ವಿಶೇಷವಾಗಿ ಶಾಮನೂರು 90ನೇ ವರ್ಷದ ಹುಟ್ಟುಹಬ್ಬ

By Kannadaprabha NewsFirst Published Jun 17, 2021, 8:39 AM IST
Highlights
  • ಡಾ.ಶಾಮನೂರು ಶಿವಶಂಕರಪ್ಪ 90ನೇ ವರ್ಷದ ಜನ್ಮದಿನ
  • ಕೋವಿಡ್‌ ವ್ಯಾಕ್ಸಿನ್‌ ಲಸಿಕಾ ಶಿಬಿರಕ್ಕೆ ಚಾಲನೆ
  • ಆಹಾರ ಕಿಟ್‌ ವಿತರಿಸುವ ಮೂಲಕ ತಮ್ಮ ಅರ್ಥಪೂರ್ಣ ಜನ್ಮದಿನ

ದಾವಣಗೆರೆ (ಜೂ.17):  ಕಾಂಗ್ರೆಸ್ಸಿನ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಡಾ.ಶಾಮನೂರು ಶಿವಶಂಕರಪ್ಪ ನಗರದ ತಮ್ಮ ನಿವಾಸದಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಕುಟುಂಬ ವರ್ಗದ ಜೊತೆಗೆ, ಕಾಂಗ್ರೆಸ್‌ ಪಕ್ಷ ಹಾಗೂ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ 90ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪಕ್ಷದಿಂದ, ಬಾಪೂಜಿ ವಿದ್ಯಾಸಂಸ್ಥೆಯಿಂದ, ತಮ್ಮ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ತಾವು 6 ಕೋಟಿ ರು. ವೆಚ್ಚದಲ್ಲಿ ಆಯೋಜಿಸಿರುವ ಕೋವಿಡ್‌ ವ್ಯಾಕ್ಸಿನ್‌ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ, ಆಹಾರ ಕಿಟ್‌ ವಿತರಿಸುವ ಮೂಲಕ ತಮ್ಮ ಅರ್ಥಪೂರ್ಣ ಜನ್ಮದಿನಕ್ಕೆ ಕಾರಣರಾದರು.

ಸ್ವಂತ ದುಡ್ಡಲ್ಲಿ ದಾವಣಗೆರೆಯಲ್ಲಿ 60000 ಡೋಸ್‌ ಲಸಿಕೆ: ಶಾಮನೂರು

ಇದಕ್ಕೂ ಮುನ್ನ ತಮ್ಮ ಪುತ್ರ, ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ್‌ ಅವರ ನಿವಾಸ ಶಿವ ಪಾರ್ವತಿಯಲ್ಲಿ ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳ ಜತೆಯಲ್ಲಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳೂ ನಡೆದವು.

click me!