Bellary Utsav 2023: ಇಂದು ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭ

By Kannadaprabha News  |  First Published Jan 22, 2023, 8:07 AM IST

 ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭ ಜ.22 ಸಂಜೆ 6ಕ್ಕೆ ನಗರದ ಡಾ. ರಾಜ್‌ಕುಮಾರ್‌ ರಸ್ತೆಯ ಮುನಿಸಿಪಲ್‌ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಮಾರೋಪ ಭಾಷಣ ಮಾಡಲಿದ್ದಾರೆ.


ಬಳ್ಳಾರಿ (ಜ.22) : ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭ ಜ.22 ಸಂಜೆ 6ಕ್ಕೆ ನಗರದ ಡಾ. ರಾಜ್‌ಕುಮಾರ್‌ ರಸ್ತೆಯ ಮುನಿಸಿಪಲ್‌ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಮಾರೋಪ ಭಾಷಣ ಮಾಡುವರು.

ರಾಘವ ವೇದಿಕೆ:

Latest Videos

undefined

ಸಂಜೆ 4ರಿಂದ 6ರವರೆಗೆ ಪ್ರಕೃತಿ ರೆಡ್ಡಿ ಅವರಿಂದ ಸುಗಮ ಸಂಗೀತ, ಸಂಡೂರು ಉಮೇಶ್‌ ವಾದ್ಯ ಸಂಗೀತ, ಕಲಾಂಜಲಿ ಕಲಾ ಟ್ರಸ್ಟ್‌ ವತಿಯಿಂದ ಜಾನಪದ ನೃತ್ಯರೂಪಕ, ದೊಡ್ಡಬಸಪ್ಪ ತಂಡದಿಂದ ಹಿಂದೂಸ್ತಾನಿ ಸಂಗೀತ, ಸುಜಾತಮ್ಮರವರಿಂದ ರಂಗಗೀತೆಗಳು, ಎಮ್ಮಿಗನೂರು ಜ್ಞಾನೇಶ್‌ರಿಂದ ಸುಗಮ ಸಂಗೀತ, ಸೂರ್ಯ ಕಲಾ ಟ್ರಸ್ಟ್‌ ವತಿಯಿಂದ ಸಮೂಹ ನೃತ್ಯ, ಶಿಡಗಿನಮೊಳ ಗೋವರ್ಧನ ರೆಡ್ಡಿ ಇವರಿಂದ ಕೊಳಲು ವಾದನ,ವೀರೇಶ್‌ ದಳವಾಯಿ ಮತ್ತು ಅಂಬಣ್ಣ ದಳವಾಯಿ ಅವರಿಂದ ಹಿಂದೂಸ್ತಾನಿ ಸಂಗೀತ, ಜಗದೀಶ್‌ ನಾಯ್ಕ ತಂಡದವರಿಂದ ಸುಗಮ ಸಂಗೀತ, ಅವಂತಿಕಾ ನವಿಲು ನೃತ್ಯ (ಸೋಲೋ), ಕು.ಭೂಮಿಕಾ ಮತ್ತು ಮೀರಾ ಅವರಿಂದ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಜರುಗಲಿದೆ. ಸಂಜೆ 6ರಿಂದ 6.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 6.30ರಿಂದ ರಾತ್ರಿ 12.30ರವರೆಗೆ ಪ್ರಕಾಶ್‌ ಹೆಮ್ಮಾಡಿ ತಂಡದಿಂದ ವಿಭಿನ್ನ ಜಾದು ಪ್ರದರ್ಶನ, ಬುಡಕಟ್ಟು ಜನಾಂಗದ ಕಲಾವಿದರಿಂದ ನೃತ್ಯ ರೂಪಕ, ಪ್ರಹ್ಲಾದ್‌ ಆಚಾರ್‌ರವರ ಶಾಡೋ ಷೋ,ಕೊಳಲುವಾದನ ಸಂದೀಪ್‌, ಕಿಬೋರ್ಡ್‌ ವೀಣಾ, ತಬಲಾ ಪ್ರತ್ಯುಬ ಸೊರಬ, ಡ್ರಮ್‌ ಸೆಟ್‌ ಪ್ರಕಾಶ್‌ ಅಂತೋನಿ, ವಾಯಲಿನ್‌ ಮನಿ ಇವರಿಂದ ವಾದ್ಯ ಸಂಗೀತ ಜುಗಲ್‌ ಬಂದಿ ಮತ್ತು ಬಾಲಿವುಡ್‌ ಖ್ಯಾತ ಗಾಯಕಿ ಸುನಿಧಿ ಚವ್ಹಾಣ್‌ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಗಣಿ ಧಣಿಗಳಿಗೆ ಮಾತ್ರವಲ್ಲ- ಸಾಮಾನ್ಯರಿಗೂ ಹೆಲಿಕಾಪ್ಟರ್‌ ಹತ್ತುವ ಭಾಗ್ಯ: ಬಳ್ಳಾರಿಯ ಬೈ-ಸ್ಕೈ ಸೇವೆ

ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆ:

ಸಂಜೆ 4ರಿಂದ ರಾತ್ರಿ 12ರವರೆಗೆ ತೋರಣಗಲ್ಲು ಕೊಟ್ರೇಶ್‌.ಕೆ ಅವರಿಂದ ಗಜಲ್‌ ಗಾಯನ, ನಾಟ್ಯಲಕ್ಶ್ಮೀ ಕಲಾ ಟ್ರಸ್ಟ್‌ ವತಿಯಿಂದ ನೃತ್ಯ ಪ್ರದರ್ಶನ, ಎಚ್‌.ಕೆ.ಸುಂಕಪ್ಪ ಇವರಿಂದ ಜಾನಪದ ಸಂಗೀತ, ಭೂಮಿಕಾ ತಂಡದಿಂದ ಸಮೂಹ ನೃತ್ಯ, ಜಗದಾಂಭ ರೇಣುಕಾ ಟ್ರಸ್ಟ್‌ ವತಿಯಿಂದ ಚಲನಚಿತ್ರ ಗೀತೆಗಳು, ಬಸವರಾಜ ಬಲುಕುಂದಿ ಅವರಿಂದ ಕುಚಿಪುಡಿ ನೃತ್ಯ,ಸಂದೀಪ್‌ ಇವರಿಂದ ಜಾದು ಪ್ರದರ್ಶನ, ಕೆ.ತಿಮ್ಮಪ್ಪ ತಂಡದಿಂದ ಕ್ಲಾರಿಯೋನೆಟ್‌ ವಾದನ, ದೊಡ್ಡ ಮಾರೆಪ್ಪ ಅವರಿಂದ ಗೆಜ್ಜೆ ತಂಬೂರಿ ವಾದನ, ಎಂ.ನಾಗಭೂಷಣ ವಚನ ಗಾಯನ, ಇಂದ್ರಾಣಿ ತಂಡದಿಂದ ಸಮೂಹ ನೃತ್ಯ,ಗೀತಾಂಜಲಿ.ಎಚ್‌ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶ್ಯಾವಳಿಗೆಪ್ಪರವರ ಸುಗಮ ಸಂಗೀತ, ಚೆನ್ನದಾಸರ ರಂಗಪ್ಪ ಇವರಿಂದ ತಬಲಾ ವಾದನ, ದೊಡ್ಡಯ್ಯ ಕಲ್ಲೂರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮೌನೇಶರವರ ಚೆನ್ನದಾಸರ ತತ್ವಪದಗಳು, ಮಾತಾ ರಾಮಕ್ಕ ಅವರಿಂದ ಜೋಗತಿ ನೃತ್ಯ, ವಿಶ್ವಾಸ್‌.ಎಂ. ಇವರಿಂದ ವಚನ ಸಂಗೀತ, ದೇವೇಂದ್ರಪ್ಪ ಯಲ್ಲಾಪುರ ಇವರ ಜಾನಪದ ಸಂಗೀತ, ವಿಶ್ವ ಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆಯಿಂದ ಸಮೂಹ ನೃತ್ಯ, ಚಿನ್ಮಯಿ ಜೋಷಿರವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತೋರಣಗಲ್ಲು ತಮ್ಮನ್ನ ಸ್ಕೂಲ್‌ನಿಂದ ಜಾನಪದ ನೃತ್ಯ, ಮದಿರೆ ಮರಿಸ್ವಾಮಿ ಇವರ ವಾದ್ಯ ಸಂಗೀತ, ರವಿಶಂಕರ್‌ ಡ್ಯಾನ್ಸ್‌ ಸ್ಟುಡಿಯೋ ಇವರ ಮಾಡರ್ನ್‌ ಡ್ಯಾನ್ಸ್‌, ಅಮೋಘವರ್ಷ ತಂಡದಿಂದ ಚಿತ್ರಗೀತೆಗಳು, ಬೆಳಗಲ್‌ ವೀರಣ್ಣ ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಆಲಾಪ್‌ ಸಂಗೀತ ಕಲಾ ಟ್ರಸ್ಟ್‌ ವತಿಯಿಂದ ನಾಟಕ, ಕರ್ನಾಟಕ ಬಯಲಾಟ ಕಲಾವಿದರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ದೊಡ್ಡಾಟ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ. 

Bellary Utsav: ₹20 ಕೋಟಿಯ ಶ್ವಾನ ಪ್ರದರ್ಶನಕ್ಕೆ ವೇದಿಕೆಯಾಗ್ತಿರೋ ಬಳ್ಳಾರಿ ಉತ್ಸವ!

click me!