ಆಫ್ಘನ್‌ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ಕ್ರಮ : ಮೈಸೂರು ವಿವಿ ಕುಲಪತಿ

By Kannadaprabha NewsFirst Published Aug 20, 2021, 3:17 PM IST
Highlights
  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಷ್ಘಾನಿಸ್ಥಾನದ 90 ವಿದ್ಯಾರ್ಥಿಗಳು
  • 90 ವಿದ್ಯಾರ್ಥಿಗಳ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಭರವಸೆ

ಮೈಸೂರು (ಆ.20): ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಷ್ಘಾನಿಸ್ಥಾನದ 90 ವಿದ್ಯಾರ್ಥಿಗಳ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಹೇಳಿದರು.

 ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೋವಿಡ್‌-19 ಕಾಣಿಸಿಕೊಂಡಾಗಲೂ ಚೀನಾದ ವಿದ್ಯಾರ್ಥಿಗಳು ಹೋಗಲು ಬಯಸಲಿಲ್ಲ. ಆಗ ಅವರಿಗೆ ವೀಸಾ ವಿಸ್ತರಿಸಲಾಗಿತ್ತು. 

ಅಫ್ಘಾನಿಸ್ತಾನ ವಿದ್ಯಾರ್ಥಿಯ ಮಾತು ಕೇಳಿ

ಅದೇ ರೀತಿ ಆಫ್ಘನ್‌ ವಿದ್ಯಾರ್ಥಿಗಳಿಗೂ ತಾತ್ಕಾಲಿಕ ವೀಸಾ ವಿಸ್ತರಿಸುವಂತೆ ಕೋರಲಾಗುವುದು ಎಂದರು. ರಾಜ್ಯ ಸರ್ಕಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.

ಸದ್ಯ ಅಫ್ಘಾನಿಸ್ತಾನದಲ್ಲಿ ಅತ್ಯಂತ ದುಸ್ಥಿತಿ ಇದೆ. ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ದೇಶವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಮಡ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಈ ವೇಳೆ ರಕ್ಷಣೆಗಾಗಿ ಅಲ್ಲಿಮದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಪಲಾಯನ ಮಾಡುತ್ತಿದ್ದಾರೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಹಾಯಕ್ಕೆ ವಿವಿ ನಿಂತಿದೆ. 

click me!