ಬೆಂಗಳೂರು ದಕ್ಷಿಣ: ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗ್ತಿದೆ, ಡಿ.ಕೆ.ಶಿವಕುಮಾರ್‌

By Girish Goudar  |  First Published Aug 15, 2024, 11:08 AM IST

ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗಾಗಲೇ ಕ್ಷೇತ್ರದ ಜನರಿಗೆ ನಿವೇಶನ ಕೊಡಲು ಜಾಗ ಗುರುತು ಮಾಡಿದ್ದೇವೆ. ಚನ್ನಪಟ್ಟಣದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಜಿಲ್ಲೆಯಲ್ಲಿ ಹುಟ್ಟಿದ್ದೇವೆ, ಈ ಜನರ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿವಕುಮಾರ್‌ 


ಚನ್ನಪಟ್ಟಣ(ಆ.15):  ಇಂದು ನನ್ನ ರಾಜಕೀಯ ಬದುಕಿನಲ್ಲಿ ಬಹಳ ಪವಿತ್ರ ದಿನವಾಗಿದೆ. 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಕೋರಲು ಬಂದಿದ್ದೇನೆ. ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆ ಆಗ್ತಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗ್ತಿದೆ. ಹಾಗಾಗಿ ಇಂದು ಚನ್ನಪಟ್ಟಣಕ್ಕೆ ಬಂದು ಧ್ವಜಾರೋಹಣ ಮಾಡ್ತಿದ್ದೇನೆ. ಸರ್ಕಾರದ ಪ್ರತಿನಿಧಿಯಾಗಿ ಬಂದು ಧ್ವಜಾರೋಹಣ ಮಾಡ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು,  ನಿಮ್ಮನ್ನ ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ. ಧ್ವಜವನ್ನ ಅರ್ಧಕ್ಕೆ ಹಾರಿಸಿದ್ರೆ ಅದು ಅಗೌರವ, ಹಾಗೆಯೇ ಜನರನ್ನ ಅರ್ಧಕ್ಕೆ ಬಿಟ್ಟು ಹೋಗೋದು ಅಗೌರವ ಎಂದು ಹೇಳಿದ್ದಾರೆ. 

Latest Videos

undefined

ಬಿಜೆಪಿ ನೂರು ಜನ್ಮ ತಾಳಿದ್ರೂ ಗ್ಯಾರಂಟಿ ಯೋಜನೆ ನಿಲ್ಲಿಸೋಕಾಗಲ್ಲ: ಡಿಕೆ ಶಿವಕುಮಾರ ವಾಗ್ದಾಳಿ!

ಹೆಚ್ಡಿಕೆಗೆ ತಿರುಗೇಟು

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದು, ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗಾಗಲೇ ಕ್ಷೇತ್ರದ ಜನರಿಗೆ ನಿವೇಶನ ಕೊಡಲು ಜಾಗ ಗುರುತು ಮಾಡಿದ್ದೇವೆ. ಚನ್ನಪಟ್ಟಣದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಜಿಲ್ಲೆಯಲ್ಲಿ ಹುಟ್ಟಿದ್ದೇವೆ, ಈ ಜನರ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ. ರಾಮನಗರ ಜಿಲ್ಲೆಗೆ ಸಿಎಂ 150 ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಈ ಬಗ್ಗೆ ನಿನ್ನೆ ಆದೇಶ ಆಗಿದೆ. ಪಕ್ಷಾತೀತವಾಗಿ ಇಲ್ಲಿ ಅಭಿವೃದ್ಧಿ ಕೆಲಸ‌ ಮಾಡ್ತೇವೆ. ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ. 

ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಆಗುತ್ತೆ. ಚನ್ನಪಟ್ಟಣಕ್ಕೆ 5 ಸಾವಿರ ಮನೆಗಳು, 15 ಸಾವಿರ ನಿವೇಶನ ಮಂಜೂರು ಮಾಡಲಾಗುವುದು‌. ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದೇವೆ‌. ಈ ಹಿಂದೆ ಇದ್ದ ಶಾಸಕರು ಇಂತಹ ಪವಿತ್ರ ಕಾರ್ಯಕ್ಕೆ ಬಂದಿದ್ರೋ ಇಲ್ವೋ ಗೊತ್ತಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಹೆಚ್ಡಿಕೆಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. 

click me!