗ್ಳೂರು ಉಗ್ರ ಗೋಡೆ ಬರಹಕ್ಕೆ ವಿದೇಶ ನಂಟು: ಲುಕ್‌ಔಟ್ ನೋಟಿಸ್
ಈ ಸಂಬಂಧ ಜಮಖಂಡಿ ಪೋಲಿಸರು ನಿನ್ನೆ ಆಶಿಫ್ ಸಂಬಂಧಿಗಳನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಆರೋಪು ಆಶಿಫ್‌ನ ಬಂಧನಕ್ಕಾಗಿ ಪೋಲಿಸರು ಬಲೆ ಬೀಸಿದ್ದಾರೆ.