ಧರ್ಮಸ್ಥಳದ ಬಗ್ಗೆ ಅಪಪ್ರಚಾರ: 3 ತಿಂಗಳು ಜೈಲು ಶಿಕ್ಷೆ

By Kannadaprabha News  |  First Published Jun 17, 2021, 8:27 AM IST

* ಕೋರ್ಟ್‌ ಆದೇಶ ಉಲ್ಲಂಘಿಸಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಿದ್ದ ಸೋಮನಾಥ ನಾಯಕ್‌
* ಸ್ಥಿರಾಸ್ತಿ ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ರು. ಪರಿಹಾರ ನೀಡಬೇಕು
* 3 ತಿಂಗಳ ಸಜೆ ಪುನರುಚ್ಚರಿಸಿದ ಬೆಳ್ತಂಗಡಿ ನ್ಯಾಯಾಲಯ


ಬೆಳ್ತಂಗಡಿ(ಜೂ.17): ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ದ ಕುರಿತು ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ 3 ತಿಂಗಳ ಸಜೆಯನ್ನು ಬೆಳ್ತಂಗಡಿ ನ್ಯಾಯಾಲಯ ಪುನರುಚ್ಚರಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಿಂದ ದಾಖಲಿಸಲ್ಪಟ್ಟಮೂಲ ದಾವೆ ನಂಬರ್‌ 226/2013ರಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌, ಇತರರ ವಿರುದ್ಧ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆ ಅವರ ಕುಟುಂಬ ಹಾಗೂ ಸಂಸ್ಥೆಗಳ ಗೌರವಕ್ಕೆ ಹಾನಿಯಾಗುವ ಹೇಳಿಕೆ, ಸುದ್ದಿ ಅಥವಾ ಆರೋಪ ಮಾಡದಂತೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿತ್ತು. ಆ ಆದೇಶ ಪದೇ ಪದೆ ಉಲ್ಲಂಘನೆಯಾಗುತ್ತಿದ್ದ ಕಾರಣ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್‌ ಹಿಂದೆ 2 ಬಾರಿ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದರ ವಿರುದ್ಧ ಸೋಮನಾಥ ನಾಯಕ್‌ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಪ್ರಕರಣ ಹೆಚ್ಚುವರಿ ತನಿಖೆಗೆ ಮೂಲ ಕೋರ್ಟ್‌ಗೆ ಮರುರವಾನಿಸಲ್ಪಟ್ಟಿತ್ತು.

Tap to resize

Latest Videos

ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ಸಚಿವ ಭೇಟಿ, ಫೋಟೋ ಹರಿಬಿಟ್ಟ ಬಿಜೆಪಿ ಶಾಸಕಗೆ ಕ್ಲಾಸ್

ಈ ಸಂಬಂಧ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಜೂ.8ರಂದು ಅಂತಿಮ ಆದೇಶ ಹೊರಡಿಸಿ, ಹಿಂದಿನ ತೀರ್ಪನ್ನೇ ಪುನರುಚ್ಚರಿಸಿದ್ದಾರೆ. 3 ತಿಂಗಳ ಅಲ್ಲದೆ ಸ್ಥಿರಾಸ್ತಿ ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ರು. ಪರಿಹಾರವಾಗಿ ನೀಡಬೇಕು. ಪ್ರಕರಣದಲ್ಲಿ ಕೋರ್ಟ್‌ ಅವಧಿ ದುರುಪಯೋಗಪಡಿಸಿ ಮತ್ತೆ ಶ್ರೀ ಕ್ಷೇತ್ರಕ್ಕೆ ಉಪಟಳ ನೀಡಿದ್ದಕ್ಕೆ ಹೆಚ್ಚುವರಿ ಪರಿಹಾರವಾಗಿ 2,000 ರು. ನೀಡುವಂತೆಯೂ ಆದೇಶಿಸಿದೆ ಎಂದು ಎ.ವಿ. ಶೆಟ್ಟಿ ತಿಳಿಸಿದ್ದಾರೆ.
 

click me!