ಟಿಪ್ಪು ಸುಲ್ತಾನ್ ಅವರು ಮೈಸೂರು ಯುದ್ಧದಲ್ಲಿ ಸೋತಾಗ ತಮ್ಮ ಮಕ್ಕಳನ್ನೇ ಅಡಮಾನ ಇಟ್ಟಿದ್ದರು. ಯುದ್ಧ ಸೋತ ಬಳಿಕ ಯುದ್ಧ ಕರ ನೀಡಲಾಗದೆ ಬ್ರಿಟಿಷರ ಬಳಿ ತನ್ನ ಎರಡು ಮಕ್ಕಳನ್ನ ಅಡಮಾನ ಇಟ್ಟಿದ್ದರು. ನಂತರ ಕರ ನೀಡಿ ತನ್ನ ಮಕ್ಕಳನ್ನ ಬಿಡಿಸಿಕೊಂಡು ಬಂದರು. ಹೀಗಾಗಿ ನಾವು ಹೋರಾಡಿದ ಎಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದ ಸಚಿವ ರಾಜಣ್ಣ
ಹಾಸನ(ಆ.15): ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಿತ್ತೂರು ರಾಣಿ ಚನ್ನಮ್ಮನಿಂದ ಹಿಡಿದು ಎಲ್ಲ ರಾಜರನ್ನ ನಾವು ಸ್ಮರಿಸಬೇಕಾಗಿದೆ. ಇವತ್ತು ಟಿಪ್ಪು ಸುಲ್ತಾನ್ ಬಗ್ಗೆ ಸ್ವಾತಂತ್ರ್ಯಕ್ಕಾಗಿ ಹೋರಾಟದ ಬಗ್ಗೆ ಸ್ಮರಿಸೋ ಸಂದರ್ಭದಲ್ಲಿ ನಾವು ಬೇರೆ ಬೇರೆ ಭಾವನೆ ಹೊಂದಿರತಕ್ಕದ್ದು ಸರಿಯಾದುದಲ್ಲ. ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನ ದೇಶದ ರಕ್ಷಣೆಗೆ ಹೋರಾಟ ಮಾಡಿದ ಟಿಪ್ಪು ಸುಲ್ತಾನ್ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂದು ಹಾಸನ ಉಸ್ತುವಾರಿ ಸಚಿವ ಕೆ. ಎನ್. ರಾಜಣ್ಣ ತಿಳಿಸಿದ್ದಾರೆ.
ಇಂದು(ಗುರುವಾರ) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಚಿವ ಕೆ. ಎನ್. ರಾಜಣ್ಣ ಭಾಗವಹಿಸಿದ್ದರು. ಸ್ವಾತಂತ್ರ್ಯೋತ್ಸವ ಭಾಷಣ ಮುದ್ರಿತ ಪ್ರತಿ ಹೊರತಾಗಿ ತಾವೇ ಭಾಷಣ ಮಾಡಿ, ಟಿಪ್ಪು ಸುಲ್ತಾನ್ ಹೆಸರು ಪ್ರಸ್ತಾಪಿಸಿದ್ದಾರೆ.
ಸಿದ್ದರಾಮಯ್ಯಗೆ ಕುಂಕುಮ ಹಚ್ಚಿದ್ರೆ ಅಳಿಸಿಕೊಳ್ತಾರೆ, ಮುಸ್ಲಿಮರಿಂದ ತಾವೇ ಟೋಪಿ ಹಾಕಿಸ್ಕೋತಾರೆ: ಆರ್.ಅಶೋಕ್
ಟಿಪ್ಪು ಸುಲ್ತಾನ್ ಅವರು ಮೈಸೂರು ಯುದ್ಧದಲ್ಲಿ ಸೋತಾಗ ತಮ್ಮ ಮಕ್ಕಳನ್ನೇ ಅಡಮಾನ ಇಟ್ಟಿದ್ದರು. ಯುದ್ಧ ಸೋತ ಬಳಿಕ ಯುದ್ಧ ಕರ ನೀಡಲಾಗದೆ ಬ್ರಿಟಿಷರ ಬಳಿ ತನ್ನ ಎರಡು ಮಕ್ಕಳನ್ನ ಅಡಮಾನ ಇಟ್ಟಿದ್ದರು. ನಂತರ ಕರ ನೀಡಿ ತನ್ನ ಮಕ್ಕಳನ್ನ ಬಿಡಿಸಿಕೊಂಡು ಬಂದರು. ಹೀಗಾಗಿ ನಾವು ಹೋರಾಡಿದ ಎಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದ ಸಚಿವ ರಾಜಣ್ಣ ಹೇಳಿದ್ದಾರೆ.