
ಮಂಡ್ಯ: ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಷಿಪ್ (ಎನ್‌ಎಂಎಂಎಸ್) ಪರೀಕ್ಷೆ ಯಲ್ಲಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢಶಾಲಾ ವಿಭಾಗ) ವಿ.ಸಿ.ಫಾರಂ, ಮಂಡ್ಯ, ಉತ್ತರ ವಲಯದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
2025-26ನೇ ಸಾಲಿನ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳ ಆಯ್ಕೆ ಮೂಲಕ ಶಾಲೆ ಗಮನ ಸೆಳೆದಿದೆ. ವಿದ್ಯಾರ್ಥಿನಿಯರಾದ ಪಿ.ಎಲ್.ಶೀಲಾ-96 , ಬಿ.ಅನುಷಾ -94 ಹಾಗೂ ತನುಶ್ರೀ -76 ಅಂಕಗಳನ್ನು ಪಡೆದು 2025-26ರ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಜಮೀನು ಪೋಡಿ ಮಾಡಿಕೊಡಲು ಲಂಚ ವಸೂಲಿ; ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಐ ಮಧುಸೂದನ್!
ಪ್ರೌಢಶಾಲೆ ಮಕ್ಕಳ ಪಾಲಿಗೆ ಎನ್‌ಎಂಎಂಎಸ್ ಪರೀಕ್ಷೆಯು ಯುಪಿಎಸ್‌ಸಿ ನಡೆಸುವ ಪರೀಕ್ಷೆ ಇದ್ದಂತೆಯೇ. ಇದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಶಿಷ್ಯವೇತನ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತದೆ. ಶಿಕ್ಷಕರ ಮಾರ್ಗದರ್ಶನ ಪ್ರಯತ್ನದಿಂದ ಸಾಧನೆ ಸಾಕಾರವಾಗಿರುವುದಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಹಿರಿಯ ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮುಖ್ಯಶಿಕ್ಷಕ ಪ್ರಸನ್ನ ತಿಳಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಶುಂಠಿ ಬೆಳೆಯಲು ಹೊರರಾಜ್ಯದವರಿಗೆ ಭೂಮಿ ಗುತ್ತಿಗೆ; ಉದ್ಯಮಿಗಳಿಂದ ಹಣದ ಆಮಿಷ