ಚಲಿಸುತ್ತಿದ್ದ ಬಸ್‌ನಿಂದ ಕಳಚಿಬಿತ್ತು ಟೈರ್ | ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ |
ಚಿಕ್ಕಮಗಳೂರು (ಅ. 25): ಚಲಿಸುತ್ತಿದ್ದ ಬಸ್ಸಿನಿಂದ ಟೈರ್ ಕಳಚಿ ಬಿದ್ದು ಮಾರ್ಗ ಮಧ್ಯೆಯೇ ಸರ್ಕಾರಿ ಬಸ್ ನಿಯಂತ್ರಣ ತಪ್ಪಿರುವ ಘಟನೆ ಮೂಡಿಗೆರೆ ಸಮೀಪದ ಭೂತನಕಾಡು ಬಳಿ ನಡೆದಿದೆ.
ಟೈರ್ ಕಳಚಿದ್ದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿತ್ತು. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.