ವಿಜಯಪುರದ ಜಿಲ್ಲಾಸ್ಪತ್ರೆಯ ತಾಯಿ ಮಗು ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಮುಂದುವರೆದಿದೆ. ಇಂದು ಕೂಡ ಸಿಜೆರಿಯನ್‌ಗೆ ಒಳಗಾದ ಬಾಣಂತಿಯರರಿಗೆ ಹಾಕಿದ್ದ ಸ್ಟಿಚ್ ಬಿಚ್ಚಿಹೋಗಿದ್ದು ಬಾಣಂತಿಯರು, ಪೋಷಕರಲ್ಲು ಆತಂಕ ಮನೆ ಮಾಡಿದೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.15): ವಿಜಯಪುರದ ಜಿಲ್ಲಾಸ್ಪತ್ರೆಯ (Vijayapura District Hospital) ತಾಯಿ ಮಗು ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಮುಂದುವರೆದಿದೆ. ಇಂದು ಕೂಡ ಸಿಜೆರಿಯನ್‌ಗೆ (Cesarean Delivery) ಒಳಗಾದ ಬಾಣಂತಿಯರರಿಗೆ ಹಾಕಿದ್ದ ಸ್ಟಿಚ್ ಬಿಚ್ಚಿಹೋಗಿದ್ದು ಬಾಣಂತಿಯರು, ಪೋಷಕರಲ್ಲು ಆತಂಕ ಮನೆ ಮಾಡಿದೆ.
undefined
ಮತ್ತೆ ಮೂವರು ಬಾಣಂತಿಯರ ನರಳಾಟ: ಕಳೆದ 10 ರಿಂದ 15 ದಿನಗಳ ಅವಧಿಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಿಜೆರಿಯನ್‌ಗೆ ಒಳಗಾದ 30ಕ್ಕೂ ಅಧಿಕ ಬಾಣಂತಿಯರು ಅಕ್ಷರಶಃ ಪರದಾಡಿದ್ದಾರೆ. ಬಾಣಂತಿಯರ ಪರದಾಟ ಎರೆಡನೇ ದಿನಕ್ಕೆ ಮುಂದುವರೆದಿದೆ. ಸ್ಟಿಚ್ ಬಿಚ್ಚಿ ಹೋದ ಮತ್ತೆ ಮೂರು ಪ್ರಕರಣಗಳು ಪತ್ತೆಯಾಗಿವೆ. ಇಂದು ಹೊಲಿಗೆ ತಪಾಸಣೆಗೆ ಹೋದ ವೇಳೆ ಮೂವರು ಬಾಣಂತಿಯರಿಗೆ ಸಿಜೆರಿಯನ್ ವೇಳೆ ಹಾಕಿದ ಸ್ಟಿಚ್ ಕಿತ್ತು ಬಂದಿವೆ ಎನ್ನಲಾಗಿದೆ. ಇದರಿಂದ ಇನ್ನೇನೂ ಡಿಶ್ಚಾರ್ಜ್ ಆಗಬೇಕಿದ್ದವರು ಸ್ಟಿಚ್ ಬಿಚ್ಚಿದ್ದರಿಂದ ಆತಂಕಗೊಂಡಿದ್ದಾರೆ.
Vijayapura ಜಿಲ್ಲಾ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ಬಾಣಂತಿಯರ ನರಳಾಟ!
ಭಯದಿಂದ ಕಣ್ಣೀರಿಟ್ಟ ಬಾಣಂತಿಯರು, ಪೋಷಕರು: ಇಡೀ ಪ್ರಕರಣವನ್ನ ಇಂದು ಸಹ ಪಾಲೋಅಫ್ ಮಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಹಿತಿ ಸಂಗ್ರಹಿಸಿದ ವೇಳೆ ಮತ್ತೆ ಮೂವರು ಬಾಣಂತಿಯರ ಹೊಲಿಗೆ ಕಿತ್ತು ಬಂದಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಿನ್ನೆಯಷ್ಟೆ ಹಲವು ಬಾಣಂತಿಯರ ಹೊಲಗೆ ಬಿಚ್ಚಿ ಅವಾಂತರವಾಗಿದ್ದು, ಇಂದು ಸಹ ಘಟನೆ ಮುಂದುವರೆದಿದ್ದರಿಂದ ತಾಯಿ ಮಗು ಆಸ್ಪತ್ರೆಯಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾ ಎದುರು ಕಣ್ಣೀರಿಟ್ಟರು. ಅದ್ರಲ್ಲು ಇಂದು ಸ್ಟಿಚ್ ಕಿತ್ತು ಬಂದು ನರಳಾಡುತ್ತಿದ್ದ ಬಾಣಂತಿ ನನಗೆ ಭಯವಾಗ್ತಿದೆ ಎಂದು ಕಣ್ಣೀರು ಹಾಕುತ್ತಲೇ ಆತಂಕವನ್ನು ಹೊರಹಾಕಿದರು. ಬಾಣಂತಿಯರ ಆರೈಕೆಗಿದ್ದ ಪೋಷಕರು ಕೂಡ ಹೀಗೆ ಆಗಿದ್ದನ್ನ ನೋಡ್ತಿದ್ರೆ ನಮಗು ಭಯವಾಗ್ತಿದೆ ಎಂದು ಕಣ್ಣೀರು ಸುರಿಸಿದ್ದಾರೆ.
ಧೈರ್ಯ ತುಂಬಲು ಜಿಲ್ಲಾಸ್ಪತ್ರೆ ಸರ್ಜನ್ ರೌಂಡ್ಸ್: ಸಿಜೆರಿಯನ್‌ಗೆ ಒಳಗಾದ 30ಕ್ಕು ಅಧಿಕ ಬಾಣಂತಿಯರಿಗೆ ಹೊಲಿಗೆ ಕಿತ್ತು ನರಳಾಟದ ಬೆನ್ನಲ್ಲೆ ಇಂದೂ ಸಹ ಮೂವರು ಬಾಣಂತಿಯರಿಗೆ ಸಮಸ್ಯೆಯಾಗಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ಸುವರ್ಣ ನ್ಯೂಸ್ ಗಮನ ಸೆಳೆಯುತ್ತಿದ್ದಂತೆ ವಾರ್ಡ್‌ಗಳಿಗೆ ಡಿಎಸ್‌ಓ ಭೇಟಿ ನೀಡಿದ್ದಾರೆ. ಈ ವೇಳೆ ಭಯದಿಂದ ಕಣ್ಣೀರು ಹಾಕ್ತಿದ್ದ ಬಾಣಂತಿಯರು ಹಾಗೂ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಏನಾದ್ರು ಸಮಸ್ಯೆಗಳು ಆಗ್ತಿದ್ರು ತಿಳಿಸಿ ನಾನು ಸರಿಪಡೆಸುವೆ ಎಂದು ವಿಶ್ವಾಸ ಮೂಡಿಸಿದ್ದಾರೆ.
ತಾಯಿ ಮಗು ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ: ಇತ್ತ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಕೂಡ ಜಿಲ್ಲಾಸ್ಪತ್ರೆಯ ತಾಯಿ ಮಗು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆತಂಕದಲ್ಲಿದ್ದ ಬಾಣಂತಿಯರಿಂದ ಮಾಹಿತಿಗಳನ್ನ ಪಡೆದುಕೊಂಡರು. ಇನ್ನೆರೆಡು ದಿನದಲ್ಲಿ ಸಂಪೂರ್ಣವಾಗಿ ಸಮಸ್ಯೆ ಬಗೆಹರಿಯಲಿದೆ. ಅವಶ್ಯಕತೆ ಇದಲ್ಲಿ ಇನ್ನೊಂದು ಆಫರೇಶನ್ ಥೆಟರ್‌ಗು ವ್ಯವಸ್ಥೆ ಮಾಡಿಸುವ ಮಾತುಗಳನ್ನಾಡಿದ್ದಾರೆ. ಈ ಮೂಲಕ ಭಯದಲ್ಲಿದ್ದ ಬಾಣಂತಿಯರು ಪೋಷಕರಲ್ಲಿ ದೈರ್ಯ ಮೂಡಿಸುವ ಕೆಲಸ ಮಾಡಿದ್ದಾರೆ.
ವಿಜಯಪುರದಲ್ಲೊಂದು ವಿಶಿಷ್ಟ ಆಚರಣೆ: ಮಂಗಳಮುಖಿಯರಿಗೆ ಉಡಿ ತುಂಬಿದ ಹುಲಜಂತಿ ಭಕ್ತರು..!
ಇನ್‌ಫೆಕ್ಷನ್ ಆಗಿದ್ದ ಆಪರೇಶನ್ ಥೇಟರ್ ಬಂದ್: ದಿನಕ್ಕೆ 40ಕ್ಕೂ ಅಧಿಕ ಹೆರಿಗೆ, 15ಕ್ಕೂ ಅಧಿಕ ಸಿಜೇರಿಯನ್ ನಡೆಯುವ ತಾಯಿ ಮಗು ಆಸ್ಪತ್ರೆಯ ಆಪರೇಶನ್ ಥೆಟರ್ ಸೋಂಕಿಗೆ ಒಳಗಾಗಿದೆ. ಎಲ್ಲ ಯಡವಟ್ಟುಗಳಿಗೆ ಕಾರಣವಾದ ಆಪರೇಶನ್ ಥೆಟರ್ ಬಂದ್ ಮಾಡಿ ಜಿಲ್ಲಾಸ್ಪತ್ರೆ ಸರ್ಜನ್ ಆದೇಶ ಹೊರಡಿಸಿದ ಬೆನ್ನಲ್ಲೆ ಬಂದ್ ಮಾಡಲಾಗಿದೆ. ಪರ್ಯಾಯವಾಗಿ ಜಿಲ್ಲಾಸ್ಪತ್ರೆಯ ಮತ್ತೊಂದು ಕೊಠಡಿಯಲ್ಲಿ ಆಪರೇಶನ್ ಮುಂದುವರೆಸಲಾಗಿದೆ.
ಇನ್‌ಫೆಕ್ಷನ್ ಹಿನ್ನೆಲೆ ಪತ್ತೆಗೆ ಲ್ಯಾಬ್ ಟೆಸ್ಟ್‌ಗೆ ಮುಂದಾದ ವೈದ್ಯರು: ಇನ್‌ಫೆಕ್ಷನ್‌ಗೊಂಡಿರುವ ಆಫರೇಶನ್ ಥೆಟರ್‌ನಲ್ಲಿ ಸೋಂಕು ಹರಡಲು ಮುಖ್ಯ ಕಾರಣ ಎನು ಎಂಬುವುದನ್ನ ಪತ್ತೆ ಹಚ್ಚಲು ಜಿಲ್ಲಾಸ್ಪತ್ರೆ ವೈದ್ಯರು ಮುಂದಾಗಿದ್ದಾರೆ. ಆಪರೇಶನ್ ಥೇಟರ್ ನ ಸ್ಯಾಪಲ್ಸ್ ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಮುಂದಿನ ಕ್ರಮ ಎನ್ನಲಾಗಿದೆ. ವರದಿಯಲ್ಲಿ ಯಾವುದೇ ಇನ್‌ಫೆಕ್ಷನ್ ಇಲ್ಲ ಎಂದು ವರದಿ ಬಂದಲ್ಲಿ ಮತ್ತೆ ಇದೆ ಆಪರೇಶನ್ ಥೇಟರ್‌ನಲ್ಲಿ ಹೆರಿಗೆ, ಸಿಜೇರಿಯನ್ ಮುಂದುವರೆಸಲಾಗುದು ಎಂದು ಡಿಎಸ್‌ಓ ಡಾ ಲಕ್ಕನ್ನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.