ಸಿದ್ದರಾಮಯ್ಯ ಕಾಲು ಕೆರೆದುಕೊಂಡು ಅರಮನೆ ವಿಚಾರದಲ್ಲಿ ಕೈ ಹಾಕುತ್ತಾರೆ: ವಿಶ್ವನಾಥ್

By Kannadaprabha News  |  First Published Aug 15, 2024, 9:36 AM IST

ಚಾಮುಂಡಿ ಬೆಟ್ಟ ನಾಡದೇವತೆ ನೆಲೆಸಿರುವ ಸ್ಥಳ. ಅದರ ಪಾಡಿಗೆ ಅದು ನಡೆದುಕೊಂಡು ಹೋಗಲು ಬಿಡಬೇಕು. ನಾನೊಬ್ಬ ಸವಾಜವಾದಿ ಎನ್ನುತ್ತಲೇ ತೀಟೆ ಮಾಡಲು ಹೋಗುತ್ತಾರೆ. ಉಪ ಮುಖ್ಯಮಂತ್ರಿ ಆಗಿದ್ದಾಗ ಕೈ ಹಾಕಿದ್ದರು. ಈಗ ಸಿಎಂ ಆಗಿದ್ದಾಗಲೂ ಕೈಹಾಕಿದ್ದಾರೆ. ಮೊದಲು ಜನರಿಗೆ ನಿವೇಶನ ಕೊಡಲು ಗಮನಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ 
 


ಮೈಸೂರು(ಆ.15): ಚಾಮುಂಡಿ ಬೆಟ್ಟ ನಾಡದೇವತೆ ನೆಲೆಸಿರುವ ಸ್ಥಳ. ಅದರ ಪಾಡಿಗೆ ಅದು ನಡೆದುಕೊಂಡು ಹೋಗಲು ಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ಕಾಲು ಕೆರೆದುಕೊಂಡು ಅರಮನೆ ವಿಚಾರದಲ್ಲಿ ಕೈ ಹಾಕುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರವೇ ಬೇರೆ. ಚಾಮುಂಡಿಬೆಟ್ಟ ಪ್ರಾಧಿಕಾರ ಬೇರೆಯದು ಎಂದರು.

ಚಾಮುಂಡಿ ಬೆಟ್ಟ ನಾಡದೇವತೆ ನೆಲೆಸಿರುವ ಸ್ಥಳ. ಅದರ ಪಾಡಿಗೆ ಅದು ನಡೆದುಕೊಂಡು ಹೋಗಲು ಬಿಡಬೇಕು. ನಾನೊಬ್ಬ ಸವಾಜವಾದಿ ಎನ್ನುತ್ತಲೇ ತೀಟೆ ಮಾಡಲು ಹೋಗುತ್ತಾರೆ. ಉಪ ಮುಖ್ಯಮಂತ್ರಿ ಆಗಿದ್ದಾಗ ಕೈ ಹಾಕಿದ್ದರು. ಈಗ ಸಿಎಂ ಆಗಿದ್ದಾಗಲೂ ಕೈಹಾಕಿದ್ದಾರೆ. ಮೊದಲು ಜನರಿಗೆ ನಿವೇಶನ ಕೊಡಲು ಗಮನಕೊಡಿ ಎಂದು ಟಾಂಗ್ ಕೊಟ್ಟರು.

Latest Videos

undefined

ಮುಡಾ ಹಗರಣಕ್ಕೆ ಸಚಿವ ಬೈರತಿ ಸುರೇಶ್ ನೇರ ಕಾರಣ, ಜೈಲಿಗೆ ಕಳಿಸಿ: ಎಚ್.ವಿಶ್ವನಾಥ್

ಎಂಡಿಎ ಹಗರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ, ಜನಾಂದೋಲನ ಸಮಾವೇಶಗ ಉದ್ದಕ್ಕೂ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ನಾಯಕರು ಜನರಿಗೆ ಕೊಟ್ಟ ಸಂದೇಶ ಏನು? ಕರ್ನಾಟಕ ರಾಜಕಾರಣ ಅಧೋಗತಿಗೆ ಹೋಗಿದೆ. ನಾಡನ್ನು ಆಳ್ವಿಕೆ ಮಾಡಿದವರಲ್ಲಿ ಎಂತಹ ಮಹಾನ್ ನಾಯಕರು ಇದ್ದಾರೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಧೂಳೀಪಟ ವಾಡಿಬಿಟ್ಟರು ಎಂದು ಅವರು ಟೀಕಿಸಿದರು.

ಎಂಡಿಎ ವಿಚಾರದಲ್ಲಿ ಕಾನೂನು ತೀರ್ಮಾನ ಮಾಡುತ್ತದೆ. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ಸಿದ್ದರಾಮಯ್ಯನವರೇ? ನಮಗೆ ನಿವೇಶನ ಕೊಡುತ್ತಾರೆ ಅಂತ ಜನರು ಕಾದರೆ ಆತನ ಹೆಂಡತಿಗೆ ನಿವೇಶನಗಳನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ನಿವೇಶನ ಕೊಡಲಿಲ್ಲ. ಅಂದು ಬಡವರಿಗೆ ನಿವೇಶನ ಕೊಡುವ ಮಾತನಾಡಲಿಲ್ಲ. ಎಂಡಿಎ ಅನ್ನು ಕ್ಲೀನ್ ಮಾಡುತ್ತೇವೆ ಎನ್ನುವ ಮಾತನ್ನು ಕೂಡ ಹೇಳಲಿಲ್ಲ. ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ: ಎಚ್.ವಿಶ್ವನಾಥ್ ಆಗ್ರಹ

ನಾನೊಬ್ಬ ಅಹಿಂದ ಸಿಎಂ ಎನ್ನುವುದು ಹಾಸ್ಯಾಸ್ಪದ. ಒಕ್ಕಲಿಗರು, ಲಿಂಗಾಯತರು ವೋಟ್ ಹಾಕಲಿಲ್ಲವೇ? ನೀವು ಮೊದಲು ಸರಿ ಇರಪ್ಪ, ಆಮೇಲೆ ಮಾತನಾಡಬೇಕು ಎಂದು ಅವರು ಟೀಕಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕೊಟ್ಟಿದ್ದಾರೆ. ಹೆದರಿಸಲು ಬರಬೇಡ. ನಾನೂ ಅಡ್ವೋಕೇಟ್, ನನಗೂ ಕಾನೂನು ಗೊತ್ತಿದೆ ಎಂದು ತಿರುಗೇಟು ನೀಡಿದರು.

ಎಂಡಿಎ ಹಗರಣ ತನಿಖೆ ಮಾಡುತ್ತೇವೆ ಎಂದರು. ಅದಕ್ಕಾಗಿ ಹೆಲಿಕಾಪ್ಟರ್ ನಲ್ಲಿ ಭೈರತಿ ಸುರೇಶ್ ಬಂದು ಹೋದ. ಈಗ ಏನಾಯ್ತು? ನೀವು ಬಂದು ಹೋದ ಮೇಲೂ ಎಂಡಿಎನಲ್ಲಿ 500 ನಿವೇಶನ ಹಂಚಲಾಗಿದೆ. ಭೈರತಿ ಸುರೇಶ್ 50 ಕೋಟಿ ರೂ. ಕೇಳಿದರೆ, ಸಿದ್ದರಾಮಯ್ಯ 62 ಕೋಟಿ ರೂಪಾಯಿ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

click me!