ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರನ್ನು ಬಂಗಾರದ ಕಟ್ಟು ಹಾಕಿ ಧರಿಸಿ, ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಕಡೆಗಳಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಅ.26): ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರನ್ನು ಬಂಗಾರದ ಕಟ್ಟು ಹಾಕಿ ಧರಿಸಿ, ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಕಡೆಗಳಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ಹಲವು ತಲೆಮಾರುಗಳಿಂದ ಬಂದಂತಹ ವನ್ಯಜೀವಿಗಳಿಗೆ ಸಂಬಂಧಿಸಿದ ಕೆಲವಾರು ವಸ್ತುಗಳು ಇದ್ದು, ಇವರಲ್ಲಿ ಗೊಂದಲ ಮೂಡಿದೆ. ಹುಲಿ ಉಗುರನ್ನು ಧರಿಸುವುದು ಒಳ್ಳೆಯದು ಎಂಬ ನಂಬಿಕೆ ಸಾಮಾನ್ಯ ಜನರಲ್ಲಿ ಇದೆ. ಇದನ್ನು ಧರಿಸಿದರೆ ಧೈರ್ಯವಂತರಾಗುತ್ತಾರೆ, ಅದೃಷ್ಟ ಒಲಿಯತ್ತೆ ಎಂಬ ನಂಬಿಕೆಯೂ ಇದೆ.
ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ವಂಚಕರು ನಕಲಿ ಹುಲಿ ಉಗುರನ್ನು ಕೂಡ ಅಸಲಿ ಎಂದು ಹೇಳಿ ಮಾರಾಟ ಮಾಡಿದ್ದಾರೆ. ಕೆಲವರು ಅಸಲಿ ಉಗುರನ್ನು ಕೂಡ ಧರಿಸಿರಬಹುದು. ಆದರೆ, ವರ್ತೂರು ಸಂತೋಷ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹುಲಿಯುಗುರು ಅಸಲಿಯೋ, ನಕಲಿಯೋ, ಎಲ್ಲರೂ ಧರಿಸಿದ್ದನ್ನು ತಮ್ಮ ಕುತ್ತಿಗೆಯಿಂದ ತೆಗೆದಿದ್ದಾರೆ. ಈ ಸುದ್ದಿ ಜನರಲ್ಲಿ ಸಹಜವಾಗಿಯೇ ಗಾಬರಿ ಹುಟ್ಟಿಸಿದೆ. ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಅರಣ್ಯಾಧಿಕಾರಿಗಳು ಸ್ವಯಂಪ್ರೇರಿತರಾಗಿ ದೂರು ದಾಖಲಿಸುತ್ತಿರುವುದರಿಂದ ಜನರು ಭಯಬಿದ್ದಿದ್ದಾರೆ.
ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!
ಮುಂದುವರಿಯಲಿರುವ ಸಮಸ್ಯೆ: ಇನ್ನೊಂದೆಡೆ ಮಲೆನಾಡಿನ ಅನೇಕ ಹಳೆಯ ಮನೆಗಳಲ್ಲಿ ಹಲವು ತಲೆಮಾರುಗಳಿಂದ ಬಂದಿರುವ ಕಾಡುಕೋಣಗಳು, ಜಿಂಕೆ ಕೋಡನ್ನು ಅಲಂಕಾರವಾಗಿ ಗೋಡೆಗಳಲ್ಲಿ ತೂಗು ಹಾಕಿದ್ದಾರೆ. ಇದರ ಬಗ್ಗೆ ಅವರಿಗೆ ಯಾವ ಮಾಹಿತಿಯೂ ಇಲ್ಲ. ಆದರೆ ಅರಣ್ಯ ಇಲಾಖೆ ಪ್ರಕಾರ ಇದು ಕಾನೂನು ಬಾಹಿರ!
ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಸಂದರ್ಭ ಯಾವ ಮನೆಯಲ್ಲಿ ಈ ರೀತಿಯ ವಸ್ತುಗಳು ಇವೆಯೋ ಅವುಗಳನ್ನು ಅವರು ಸರ್ಕಾರದೆದುರು ಘೋಷಿಸಿಕೊಳ್ಳಬೇಕಿತ್ತು. ಇದಕ್ಕೆ ಆಗ ಅವಕಾಶ ಕೂಡ ಮಾಡಿಕೊಡಲಾಗಿತ್ತು. ಆದರೆ, ಬಹುತೇಕ ಬಂದಿಗೆ ಇದರ ಬಗ್ಗೆ ಯಾವ ಅರಿವೂ ಇಲ್ಲ. ಈಗ ಇದನ್ನು ಘೋಷಿಸಿಕೊಳ್ಳಲು ಅವಕಾಶವೇ ಇಲ್ಲ. ಹಾಗೆಯೇ ಇಟ್ಟುಕೊಳ್ಳಲೂ ಕೂಡ ಅವಕಾಶವಿಲ್ಲ. ಈಗ ಬಹಿರಂಗಪಡಿಸಿದರೆ ಕೇಸು ಗ್ಯಾರಂಟಿ. ಸೆರಗಲ್ಲಿ ಕೆಂಡ ಕಟ್ಟಿಕೊಂಡ ಸ್ಥಿತಿ.
ಶಿವಮೊಗ್ಗದಲ್ಲಿ ಯಾವುದೇ ಪ್ರಕರಣಗಳಿಲ್ಲ: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿ, ಬಂಧನಕ್ಕೆ ಒಳಗಾದ ಬಳಿಕ ರಾಜ್ಯದ ಇನ್ನೂ ಹಲವೆಡೆ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಹುಲಿಯುಗುರು ಪೆಂಡೆಂಟ್ ಮಾದರಿಗಳ ಧಾರಣೆ ಸಂಬಂಧ ಎಲ್ಲೆಡೆ ಆತಂಕದ ವಾತಾವರಣವಿದ್ದು, ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಈ ರೀತಿಯ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈಗ ವಿನಯ್ ಗುರೂಜಿ ವಿಚಾರ ಮುನ್ನೆಲೆಗೆ: ಆದರೆ, ಕೆಲವು ವರ್ಷಗಳ ಹಿಂದೆ ಇಲ್ಲಿನ ಉದ್ಯಮಿ, ಪ್ರಗತಿಪರ ಕೃಷಿಕ ಅಮರೇಂದ್ರ ಕಿರೀಟಿ ಅವರು ಗೌರಿಗದ್ದೆ ವಿನಯ್ ಗುರೂಜಿ ಅವರಿಗೆ ನೀಡಿದ್ದ ಹುಲಿ ಚರ್ಮದ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಇದಕ್ಕೆ ಅಮರೇಂದ್ರ ಕಿರೀಟಿಯವರು ಸ್ಪಷ್ಟನೆ ಕೂಡ ನೀಡಿದ್ದಾರೆ. 80 ವರ್ಷಗಳ ಹಿಂದೆಯೇ ತಮ್ಮ ಪೂರ್ವಿಕರಿಂದ ಬಂದಿದ್ದ ಹುಲಿಚರ್ಮವನ್ನು 2019ರಲ್ಲಿ ಗೌರಿಗದ್ದೆ ವಿನಯ್ ಗುರೂಜಿ ಅವರಿಗೆ ನೀಡಿದ್ದರು. ಇದಕ್ಕೆ ಮೊದಲು ವನ್ಯಜೀವಿ ಡಿಎಫ್ಓ ಚಂದ್ರಶೇಖರ್ ಅವರಿಂದ ಅನುಮತಿ ಕೂಡ ಪಡೆದಿದ್ದರು.
ಬೆಂಗಳೂರಿಗೆ ರಾಮನಗರವನ್ನು ಸೇರಿಸಿದರೆ ರೈತರ ಕೃಷಿಭೂಮಿಗೆ ಸಂಚಕಾರ: ಅಶ್ವತ್ಥ ನಾರಾಯಣ
ಆದರೆ ಆ ಬಳಿಕ ಇದು ಸಾಮಾಜಿಕ ಜಾಲತಾಣಲ್ಲಿ ಚರ್ಚೆಗೆ ಒಳಗಾದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ 2022ರಲ್ಲಿ ಈ ಹುಲಿಚರ್ಮನ್ನು ಗುರೂಜಿ ಅವರಿಂದ ವಾಪಸ್ ಪಡೆದು ಇಲಾಖೆಗೆಯವರಿಗೆ ಹಸ್ತಾಂತರಿಸಿದ್ದರು. ಈ ವೇಳೆ ಎಲ್ಲ ಕಾನೂನು ಪ್ರಕ್ರಿಯೆಯನ್ನು ಪಾಲಿಸಿದ್ದರು. ಇದನ್ನು ಪಡೆದ ಇಲಾಖೆ ಚರ್ಮವನ್ನು ನಾಶಪಡಿಸಿದ್ದರು. ಈಗ ಹುಲಿಚರ್ಮ ನನ್ನ ಬಳಿಯಾಗಲಿ, ವಿನಯ್ ಗುರೂಜಿ ಅವರ ಬಳಿಯಾಗಲಿ ಇಲ್ಲ ಎಂದು ಕಿರೀಟಿಯವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.