ಬಳ್ಳಾರಿ: ಆಟವಾಡುತ್ತಿದ್ದ ಬಾಲಕನನ್ನು ಮನೆಯವರೆದುರೆ ಹೊತ್ತೊಯ್ದ ಚಿರತೆ

Published : Dec 11, 2018, 08:47 PM ISTUpdated : Dec 11, 2018, 08:55 PM IST
ಬಳ್ಳಾರಿ: ಆಟವಾಡುತ್ತಿದ್ದ ಬಾಲಕನನ್ನು ಮನೆಯವರೆದುರೆ ಹೊತ್ತೊಯ್ದ ಚಿರತೆ

ಸಾರಾಂಶ

ಮನೆ ಮುಂದೆ ಆಟವಾಡುತ್ತಿದ್ದ  ಮಗುವಿನ ಮೇಲೆ ದಾಳಿ ಮಾಡಿದ ಚಿರತೆ ಮಗುವಿನ ಪ್ರಾಣವನ್ನೇ ಬಲಿ ಪಡೆದಿದೆ.

ಬಳ್ಳಾರಿ[ಡಿ.11]  ಮನೆಮುಂದೆ ಆಟವಾಡುತ್ತಿದ್ದ ಮಗು ಚಿರತೆ ದಾಳಿಗೆ ಬಲಿಯಾಗಿದೆ. ಕಂಪ್ಲಿ ತಾಲೂಕಿನ ಸೋಮಲಾಪುರದಲ್ಲಿ ನಡೆದಿರುವ ಪ್ರಕರಣ ಕರುಳು ಹಿಂಡುತ್ತಿದೆ.

ಚಿರತೆ ದಾಳಿಗೆ ಬಲಿಯಾಗಿರುವ ಬಾಲಕ  ನಾಡೋಜ ದಿ. ಬುರ್ರಕಥಾ ಈರಮ್ಮ ಅವರ ಮೊಮ್ಮಗ.  ದರೋಜಿ ಕರಡಿ ಧಾಮದ ಬಳಿಯ ಗ್ರಾಮದ  ವೆಂಕಟರಾಜು (3 )  ಎಂಬ ಪುಟ್ಟ ಮಗುವನ್ನು ಚಿರತೆ ನೋಡುನೋಡುತ್ತಿದ್ದಂತೆ ಹೊತ್ತೊಯ್ದಿದೆ.

ಮನೆಯವರೆಲ್ಲ ನೋಡನೋಡುತ್ತಿದ್ದಂತೆ‌ ಮಗುವನ್ನು ಚಿರತೆ ಎಳೆದೊಯ್ದಿದೆ. ರಕ್ತ ಹೀರಿ ಸಾಯಿಸಿದ ಚಿರತೆ ಮಗುವಿನ ಶವವನನ್ನು ಊರ ಹಿಂಭಾಗದ ಪೊದೆಯಲ್ಲಿ  ಹಾಕಿದ್ದು ಊರವರು ಹುಡುಕಾಟ ನಡೆಸಿದಾಗ ಪತ್ತೆಯಾಗಿದೆ.

PREV
click me!

Recommended Stories

ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ
ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!