ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದಂಚಿನ ಕುಂದಕೆರೆ ಭಾಗದ ಜಾನುವಾರುಗಳಿಗೆ ಕಂಟಕ ಪ್ರಾಯವಾಗಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆಯು ಸೆರೆ ಹಿಡಿದಿದೆ.
ಚಾಮರಾಜನಗರ(ಮೇ 20): ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದಂಚಿನ ಕುಂದಕೆರೆ ಭಾಗದ ಜಾನುವಾರುಗಳಿಗೆ ಕಂಟಕ ಪ್ರಾಯವಾಗಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆಯು ಸೆರೆ ಹಿಡಿದಿದೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಬಳಿ ಎಸಿಎಫ್ ಕೆ. ಪರಮೇಶ್ ನೇತೃತ್ವದಲ್ಲಿ ದಸರಾ ಆನೆ ಅಭಿಮನ್ಯು ಮುಂದಾಳತ್ವದಲ್ಲಿ ಕೃಷ್ಣ, ಜಯಪ್ರಕಾಶ್, ಪಾರ್ಥಸಾರಥಿ, ಗಣೇಶ,ಪುಟ್ಟ ಮಂಗಳವಾರ ಮುಂಜಾನೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದ ವೇಳೆ ಅಭಿಮನ್ಯು ಆನೆಯ ಮೇಲಿದ್ದ ಡಾ. ನಾಗರಾಜು, ಶೂಟರ್ ಅಕ್ರಂ ಕೂಂಬಿಂಗ್ ನಡೆವ ವೇಳೆ ಕಂಡುಬಂದ ಹುಲಿಗೆ ಅಕ್ರಂ ಅರಿವಳಿಕೆ ಮದ್ದು ಗನ್ ಹೊಡೆದಿದ್ದಾರೆ. ಅರಿವಳಿಕೆ ಮದ್ದು ಹುಲಿಗೆ ಚುಚ್ಚಿದ ಬಳಿಕ ಕುಂದಕೆರೆ ಗ್ರಾಮದ ಪರಮೇಶ್ವರಪ್ಪನವರ ಜಮೀನಿನಲ್ಲಿ ನಿತ್ರಾಣಗೊಂಡಿದ್ದ ಹುಲಿಯನ್ನು ಕಂಡು ಸಿಬ್ಬಂದಿ ಬಲೆ ಹಾಕಿ ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾದರು.
ಇದೇ ನೋಡಿ ಹಡಗುಗಳ ಸ್ಮಶಾನ, ಪಾಳು ಬಿದ್ದ ನೌಕೆಗಳೊಳಗೆ 'ಖಜಾನೆ'!
ಹುಲಿ ಸೆರೆಯ ಕಾರ್ಯಾಚರಣೆ ಅರಿತ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ಹುಲಿ ಬೋನಿಗೆ ಬಿದ್ದ ಸುದ್ದಿ ಕೇಳಿ ಬರುವ ವೇಳೆಗೆ ಬೋನಿನಲ್ಲಿದ್ದ ಹುಲಿಯನ್ನು ಮದ್ದೂರು ವಲಯದ ಕೆರೆ ಬಳಿ ಕೊಂಡೊಯ್ದು ಇಟ್ಟರು.
ಹುಲಿಸೆರೆಯಾಗುವ ಸುದ್ದಿ ಅರಿತು ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಟಿ. ಬಾಲಚಂದ್ರ ಸ್ಥಳಕ್ಕಾಗಮಿಸಿ ಹುಲಿಯನ್ನು ವೀಕ್ಷಿಸಿದರು.
'ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣ'
ಬಳಿಕ ಡಾ. ನಾಗರಾಜು ಸೆರೆ ಸಿಕ್ಕ ಹುಲಿಯನ್ನು ತಪಾಸಣೆ ಮಾಡಿದಾಗ ಹುಲಿ ಎಡ ಕಾಲಿಗೆ ಏಟು ಬಿದ್ದು ಎರಡು ತೂತು ಹಾಗು ಗಾಯಗೊಂಡಿದೆ ಎಂದು ಕೇತ್ರ ನಿರ್ದೇಶಕ ಟಿ.ಬಾಲಚಂದ್ರ ಕನ್ನಡಪ್ರಭಕ್ಕೆ ತಿಳಿಸಿದರು.
ಇಂದಿನ ಕಾರ್ಯಾಚರಣೆಯಲ್ಲಿ ಕುಂದಕೆರೆ ಅರಣ್ಯಾಧಿಕಾರಿ ಮಂಜುನಾಥ್, ಗೋಪಾಲಸ್ವಾಮಿ ಬೆಟ್ಟದ ಅರಣ್ಯಾಧಿಕಾರಿ ಎನ್.ಪಿ. ನವೀನ್ ಕುಮಾರ್, ಮೂಲೆಹೊಳೆ ಅರಣ್ಯಾಧಿಕಾರಿ ಮಹದೇವು ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಭಾಗವಹಿಸಿದ್ದರು.
ನಂತರ ಸೆರೆಯಾದ ಹುಲಿಯನ್ನು ಮೈಸೂರು ಬಳಿಯ ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಮೈಸೂರು ಹೆದ್ದಾರಿ ಮೂಲಕ ಸಾಗಿಸಿದರು.
ರೈತರಲ್ಲಿ ನೆಮ್ಮದಿ:
ಕಳೆದ ತಿಂಗಳಿನಿಂದ ಈ ಭಾಗದಲ್ಲಿ ಒಂದಲ್ಲ, ಎರಡಲ್ಲ, ಹತ್ತಕ್ಕೂ ಹೆಚ್ಚು ಜಾನುವಾರು ಹಾಗೂ ಮೇಕೆಗಳು ಸೆರೆಯಾದ ಹುಲಿ ಕಚ್ಚಿ ಸಾಯಿಸಿತ್ತು. ಜಾನುವಾರು ಬಲಿಯಾಗುತ್ತಿರುವುದನ್ನು ಕಂಡ ರೈತರು ಆತಂಕಕ್ಕೊಳಗಾಗಿದ್ದರು. ಅರಣ್ಯ ಸಚಿವ ಆನಂದ್ ಸಿಂಗ್, ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಭೇಟಿ ನೀಡಿ ಹುಲಿ ಸೆರೆ ಹಿಡಿಸುವ ಭರವಸೆ ನೀಡಿದ್ದರು. ನೀಡಿದ್ದ ಭರವಸೆಯಂತೆ ಹುಲಿ ಮಂಗಳವಾರ ಸೆರೆಯಾಗಿದೆ.
ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿ
ಗುಂಡ್ಲುಪೇಟೆ:ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ಸುತ್ತ ಮುತ್ತ ನಾಲ್ಕು ಹುಲಿಗಳಲ್ಲಿ ಕಾದಾಟ ನಡೆಸಿ ಸೆರೆಯಾದ ಹುಲಿ ಎಡ ಕೈ ಗಾಯಗೊಂಡು ಹುಳ ಬೀಳುತ್ತಿವೆ ! ಈ ಸಂಬಂಧ ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ ಹುಲಿ ಗಾಯಗೊಂಡ ಹಿನ್ನೆಲೆ ಬೇಟೆಯಾಡಲು ಅಶಕ್ತವಾದ ಕಾರಣ ಜಾನುವಾರುಗಳ ಮೇಲೆ ಎರಗಿದೆ ಎಂದರು. ಹುಲಿಗಳ ಕಾದಾಟದಲ್ಲಿ ಗಾಯಗೊಂಡ ಹುಲಿ ಸೆರೆಯಾಗಿದೆ. ಈಗ ಚಿಕಿತ್ಸೆ ನೀಡಿದ ಬಳಿಕ 10 ದಿನಗಳ ಕಾಲ ನಿಗಾವಹಿಸುವ ನಿರ್ಧಾರಕ್ಕೆ ಇಲಾಖೆ ಬರಲಾಗಿದೆ ಎಂದರು.
ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!
ಕುಂದಕೆರೆ ವಲಯದಲ್ಲಿ ಸೆರೆಯಾದ ಹುಲಿ ನೋಡಲು ಹಾಗೂ ಮಾಹಿತಿ ಪಡೆಯಲು ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಭೇಟಿ ನೀಡಿ ಬೋನಿನಲ್ಲಿದ್ದ ಹುಲಿಯನ್ನು ವೀಕ್ಷಿಸಿದರು. ಬಂಡೀಪುರ ಕ್ಷೇತ್ರ ನಿರ್ದೇಶಕ ಟಿ. ಬಾಲಚಂದ್ರ ಈ ಸಮಯದಲ್ಲಿ ಮಾತನಾಡಿ, ಹುಲಿ ಗಾಯಗೊಂಡಿದೆ. ಸದ್ಯಕ್ಕೀಗ ಚಿಕಿತ್ಸೆ ನೀಡಲು ಇಲಾಖೆಯ ಮುಂದಾಗಿದೆ ಎಂದರು.
ಸೆರೆ ಹಿಡಿದ ಹುಲಿಯನ್ನು ಮೈಸೂರು ಮೃಗಾಲಯದಲ್ಲಿ ಬಿಡಲು ಆಗುವುದಿಲ್ಲ, ಕಾರಣ ಹುಲಿ ಗಾಯಗೊಂಡಿದೆ. ಚಿಕಿತ್ಸೆ ನೀಡಲು ಹಾಗೂ ಸಾಕಲು ಮೃಗಾಲಯದಲ್ಲಿ ಹಣವಿಲ್ಲ ಎಂದು ಅಲ್ಲಿನ ಅಕಾರಿ ಹೇಳಿದ್ದಾರೆ ಎಂದರು.
Fact Check: ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್ ರೈಲು!
ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಮಾತನಾಡಿ, ಹುಲಿ ಚಿಕಿತ್ಸೆಗೆ ಬೇಕಾದ ಹಣ ಸಂಬಂಧ ಅರಣ್ಯ ಸಚಿವ ಆನಂದ್ ಸಿಂಗ್ ರೊಂದಿಗೆ ಮಾತನಾಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಬಂಡೀಪುರ ಕ್ಷೇತ್ರ ನಿರ್ದೇಶಕ ಟಿ. ಬಾಲಚಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ. ಜಗದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್. ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಪಿ. ಗಿರೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಸ್. ಸೋಮಶೇಖರ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಲ್‌ಐಸಿ ಗುರು ,ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಎಸಿಎಫ್ ಕೆ. ಪರಮೇಶ್, ಎಂ.ಎಸ್. ರವಿಕುಮಾರ್, ತಾಪಂ ಮಾಜಿ ಸದಸ್ಯ ಸಿ. ಮಹದೇವ ಪ್ರಸಾದ್, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ಚನ್ನಮಲ್ಲೀಪುರ ಬಸವಣ್ಣ, ಮಲ್ಲಿಕಾರ್ಜುನ್, ಮೂಡ್ನಾಕೂಡು ಕೆಂಡ್ಸ್ ಸೇರಿದಂತೆ ಹಲವಾರು ಮಂದಿ ಇದ್ದರು.