ರೈತನಿಗೆ ಸವಾಲಾದ ಟೊಮೆಟೋ ಬೆಳೆ ರಕ್ಷಣೆ: ತೋಟದಲ್ಲಿ ದೊಣ್ಣೆ ಹಿಡಿದು ಕಾವಲು

By Kannadaprabha NewsFirst Published Jul 14, 2023, 2:59 PM IST
Highlights

ಟೊಮೆಟೊಗೆ ಈ ಬಾರಿ ಚಿನ್ನದ ಬೆಲೆ ಬಂದಿದೆ. ದರ ದಿನ ದಿನಕ್ಕೂ ಏರಿರುವುದರಿಂದ ಬೆಳೆ ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಕಳ್ಳರ ಕಾಟ ತಪ್ಪಿಸಲು ರೈತರು ಜಮೀನಿನಲ್ಲಿ ಹಗಲು ರಾತ್ರಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. 

ಚಿಕ್ಕಬಳ್ಳಾಪುರ (ಜು.14): ಟೊಮೆಟೊಗೆ ಈ ಬಾರಿ ಚಿನ್ನದ ಬೆಲೆ ಬಂದಿದೆ. ದರ ದಿನ ದಿನಕ್ಕೂ ಏರಿರುವುದರಿಂದ ಬೆಳೆ ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಕಳ್ಳರ ಕಾಟ ತಪ್ಪಿಸಲು ರೈತರು ಜಮೀನಿನಲ್ಲಿ ಹಗಲು ರಾತ್ರಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೋಟೊ ಬೆಳೆದವರ ಮೊಗದಲ್ಲಿ ಖುಷಿ ಇದ್ದರೆ, ಮತ್ತೊಂದೆಡೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ದಿನ ಕಳೆದಂತೆ ಟೊಮೊಟೋ ದರ ಹೆಚ್ಚಾ ಗುತ್ತಲೇ ಇದೆ. ಯಾವಾಗ ಒಂದು ಕೆಜಿಗೆ ನೂರು ರೂಪಾಯಿ ದಾಟಿತೋ ಆಗಿನಿಂದಲೇ ರೈತರಿಗೆ ಬೆಳೆದ ಬೆಳೆ ರಕ್ಷಣೆ ಮಾಡೋದೇ ದೊಡ್ಡ ಸವಾಲಾಗಿ ಪರಿಣ ಮಿಸಿದೆ. ಜಮೀನಿನಲ್ಲಿ ದೊಣ್ಣೆ ಹಿಡಿದುಕೊಂಡು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಹಗಲು- ರಾತ್ರಿ ಪಾಳಿ ಪ್ರಕಾರ ಕಾವಲು: ಕಳ್ಳರಿಂದ ಟೊಮೆಟೋ ರಕ್ಷಣೆಗೆ ರೈತರು ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ. ರಾತ್ರಿ ಹಗಲು ಟೊಮೊಟೋ ತೋಟಗಳನ್ನು ಗಂಡ-ಹೆಂಡತಿ, ಮಕ್ಕಳು ಸೇರಿದಂತೆ ಮನೆಮಂದಿಯಲ್ಲಾ ಪಾಳಿ ಪ್ರಕಾರ ಕಾವಲು ಕಾಯುತ್ತಿದ್ದು, ಕಳ್ಳರ ಹಾವಳಿ ತಡೆಗೆ ಮುಂದಾಗಿದ್ದಾರೆ. ಟೊಮೋಟೊಗೆ ಬಂಪರ್‌ ದರ ಸಿಕ್ಕಿರುವುದರಿಂದ ತೋಟಗಳಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈತರು ದೊಣ್ಣೆ, ಕೋಲುಗಳನ್ನು ಹಿಡಿದು ಜಮೀನು ಸುತ್ತು ಹಾಕುತ್ತಿದ್ದಾರೆ.

Latest Videos

ಸಿದ್ದು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನು ಒಪ್ಪಲ್ಲ: ಎಚ್‌.ಡಿ.ರೇವಣ್ಣ

ಗ್ರಾಮಗಳಲ್ಲಿ ಮತ್ತು ತೋಟಗಳ ಬಳಿ ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಸಾಕು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿತ್ತಿರುವುದು ಸಾಮಾನ್ಯವಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆ ಕಣ್ಗಾವಲು ಇದ್ದರೂ ಕೆಲ ಖತರ್ನಾಕ್‌ ಖದೀಮರು ಟೊಮೊಟೋ ಕದ್ದೊಯ್ಯುತ್ತಿರು ಪ್ರಕರಣಗಳು ನಡೆದಿವೆ. ನಾವು ಎಷ್ಟೇ ಜಾಗೃತಿ ವಹಿಸಿದರೂ ಕಳ್ಳರು ಹೇಗೋ ಟೊಮೆಟೋ ಕದ್ದು ಪರಾರಿಯಾಗುತ್ತಿದ್ದಾರೆ ಎನ್ನುತ್ತಾರೆ ಗುಂಡ್ಲ ಮಂಡಿಕಲ್‌ ಗ್ರಾಮದ ರೈತ ಮೂರ್ತಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆದ ರೈತರಿಗೆ ಪ್ರತಿದಿನ ಜಾಗರಣೆ ಮಾಡುವಂತಾಗಿದೆ. ಕೆಲವರಂತೂ ಹೊಲದಲ್ಲಿ ಟೆಂಟ್‌ ಹಾಕಿ ಕೊಂಡು ಕಾವಲಿಗೆ ನಾಯಿಗಳನ್ನು ಬಳಕೆ ಮಾಡುತ್ತಿದ್ದಾರೆ. ನಾಯಿ ಕೂಗಿ ದಾಕ್ಷಣ ಎಚ್ಚರಗೊಳ್ಳುವ ರೈತರು ಅಡ್ಡಾಡಿದರೂ ಯಾರು ಕೈಗೆ ಸಿಕ್ಕಿಲ್ಲ.

15 ಕೆಜಿ ಬಾಕ್ಸ್‌ ದರ 1800ರಿಂದ 2000: ಪ್ರತಿ ಬಾಕ್ಸ್‌ 1800 ರಿಂದ 2000 ರೂ ದರ ಸಿಕ್ಕಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಚಿಕ್ಕಬಳ್ಳಾಪುರದಿಂದ ನೇಪಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಾಂಗಣ, ತಮಿಳುನಾಡಿಗೆ ಟೊಮೋಟೊ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೂ ಭಾರೀ ಬೇಡಿಕೆ ಇದೆ. ದರವೂ ಹೆಚ್ಚಾಗಿದೆ. ಕಳೆದ ಎರಡರಿಂದ ಮೂರು ವರ್ಷ ಬೆಳೆಗೆ ದರವೇ ಸಿಕ್ಕಿರಲಿಲ್ಲ. ತುಂಬಾ ನಷ್ಟಅನುಭವಿಸಿದ್ದರು. ಈ ಬಾರಿ ಉತ್ತಮ ಧಾರಣೆ ಇರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟಗಾರ್ತಿ ಹಾಗೂ ರೈತ ಜನಸೇನಾ ಜಿಲ್ಲಾಧ್ಯಕ್ಷೆ ಸಿ.ಎನ್‌.ಸುಷ್ಮಾಶ್ರೀನಿವಾಸ್‌.

ಬಸ್‌ ಕೊರತೆ ನೀಗಿಸಲು 4 ಸಾವಿರ ಬಸ್‌ ಖರೀದಿ: ಸಿಎಂ ಸಿದ್ದರಾಮಯ್ಯ

ಈ ಬಾರಿ ಟಮೆಟೋಗೆ ಬೇಡಿಕೆ ಬಂದಿದ್ದು, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಈ ರೀತಿ ದರ ಹೆಚ್ಚಳವಾಗಿದೆ. ಆದ್ರೆ, ಹೊಲದಲ್ಲಿ ಟೊಮೊಟೋ ಉಳಿಸಿಕೊಳ್ಳು ವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಕಳ್ಳರ ಕಾಟಕ್ಕೆ ಜಮೀನುಗಳಲ್ಲಿ ದೊಣ್ಣೆ , ನಾಯಿಗಳನ್ನು ಹಿಡಿದು ಕಾವಲು ಕಾಯುತ್ತಿರುವ ರೈತರು ಹೈರಣಾಗಿದ್ದಾರೆ. ಈ ಹಿಂದೆ ದರ ಸಿಗದೇ ಕಂಗಾಲಾದರೆ, ಈ ಬಾರಿ ಬೆಳೆ ಉಳಿಸಿ ಕೊಳ್ಳೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

click me!