ಇಲ್ಲೊಬ್ಬ ನಕಲಿ ಏಜೆಂಟ್‌ನಿಗೆ ಜನರೆ ಧರ್ಮದ ಏಟು ನೀಡಿದ್ದಾರೆ. ಬಳ್ಳಾರಿಯ ನಕಲಿ ಏಟೆಂಟ್ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ.
ಬಳ್ಳಾರಿ[ಡಿ.01] ಹಜ್ ಯಾತ್ರೆಗೆ ಕಳಿಸುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವ ನಕಲಿ ಎಜೆಂಟ್ ನನ್ನು ಹಣ ಹಾಕಿದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಳ್ಳಾರಿಯಲ್ಲಿಂದು ನಡೆದಿದೆ.
ಮದೀನ ಟ್ರಾವೆಲ್ಸ್ ಹೆಸರಲ್ಲಿ ಬಾಂಬೆ ಮೂಲದ ಏಜೆಂಟ್ ಬಳ್ಳಾರಿಯ ಅಬ್ದುಲ್ ಸುಬಾನ್ ಎಂಬಾತ ಜನರಿಂದ ಹಣ ಸಂಗ್ರಹ ಮಾಡಿ ಹಜ್ ಯಾತ್ರಗೆ ಕಳುಹಿಸುತ್ತೇನೆ ಎಂದು ಹೇಳಿಕೊಂಡು ಬಂದಿದ್ದಾನೆ. ಆದರೆ ಹಜ್ ಯಾತ್ರೆಗೂ ಕಳಿಸದೆ ಹಣವನ್ನು ನೀಡದೆ ಸತಾಯಿಸುತ್ತಿದ್ದನು.
ಹಣ ಕೊಡದೆ ಓಡಾಡಿಕೊಂಡಿದ್ದವ ಶನಿವಾರ ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಬ್ದುಲ್ ನನ್ನು ವಿಚಾರ ಮಾಡಿದಾಗ ಹಣ ಇಲ್ಲ ಎಂಬ ವರಾತ ತೆಗೆದಿದಿದ್ದಾನೆ. ಒಬ್ಬರಿಂದ ತಲಾ 50 ಸಾವಿರದಂತೆ ಹಣ ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುವ ಅಬ್ದುಲ್ ಹಣ ವಾಪಸ್ ನೀಡುತ್ತೇನೆ ಎಂದು ಹೇಳಿದ್ದಾನೆ. ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲಾಗಿದೆ.