ಮಡಿಕೇರಿ ತಾಲೂಕಿನ ಎರಡನೇ ಅತಿ ದೊಡ್ಡ ಪಟ್ಟಣವಾದ ನಾಪೋಕ್ಲಿನಲ್ಲಿ ಬಸ್ ನಿಲ್ದಾಣವೇ ಇಲ್ಲ. ನಾಪೋಕ್ಲು ಮೂಲಕ ಸಂಚರಿಸುವ ಖಾಸಗಿ, ಸರ್ಕಾರಿ ಬಸ್‌ಗಳಿಗೆ ಪಟ್ಟಣದ ಮೂರು ರಸ್ತೆಗಳ ಸಂಗಮ ಸ್ಥಳವೇ ಬಸ್ ನಿಲ್ದಾಣವಾಗಿ ಮಾರ್ಪಟ್ಟಿದೆ. ಇದರಿಂದಾಗಿ ನಿತ್ಯವೂ ಪಟ್ಟಣದಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳು, ಪ್ರಯಾಣಿಕರು, ವಾಹನ ಸವಾರರು, ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಮಡಿಕೇರಿ(ನ.18): ಮಡಿಕೇರಿ ತಾಲೂಕಿನ ಎರಡನೇ ಅತಿ ದೊಡ್ಡ ಪಟ್ಟಣವಾದ ನಾಪೋಕ್ಲಿನಲ್ಲಿ ಬಸ್ ನಿಲ್ದಾಣವೇ ಇಲ್ಲ. ನಾಪೋಕ್ಲು ಮೂಲಕ ಸಂಚರಿಸುವ ಖಾಸಗಿ, ಸರ್ಕಾರಿ ಬಸ್‌ಗಳಿಗೆ ಪಟ್ಟಣದ ಮೂರು ರಸ್ತೆಗಳ ಸಂಗಮ ಸ್ಥಳವೇ ಬಸ್ ನಿಲ್ದಾಣವಾಗಿ ಮಾರ್ಪಟ್ಟಿದೆ. ಇದರಿಂದಾಗಿ ನಿತ್ಯವೂ ಪಟ್ಟಣದಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳು, ಪ್ರಯಾಣಿಕರು, ವಾಹನ ಸವಾರರು, ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಅದರಲ್ಲೂ ವಾರದ ಸಂತೆಯ ದಿನವಾದ ಸೋಮವಾರ ಗ್ರಾಮಸ್ಥರು, ಜನಸಾಮಾನ್ಯರಿಗೆ ಟ್ರಾಫಿಕ್ ಜಾಮ್‌ನಿಂದಾಗಿ ಮತ್ತಷ್ಟುಸಮಸ್ಯೆಯಾಗುತ್ತಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು, ಅದಕ್ಕೆ ತಕ್ಕುದಾಗಿ ಪಟ್ಟಣದ ರಸ್ತೆಗಳು ವಿಸ್ತರಣೆಯಾಗದಿರುವುದು ಟ್ರಾಫಿಕ್ ಕಿರಿಕಿರಿಗೆ ಮೂಲ ಕಾರಣ.
ಸಾವಿನ ಮನೆಮುಂದೆ ಮಸೀದಿ ಮೈಕ್ ಸೌಂಡ್ ಆಫ್, ಸೌಹಾರ್ದತೆ ಮೆರೆದ ಜನ
ಈಗಾಗಲೇ ಇಲ್ಲಿನ ಅಪ್ಪಚ್ಚಕವಿ ರಸ್ತೆ ಹಾಗೂ ಮಾರುಕಟ್ಟೆಬಳಿಯ ರಸ್ತೆ ವಿಸ್ತರಣೆಯಾಗಿದ್ದರೂ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಆಗಿಲ್ಲ. ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮುಖ್ಯರಸ್ತೆಯಲ್ಲಿ ಒಂದೇ ಸಲಕ್ಕೆ ಎರಡು ವಾಹನಗಳು ಮುಖಾಮುಖಿಯಾದರೆ ಪಾದಚಾರಿಗಳು ಎಲ್ಲಿ ಹೋಗುವುದೆಂದು ಗಲಿಬಿಲಿಗೊಳ್ಳುವಂತಾಗಿದೆ. ರಸ್ತೆ ಇಕ್ಕಟ್ಟಾಗಿರುವುದರಿಂದ ವಾಹನಗಳ ಸಂಚಾರ ಕಷ್ಟವಾಗಿದೆ. ಜೊತೆಗೆ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚಾರವೂ ದುಸ್ತರವಾಗಿದೆ. ಇನ್ನು ಮಾರುಕಟ್ಟೆಬಳಿಯ ರಸ್ತೆಯಂತೂ ತೀರಾ ಹದಗೆಟ್ಟಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತ ಸಂಚರಿಸುತ್ತಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷಗಾದಿ ಆಕಾಂಕ್ಷಿಗಳಿಗೆ ವಯೋಮಿತಿ ನಿಯಮ ಅಡ್ಡಿ!
ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು ವ್ಯಾಪಾರ ವಹಿವಾಟು ಅಧಿಕಗೊಳ್ಳುತ್ತಿರುವ ನಾಪೋಕ್ಲು ಪಟ್ಟಣದಲ್ಲಿ ರಸ್ತೆಯ ವಿಸ್ತರಣೆಗೆ ಮೊದಲ ಆದ್ಯತೆ ನೀಡುವಂತಾಗಬೇಕು. ಜೊತೆಗೆ ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕೆಂಬುದು ಇಲ್ಲಿನ ನಾಗರಿಕರ ಬಹುದಿನದ ಬೇಡಿಕೆ.
ನಾಪೋಕ್ಲು ಪಟ್ಟಣ ರಸ್ತೆ ತೀವ್ರ ಇಕ್ಕಟ್ಟಾಗಿರುವುದರಿಂದ ರಸ್ತೆ ಅಗಲೀಕರಣ ಮಾಡುವುದರಿಂದ ಅಥವಾ ಬಸ್ ನಿಲ್ದಾಣವನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರವಾಗಬಲ್ಲದು. ಈ ನಿಟ್ಟಿನಲ್ಲಿ ಪಂಚಾಯಿತಿ ಕಾರ್ಯಪ್ರವೃತ್ತರಾಗಬೇಕು ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದ್ದಾರೆ.
ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!
ಈ ಹಿಂದೆ ಜರುಗಿದ ಗ್ರಾಮಸಭೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ. ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನಾಪೋಕ್ಲು ಪಿಡಿಒ ಚಂದಕ್ಕಿ ಹೇಳಿದ್ದಾರೆ.
-ದುಗ್ಗಳ ಸದಾನಂದ