
ಬಳ್ಳಾರಿ (ನ. 27): ಆರೋಗ್ಯಕ್ಕೆ ಒಳ್ಳೆಯದು ಎಂದು ದಿನಾ ಹಣ್ಣು ತಿನ್ನುತ್ತೇವೆ. ಆದರೆ ಅದೇ ಹಣ್ಣು ಜೀವಕ್ಕೆ ಸಂಚಕಾರ ತಂದರೆ? ಹೌದು ಹಣ್ಣು ಮಗುವಿನ ಜೀವಕ್ಕೆ ಸಂಚಕಾರ ತಂದಿದೆ.
ಬಾರೆಹಣ್ಣು ಬೀಜ ಗಂಟಲಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೂಡ್ಲಿಗಿ ತಾಲೂಕಿನ ಬೀರಲಗುಡ್ಡದಲ್ಲಿ ನಡೆದಿದೆ. ಎರಡು ವರ್ಷದ ಪುಟಾಣಿ ಶರತ್ ಮೃತ ದುರ್ದೈವಿ. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ರವಾನಿಸಿದರೂ ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.