ಬಂಡೀಪುರ: ಕಾಡುಕೋಣದೊಂದಿಗೆ ಕಾದಾಟ, ಹುಲಿ ಸಾವು

By Kannadaprabha News  |  First Published Jun 17, 2021, 8:58 AM IST

* ಬಂಡೀಪುರ ಕಾಡಿನಲ್ಲಿ ನಡೆದ ಘಟನೆ
* 10 ವರ್ಷದ ಹೆಣ್ಣು ಹುಲಿಯ ಮೃತದೇಹ ಪತ್ತೆ
* ಹುಲಿ ಹಾಗೂ ಕಾಡುಕೋಣದ ಕಾದಾಟ ನಡೆಸಿ ಗಾಯಗೊಂಡಿರಬಹುದು 


ಗುಂಡ್ಲುಪೇಟೆ(ಜೂ.17): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡು ಕೋಣದ ಜತೆಗಿನ ಕಾದಾಟದಲ್ಲಿ ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. 

ಬಂಡೀಪುರ ವಲಯದ ಒಳಕಲ್ಲಾರೆ ಗಸ್ತಿನ ಉಪ್ಪುನೀರು ಹಳ್ಳ ಸರ್ಕಲ್‌ನಿಂದ ಗೋಪಾಲಸ್ವಾಮಿ ಬೆಟ್ಟದ ಕಟ್ಟೆಗೆ ಹೋಗುವ ರಸ್ತೆಯ ಬಳಿ ಸುಮಾರು 10 ವರ್ಷದ ಹೆಣ್ಣು ಹುಲಿಯ ಮೃತದೇಹ ಪತ್ತೆಯಾಗಿದೆ. ಮೃತ ಹೆಣ್ಣು ಹುಲಿಯ ದೇಹವನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಕಾಡುಕೋಣದ ಜೊತೆ ಕಾದಾಟದಿಂದ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

Tap to resize

Latest Videos

undefined

ಬಂಡೀಪುರ ಅಭಯಾರಣ್ಯದಲ್ಲಿ  10 ವರ್ಷದ ಗಂಡು ಹುಲಿ ಸಾವು

ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಮೃತ ಹುಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಹುಲಿ ಹಾಗೂ ಕಾಡುಕೋಣದ ಕಾದಾಟ ನಡೆಸಿ ಗಾಯಗೊಂಡಿರಬಹುದು ಎಂದು ತಿಳಿಸಿದ್ದಾರೆ. ಮೃತ ಹುಲಿಯ ಎಲ್ಲಾ ಅಂಗಾಂಗ ಸುರಕ್ಷಿತವಾಗಿವೆ ಅರಣ್ಯ ಸಂರಕ್ಷಣಾ​ಧಿಕಾರಿಗಳು ತಿಳಿಸಿದ್ದಾರೆ.
 

click me!