Tomato Price: ಕೋಲಾರದಲ್ಲಿ ಏರಿಕೆ ಕಂಡ ಟೊಮೆಟೊ ಬೆಲೆ: ದರ ಏರಿಕೆಯಿಂದ ರೈತರಿಗಿಲ್ಲ ಲಾಭ

By Govindaraj SFirst Published May 2, 2022, 11:17 PM IST
Highlights

ಜಿಲ್ಲೆಯಲ್ಲಿ ವಾರದಿಂದ ಈಚೆಗೆ ಟೊಮೆಟೊ ರೇಟು ಜಾಸ್ತಿಯಾಗಿದೆ. ಆದರೆ ಬಿಸಿಲಿನ ತಾಪ-ಆಕಾಲಿಕ ಮಳೆಯಿಂದ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಗುಣಮಟ್ಟದ ಟೊಮೆಟೊ ಪ್ರಮಾಣವು ಬರ್ತಾಯಿಲ್ಲ.

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಮೇ.02): ಜಿಲ್ಲೆಯಲ್ಲಿ ವಾರದಿಂದ ಈಚೆಗೆ ಟೊಮೆಟೊ (Tomoto) ರೇಟು ಜಾಸ್ತಿಯಾಗಿದೆ. ಆದರೆ ಬಿಸಿಲಿನ ತಾಪ-ಆಕಾಲಿಕ ಮಳೆಯಿಂದ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಗುಣಮಟ್ಟದ ಟೊಮೆಟೊ ಪ್ರಮಾಣವು ಬರ್ತಾಯಿಲ್ಲ. ಟೊಮೆಟೊ ರೇಟು (Price) ಜಾಸ್ತಿಯಾಗಿದ್ದಕ್ಕೆ ಹೊರ ರಾಜ್ಯ ವ್ಯಾಪಾರಿಗಳು (Merchants) ಮಾರುಕಟ್ಟೆಗೆ (Market) ಬರಲಾರಂಭಿಸಿದ್ದಾರೆ. ಗುಣಮಟ್ಟದ ಟೊಮೆಟೊಗೆ ಬಂಪರ್ ಬೆಲೆ ಸಿಕ್ಕಿದ್ದರೆ ರೋಗಬಾಧಿತ ಟೊಮೆಟೊಗೆ ರೇಟು ಇಲ್ಲದಂತಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ಕೋಲಾರ ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೀತಾರೆ. ವರ್ಷಪೂರ್ತಿಲ್ಲಿ ಬೆಳೆಯುವ ಟೊಮೆಟೊ ರಾಷ್ಟ್ರದ ಅನೇಕ ರಾಜ್ಯಗಳಿಗೆ ರವಾನೆಯಾಗುತ್ತೆ. ಅದರಲ್ಲೂ ಉತ್ತರ ಭಾರತದ ಮೂಲಕ ನೆರೆಯ ರಾಷ್ಟ್ರಗಳಿಗೂ ಕೋಲಾರ ಜಿಲ್ಲೆಯ ಟೊಮೆಟೊ ರಫ್ತಾಗುವ ಹೆಗ್ಗಳಿಕೆಯಿದೆ. ಇದೀಗ ಕೋಲಾರದ ಮಾರ್ಕೆಟ್‌ನಲ್ಲಿ ಟೊಮೆಟೊ ರೇಟು ಜಾಸ್ತಿಯಾಗಿದೆ. ನಾಲ್ಕೈದು ತಿಂಗಳಿನಿಂದ ಬೆಲೆ ಹಾಗೂ ಬೇಡಿಕೆ ಇಲ್ಲದೆ ಕಂಗಾಲಾಗಿದ್ದ ಟೊಮೆಟೊ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. ಪ್ರಸ್ತುತ ಹದಿನೈದು ಕೆಜಿ ಬಾಕ್ಸ್‌ಗೆ 400 ರಿಂದ 600 ರುಪಾಯಿಯಿದೆ. ದಿನೇ ದಿನೇ ಬೆಲೆ ಏರಿಕೆಯಾಗುತ್ತಿರುವುದರಿಂದ ಉತ್ತರ ಭಾರತದ ವರ್ತಕರು ಸೇರಿದಂತೆ ಹೊರ ರಾಜ್ಯದ ವ್ಯಾಪಾರಿಗಳು ಕೋಲಾರದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ.

Kolara Seeds Preserver Papamma ನೂರಾರು ವರ್ಷಗಳ ಮಡಿಕೆಯಲ್ಲಿ ಬೀಜ ಸಂರಕ್ಷಣೆ

ಕೋಲಾರ ಜಿಲ್ಲೆಯಲ್ಲಿ ಸುರಿದ ಆಕಾಲಿಕ ಮಳೆಯಿಂದ ಹಾಗೂ ಊಜಿ ಕಾಟದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿ ಟೊಮೆಟೊ ಗುಣಮಟ್ಟ ಕಳೆದುಕೊಂಡಿತ್ತು.ಇದೇ ಸಮಯಕ್ಕೆ ಹೊರ ರಾಜ್ಯಗಳ ವ್ಯಾಪಾರಸ್ಥರು ಮಾರುಕಟ್ಟೆಗೆ ಬರಲಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೆಲೆಯೂ ದಿಢೀರನೆ ಕುಸಿದಿತ್ತು. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಬಿಸಿಲಿನ ತಾಪ-ಆಕಾಲಿಕ ಮಳೆಯಿಂದ ಟೊಮೆಟೊ ಆವಕ ಕಡಿಮೆಯಾಗಿದೆ. ಇದರಿಂದ ರೈತರು ಬೆಳೆದ ಟಮೆಟೋಗೆ ಬೆಲೆ ಸಿಕ್ಕಿದರೆ ಮತ್ತೊಂದು ರೀತಿಯ ತಲೆನೋವು ತಂದಿಟ್ಟಿದೆ. ಕೆಲವು ಟಮೆಟೋ ಬೆಳೆಗಾರರಿಗೆ ಬಂಪರ್ ಬೆಲೆ ಸಿಗ್ತಿದ್ದರೆ ಮತ್ತೆ ಕೆಲ ರೈತರಿಗೆ ಹಾಕಿರೋ ಬಂಡವಾಳ ಸಹ ಸಿಗದೆ ಬರಿಗೈಯಲ್ಲಿ ಮನೆಗೆ ವಾಪಸ್ಸು ಹೋಗ್ತಿದ್ದಾರೆ. 

ಇದೀಗ ವಾರದಿಂದ ಸುರಿಯುತ್ತಿರುವ ಆಕಾಲಿಕ ಮಳೆ ಹಾಗೂ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಟೊಮೆಟೊ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗುಣಮಟ್ಟದ ಟೊಮೆಟೊ ಆವಕ ಕಡಿಮೆಯಾಗಿದೆ. ಇದರಿಂದ ರೋಗಭಾದಿತ ಟಮೆಟೋ ಬೆಳೆಗೆ ಬೆಲೆ ಸಿಗ್ತಿಲ್ಲ. ಇನ್ನು ಕೆಲವು ರೈತರ ಟಮೆಟೋ ಗುಣಮಟ್ಟದಿಂದ ಕೂಡಿದ್ದು ಅಂತಹವರಿಗೆ ಬೆಲೆ ಸಿಗುತ್ತಿದೆ. ಕೋಲಾರದ ಟೊಮೆಟೊ ಹಲವು ರಾಜ್ಯಗಳಿಗೆ ರಪ್ತು ಆಗುವುದರಿಂದ ಉತ್ತಮ ಬೆಲೆ ಬಂದಿದೆ. ಇಲ್ಲಿನ ಗುಣಮಟ್ಟದ ಟೊಮೆಟೊಗೆ ರೇಟು ಸಿಕ್ಕಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಹದಿನೈದು ಕೆಜಿ ಟೊಮೆಟೊ ಬಾಕ್ಸ್‌ಗೆ 400 ರಿಂದ ರುಪಾಯಿಯಿಂದ 600 ರುಪಾಯಿ ವರೆಗೂ ಸೇಲ್ ಆಗ್ತಿದೆ. 

4 ದಶಕ ಕಳೆದರೂ ಸಿಗದ ಪರಿಹಾರ, ರಸ್ತೆಯನ್ನೇ ಅಗೆದು ರೈತ ಪ್ರತಿಭಟನೆ!

ಗುಣಮಟ್ಟವಿಲ್ಲದ ಹದಿನೈದು ಕೆಜಿ ಟೊಮೆಟೊ ಬಾಕ್ಸ್ಗೆ 200 ರಿಂದ 300 ರುಪಾಯಿಗೆ ಮಾರಾಟವಾಗ್ತಿದೆ. ಟೊಮೆಟೊಗೆ ಜಾಸ್ತಿ ಬೆಲೆ ಬಂದಿರೋದಿಕ್ಕೆ ಜಿಲ್ಲೆಯ ರೈತ್ರಿಗೇನು ಅಷ್ಟು ಖುಷಿಯಿಲ್ಲ. ಜಿಲ್ಲೆಯಲ್ಲಿ ಸುರಿಯುತ್ತಿರುವ ಆಕಾಲಿಕ ಮಳೆ, ಬಿಸಿಲಿನ ತಾಪದಿಂದ ಬೆಳೆಗಳು ನಾಶವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ ಅಂತಾರೆ ರೈತರು. ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಮಾರ್ಕೆಟ್‌ನಲ್ಲಿ ಟೊಮೆಟೊ ಬೆಲೆಯೋನೋ ಜಾಸ್ತಿಯಾಗಿದೆ. ಆದರೆ ರೋಗ ಬಂದ ಟೊಮೆಟೊ ಮಾರುಕಟ್ಟೆಗೆ ತಂದ ಬೆಳೆಗಾರನ ಕಷ್ಟ ಹಾಗೇ ಮುಂದುವರೆದಿದೆ ಅನ್ನೋದು ವಾಸ್ತವವಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ರೈತರ ನೆರವಿಗೆ ಧಾವಿಸಲಿ ಅನ್ನೋದು ನಮ್ಮ ಆಶಯ.

click me!